ಹಾರಾಡಿ: ಮಾ.8 ರಿಂದ 12 ರವರೆಗೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ರಥೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು

ಹಾರಾಡಿ: ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ರಥೋತ್ಸವವು ಮಾ.8 ರಿಂದ 12 ರವರೆಗೆ ನಡೆಯಲಿದ್ದು, ವಿವಿಧ ದಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಾ. 8 ರಂದು ಬೆಳಿಗ್ಗೆ ಧ್ವಜಾರೋಹಣ ಮತ್ತು ರಾತ್ರಿ ಶಿವರಾತ್ರಿಯ ಮಹಾರಂಗಪೂಜೆ ನಡೆಯಲಿದೆ. ಮಾ.9 ರಂದು ಬೆಳಿಗ್ಗೆ ದೇವತಾ ಕಾರ್ಯಕ್ರಮ ರಾತ್ರಿ ರಂಗಪೂಜೆ ನಡೆಯಲಿದೆ. ಮಾ.10 ರಂದು ಮಧ್ಯಾಹ್ನ 12 ರಿಂದ ಮಹಾ ಅನ್ನಸಂತರ್ಪಣೆ, ಸಂಜೆ 5 ಗಂಟೆಗೆ ಮನ್ಮಹಾರಥೋತ್ಸವ ಜರುಗಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ. ರಥೋತ್ಸವ ನಿಮಿತ್ತ ಭಜನಾ ಕಾರ್ಯಕ್ರಮಗಳು, […]
5,8,9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ 5,8,9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಗುರುವಾರ ಅನುಮತಿ ನೀಡಿದೆ. 5, 8, 9 ಮತ್ತು 11ನೇ ತರಗತಿಗೆ ಬೋರ್ಡ್ ಪರೀಕ್ಷೆಯನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ನಿಗದಿಯಂತೆ ಸೋಮವಾರದಿಂದ ಬೋರ್ಡ್ ಪರೀಕ್ಷೆಗಳು ನಡೆಯಲಿವೆ. 2023-24ನೇ ಸಾಲಿನಿಂದ […]
ಜೆಇಇ ಮೈನ್ಸ್ B.Arch ಪರೀಕ್ಷೆಯಲ್ಲಿ 99.744 ಪರ್ಸಂಟೈಲ್ ಫಲಿತಾಂಶದೊಂದಿಗೆ ಅಪ್ರತಿಮ ಸಾಧನೆ ಮೆರೆದ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನ ಅಲಕಾ ಹೆಬ್ಬಾರ್.

ಹೆಮ್ಮಾಡಿ: ರಾಷ್ಟ್ರ ಮಟ್ಟದಲ್ಲಿ ನಡೆದ ಜೆಇಇ ಮೈನ್ಸ್ B.Arch ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಲಕಾ ಹೆಬ್ಬಾರ್ 99.744 ಫಲಿತಾಂಶದೊಂದಿಗೆ ಅಗ್ರಗಣ್ಯ ಸಾಧನೆ ಮೆರೆದಿದ್ದಾಳೆ. ಕಾಲೇಜು ಪ್ರಾರಂಭದ ದ್ವಿತೀಯ ವರ್ಷದಲ್ಲೇ ಅಪ್ರತಿಮ ಸಾಧನೆ ಮೆರೆದ ವಿದ್ಯಾರ್ಥಿನಿ ಇವಳಾಗಿದ್ದು, ಗ್ರಾಮೀಣ ಭಾಗದ ಪರಿಸರದಲ್ಲಿ ಆರಂಭಗೊಂಡಿರುವ ಶಿಕ್ಷಣ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡುತ್ತಾ ಉತ್ತಮ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರಕಟ: ‘ನಿರ್ವಾಣ’ ಅತ್ಯುತ್ತಮ ಚಿತ್ರ, ಸ್ವಾತಿ ಮುತ್ತಿನ ಮಳೆ ಹನಿಗೆ ನೆಟ್‌ಪ್ಯಾಕ್ ಪ್ರಶಸ್ತಿ

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ಕನ್ನಡ ಚಲನಚಿತ್ರ ಸ್ಪರ್ಧೆಯಲ್ಲಿ ಮಂಜು ಅವಿನಾಶ್ ಶೆಟ್ಟಿ ನಿರ್ದೇಶನದ ನಿರ್ವಾಣ ಮೊದಲ ಅತ್ಯುತ್ತಮ ಚಿತ್ರ ಅನ್ನೋ ಪ್ರಶಸ್ತಿ ಗೆದ್ದುಕೊಂಡಿದೆ. ಇನ್ನು ನಟಿ ರಮ್ಯಾ ನಿರ್ಮಾಣ ಹಾಗೂ ರಾಜ್ ಬಿ ಶೆಟ್ಟಿ ನಿರ್ದೇಶನದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ನೆಟ್‌ಪ್ಯಾಕ್ ತೀರ್ಪುಗಾರರ ಪ್ರಶಸ್ತಿ ಗೆದ್ದುಕೊಂಡಿದೆ. ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಚಿತ್ರ ನಿರ್ದೇಶಕ, ಕಲಾ ನಿರ್ದೇಶಕ ಎಂಎಸ್ ಸತ್ಯೂ ಭಾಜನರಾಗಿದ್ದಾರೆ. ಜೀವನ ಸಾಧನೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ :ಎಂ ಎಸ್ […]
ಬೈಲೂರು: ಶ್ರೀ ಆದಿಶಕ್ತಿ ಕಾಳಿಕಾಂಭ ಭಜನಾ ಮಂಡಳಿ ಯರ್ಲಪಾಡಿ: ಇಂದು ಮಹಾಶಿವರಾತ್ರಿ ಪ್ರಯುಕ್ತ ಭಜನಾ ಮಂಗಲೋತ್ಸವ.

ಬೈಲೂರು: ಮಹಾಶಿವರಾತ್ರಿ ಪ್ರಯುಕ್ತ ಕಾರ್ಕಳ ಬೈಲೂರು ಯರ್ಲಪಾಡಿ ಕೆಳಗಿನಮನೆ ಶ್ರೀ ಆದಿಶಕ್ತಿ ಕಾಳಿಕಾಂಭ ಭಜನಾ ಮಂಡಳಿ, ಇಲ್ಲಿ 16ನೇ ವರ್ಷದ ಭಜನಾ ಮಂಗಲೋತ್ಸವವು ಮಾ.8 ಶುಕ್ರವಾರ ಸಂಜೆ ಗಂಟೆ 6 ರಿಂದ ಮಾ.9 ಶನಿವಾರ ಬೆಳಗ್ಗೆ ಗಂಟೆ 6ರ ವರೆಗೆ ನಡೆಯಲಿದೆ.