ಕುಂದಾಪುರ: ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿ ಹರ್ಷಿತ್ ರಾಜ್ಯಮಟ್ಟಕ್ಕೆ ಆಯ್ಕೆ.

ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ ವಿಭಾಗ ) ಮತ್ತು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಉಡುಪಿ ಇವರ ಸಹಭಾಗಿತ್ವದಲ್ಲಿ ಅಕ್ಟೋಬರ್ 3 ರಂದು ನಡೆದ ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹರ್ಷಿತ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿಯ ಸಾಧನೆ ರಾಜ್ಯ ಮಟ್ಟದಲ್ಲಿ ರಾರಾಜಿಸಲಿ ಎಂದು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ – ಬೋಧಕೇತರ ಸಿಬ್ಬಂದಿ ಶುಭ ಹಾರೈಸಿದ್ದಾರೆ.

ಹೆಜಮಾಡಿ: ಸಂಚರಿಸುತ್ತಿದ್ದ ಬಸ್ಸಿನಲ್ಲಿ ಬೆಂಕಿ; ತಪ್ಪಿದ ಭಾರೀ ದುರಂತ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಗೇಟ್ ಬಳಿ ಶುಕ್ರವಾರ ರಾತ್ರಿ ತಡೆ ರಹಿತ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಟೋಲ್ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸೇರಿ ಬೆಂಕಿ ನಂದಿಸಲು ಯತ್ನಿಸಿದರು. ಬಳಿಕ ಅದಾನಿ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಮೂಲಕ ಭಾರೀ ಅವಘಡ ತಪ್ಪಿಸಿದಂತಾಗಿದೆ. ಉಡುಪಿ ಕಡೆಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಮಂಜುನಾಥ ಹೆಸರಿನ ಖಾಸಗಿ ಬಸ್ಸಿನಲ್ಲಿ ಹೆಜಮಾಡಿಯ ಕಿರು ಟೋಲ್ ಗೇಟ್ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಚಾಲಕನ ಗಮನಕ್ಕೆ ಬಂದು ಬಸ್ ನಿಲ್ಲಿಸಿ […]

ಕೊಕ್ಕರ್ಣೆಯ ಸತ್ಯನಾಥ್ ಸ್ಟೋರ್ಸ್ ನಲ್ಲಿ ಅ.9ರಂದು ನೂತನ ಶಾಖೆಯ ಶುಭಾರಂಭ

ಕೊಕ್ಕರ್ಣೆ:ಅ.09 ರಂದು ಕೊಕ್ಕರ್ಣೆಯಲ್ಲಿ ಸತ್ಯನಾಥ್ ಸ್ಟೋರ್ಸ್ ನ ನೂತನ ಶಾಖೆ ಶುಭಾರಂಭಗೊಳ್ಳಲಿದ್ದು ಬುಧವಾರ ಪೂರ್ವಾಹ್ನ ಗಂಟೆ 9.00ಕ್ಕೆ ಸರಿಯಾಗಿ ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ದೊಡ್ಡಣ್ಣ ಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಶರನ್ನವರಾತ್ರಿ ಮಹೋತ್ಸವ:18ರ ಸಂಭ್ರಮ

ಉಡುಪಿ:ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ 18ನೇ ವರ್ಷದ ಶರನ್ನವರಾತ್ರಿ ಮಹೋತ್ಸವವನ್ನು ಬಹು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಶ್ರೀ ಕ್ಷೇತ್ರವನ್ನು ಶೂನ್ಯದಿಂದ ಅನಂತದೆಡೆಗೆ ಕೊಂಡೊಯ್ಯುತ್ತಿರುವ ಶ್ರೀ ಗುರೂಜಿಯವರು ಆತ್ಮಸ್ಥೈರ್ಯದ ಪ್ರತೀಕ ಕ್ಷೇತ್ರದ ನಡೆದಾಡುವ ದೇವರಾದ ಶ್ರೀ ಗುರೂಜಿಯವರನ್ನು ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಶ್ರೀ ರಮಾನಂದ ಗುರೂಜಿ ಶಿಷ್ಯ ಬಳಗ ಆಯೋಜಿಸಿದ ವಿಶೇಷ ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.. ರಾತ್ರಿಯ ರಂಗ ಪೂಜಾ ಸಹಿತ ಕಲ್ಪೋಕ್ತ ಪೂಜೆಯ ನಂತರ ಶ್ರೀ ಕ್ಷೇತ್ರದಿಂದ […]

ಬೆಳ್ತಂಗಡಿ: ಗೆಲ್ಲು ಕಡಿಯುತ್ತಿದ್ದ ವೇಳೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು.

ಬೆಳ್ತಂಗಡಿ: ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಪುದುವೆಟ್ಟು ಗ್ರಾಮದ ಮಿರ್ಯಾ ಬಳಿ ಅ. 4ರಂದು ನಡೆದಿದೆ. ಮೃತ ವ್ಯಕ್ತಿಯನ್ನು ಶಿಶಿಲದ ಕಾರೆಗುಡ್ಡೆ ನಿವಾಸಿ ಪ್ರವೀಣ್‌ (35) ಎಂದು ಗುರುತಿಸಲಾಗಿದೆ. ಮಿಯಾರ್‌ ಸಮೀಪ ಕೂಲಿ ಕೆಲಸಕ್ಕೆಂದು ಆಗಮಿಸಿದ್ದ ಅವರು ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಮರದಲ್ಲೇ ಅಸ್ವಸ್ಥಗೊಂಡು ಕೆಳಗೆ ಬಿದ್ದಿದ್ದಾರೆ. ತತ್‌ಕ್ಷಣ ಸ್ಥಳದಲ್ಲಿದ್ದವರು ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತ […]