ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ

278 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಮುಳುಗಿ ಕನಿಷ್ಠ 78 ಜನರು ನೀರು ಪಾಲಾಗಿರುವ ಅವಘಡ ಆಫ್ರಿಕನ್ ರಾಷ್ಟ್ರ ಪೂರ್ವ ಕಾಂಗೋದ ಕಿವು ಸರೋವರದಲ್ಲಿ ಗುರುವಾರ ನಡೆದಿದೆ. ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಘಟನೆಯು ಗೋವಾ ಕಡಲ ತೀರದಲ್ಲಿ ನಡೆದಿದೆ ಎಂದು ಹೇಳಿಕೊಳ್ಳಲಾಗಿದೆ. ಅನೇಕರು ಅದನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಾಮರ್ಥ್ಯ ಮೀರಿದ ಜನರನ್ನು ತುಂಬಿದ್ದ ಹಡಗು ಶಾಂತ ನೀರಿನಲ್ಲಿ ಮುಳುಗುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನೂ ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಮತ್ತು ಪ್ರಾದೇಶಿಕ ಅಧಿಕಾರಿಗಳು ವ್ಯತಿರಿಕ್ತ […]
ಉಡುಪಿ:ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ: ಅಕೌಂಟೆಂಟ್ ಹಾಗೂ ಗ್ರಾಫಿಕ್ ಡಿಸೈನರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಆಸಕ್ತರು ಸಂಪರ್ಕಿಸಬಹುದು.9353011492
ಉಡುಪಿ: ಇಂದ್ರಾಳಿ ಶ್ರೀಧರ್ ಭಟ್ ನಿಧನ.

ಉಡುಪಿ: ಇಂದ್ರಾಳಿ ಶ್ರೀಧರ್ ಭಟ್(66ವ.) ಇವರು ಅಲ್ಪ ಕಾಲದ ಅನಾರೋಗ್ಯದಿಂದಾಗಿ ಅ.5 ರಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಇವರು ಹಲವಾರು ದೇವಾಲಯಗಳಲ್ಲಿ ಬ್ರಹ್ಮವಾಹಕರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಇಂದ್ರಾಳಿ ದೇವಸ್ಥಾನದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಇಂದ್ರಾಳಿ ಪರಿಸರದಲ್ಲಿ ಜನಾನುರಾಗಿಯಾಗಿದ್ದು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಇವರು ಪತ್ನಿ, ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಭಾರತ್ ಸ್ಕೌಟ್ & ಗೈಡ್ಸ್ ನಾ ಉಡುಪಿ ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ ಶೆಟ್ಟಿ ಸಂತಾಪ ವ್ತಕ್ತ ಪಡಿಸಿದ್ದಾರೆ.
ಉಡುಪಿ ತುಲಾಭಾರ ಸೇವೆಗೆ ಚಾಲನೆ: ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

ಉಡುಪಿ:ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಸಂಪನ್ನಗೊಳ್ಳುತ್ತಿರುವ ಶರನ್ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ದೀಪ ಬೆಳಗಿಸಿ ಚಾಲನೆ ನೀಡಿದರು.. ಗತಕಾಲದ ಕ್ಷೇತ್ರ ಇತಿಹಾಸ ತಿಳಿಸುವಂತೆ ನಾಟ್ಯರಾಣಿ ಗಂಧರ್ವ ಕನ್ಯೆ ದೇವಿಯಿಂದ ಅನುಗ್ರಹಿತಳಾದ ತಾಣದಲ್ಲಿ ಕಲಾವಿದರಿಗೆ ವಿಶೇಷವಾಗಿ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಪ್ರತೀತಿ ಇರುವ ಹಿನ್ನಲೆಯಲ್ಲಿ ಅನೇಕ ಕಲಾವಿದರು ತಮ್ಮ ಕಲಾ ಕಾಣಿಕೆಯನ್ನು […]
ಯುಪಿಎಂಸಿ – ವಾಣಿಜ್ಯ ಸಂಘದ ವತಿಯಿಂದ ಪೂರೈಕೆದಾರರ ಸಂಬಂಧ ನಿರ್ವಹಣೆ -ವಿಶೇಷ ಮಾಹಿತಿ ಕಾರ್ಯಾಗಾರ

ಉಡುಪಿ:ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಸಂಘದ ವತಿಯಿಂದ ಪೂರೈಕೆದಾರ ಸಂಬಂಧ ನಿರ್ವಹಣೆ (SRM) ವಿಚಾರವಾಗಿ ಮಾಹಿತಿ ಕಾರ್ಯಗಾರ ನಡೆಯಿತು. ಕಾಲೇಜಿನ ಹಳೆ ವಿದ್ಯಾರ್ಥಿನಿ ಹಾಗು ಪ್ರಸ್ತುತ ಅದ್ವೈತ್ ಐ ಟೆಕ್ ನ ಸಹ ಉಪಾಧ್ಯಕ್ಷರಾದ ಶಾಂಭವಿ ಭಂಡಾರ್ಕರ್ ಮಾತನಾಡಿ ಪ್ರಸ್ತುತ ಕಾಲ ಘಟ್ಟದ ಪೂರೈಕೆದಾರರ ಆಧ್ಯತೆ ಮತ್ತು ಕರ್ತವ್ಯದ ಬಗ್ಗೆ ಹಾಗು ವಸ್ತುಗಳ ಗುಣಮಟ್ಟ ಮತ್ತು ಬೆಲೆಯ ಬಗ್ಗೆ ಈಗಿರುವ ಪೈಪೋಟಿಗಳ ಬಗೆಗೆ ಮಾಹಿತಿ ನೀಡಿದರು. ಕಾಲೇಜಿನ ವಾಣಿಜ್ಯ ಸಂಘದ […]