ಉಡುಪಿ ಜಿಲ್ಲಾ ಆಸ್ಪತ್ರೆಯ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ಮನವಿ

ಉಡುಪಿ: ಕಳೆದ ಹಲವು ತಿಂಗಳಿನಿಂದ ಉಡುಪಿ ಜಿಲ್ಲಾಸ್ಪತ್ರೆ ಯಲ್ಲಿ ಪೂರ್ಣ ಕಾಲಿಕ ಸರ್ಜನ್ ನಿಯುಕ್ತಿ ಇಲ್ಲದ ಕಾರಣ ಆಸ್ಪತ್ರೆಯಲ್ಲಿ ಸಾಕಷ್ಟು ಅವ್ಯವಸ್ಥೆ ಇದ್ದು ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದರು. ಈ ನಿಟ್ಟಿನಲ್ಲಿ ಈ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಪರಿಹರಿಸಿ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುವಂತೆ ಉಡುಪಿ ಶಾಸಕರಾದ ಯಶಪಾಲ್ ಸುವರ್ಣ ಹಾಗೂ ಉಡುಪಿ ಜಿಲ್ಲಾಸ್ಪತ್ರೆ ಗೆ ನೂತನವಾಗಿ ನಿಯುಕ್ತಿಗೊಂಡ ಜಿಲ್ಲಾ ಸರ್ಜನ್ ಡಾ. ಅಶೋಕ್ ಎಚ್. ಅವರಿಗೆ ಮನವಿ ಸಲ್ಲಿಸಲಾಯಿತು. ಆಯುಷ್ಮಾನ್ […]

ಮಂಗಳೂರು: ಮಾ.24ರಂದು ಸಂಗೀತ ಭಾರತಿ ಪ್ರತಿಷ್ಠಾನ ಪ್ರಸ್ತುತ ಪಡಿಸುವ ಉತ್ಕೃಷ್ಟ ಮಟ್ಟದ ‘ಸ್ತ್ರೀ ಶಕ್ತಿ’ ಪರಿಕಲ್ಪನೆಯ ವಿನೂತನ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಮಂಗಳೂರು: ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನದ ಆಶ್ರಯದಲ್ಲಿ ‘ಸ್ತ್ರೀ ಶಕ್ತಿ’ ಎಂಬ ಪರಿಕಲ್ಪನೆಯಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಮಾರ್ಚ್ 24 ರಂದು ಭಾನುವಾರ ಸಂಜೆ 5.30ಕ್ಕೆ ನಗರದ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ರವೀಂದ್ರ ಕಲಾ ಭವನದಲ್ಲಿ ನಡೆಯಲಿದೆ. ಉತ್ಕೃಷ್ಟ ಮಟ್ಟದ ಶಾಸ್ತ್ರೀಯ ಗಾಯನ ಮತ್ತು ‘ಸಿತಾರ್- ಸಂತೂರ್’ ಜುಗಲ್‍ಬಂಧಿ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇದ್ದು, ಸಂಗೀತಪ್ರಿಯರಿಗೆ ಇದೊಂದು ಸಂಗೀತದ ರಸದೌತಣವಾಗಲಿದೆ. ಪೂರ್ವಾರ್ಧದಲ್ಲಿ ಬೆಂಗಳೂರಿನ ಶ್ರೀಲಕ್ಷ್ಮಿ ಬೆಳ್ಮಣ್ಣು ಇವರು‘ಶಾಸ್ತ್ರೀಯ ಗಾಯನ’ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು ಇದಕ್ಕೆ ಹಾರ್ಮೋನಿಯಂನಲ್ಲಿ ಬೆಂಗಳೂರಿನ […]

ವೈಭವದಿಂದ ವೈಭವದ ಹಸಿರು ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಜನಸಾಗರ

ಮಲ್ಪೆ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಪ್ರತಿಷ್ಟಾ ಬ್ರಹ್ಮಕಲಶ: ಮಲ್ಪೆ: ಇಲ್ಲಿನ ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಮಾ.19ರಿಂದ 29ರವರೆಗೆ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳವಾರ ಸಂಜೆ 4ರಿಂದ ಹಸಿರು ಹೊರೆ ಕಾಣಿಕೆ ಮೆರವಣಿಗೆಯು ಕೊಡವೂರು ಶಂಕರನಾರಾಯಣ ದೇವಸ್ಥಾನದಿಂದ ಆರಂಭಗೊಂಡು ವಡಭಾಂಡ ಬಲರಾಮ ದೇವಸ್ಥಾನಕ್ಕೆ ಬಹಳ ವೈಭವಯುತವಾಗಿ ಸಾಗಿ ಬಂತು. ಭಕ್ತವೃಂದ ವಡಭಾಂಡೇಶ್ವರ ವತಿಯಿಂದ ರಜತ ದೇವರಿಗೆ ರಜತ ಪ್ರಭಾವಳಿ, ಪಾಣಿಪೀಠ ಹಾಗೂ ಗರ್ಭಗುಡಿ ದ್ವಾರ ಬಾಗಿಲಿಗೆ ರಜತ ಕವಚವನ್ನು ಕೊಡುಗೆಯಾಗಿ ನೀಡಿದ್ದಾರೆ. […]

ಹೆಬ್ರಿ: ಯುವಕ ನೇಣು ಬಿಗಿದು ಆತ್ಮಹತ್ಯೆ..

ಹೆಬ್ರಿ: ಮಾನಸಿಕ ಖಿನ್ನತೆಗೆ ಒಳಗಾಗಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯಗೆ ಶರಣಾದ ಘಟನೆ ಮಾ. 16ರಂದು ಹೆಬ್ರಿಯಲ್ಲಿ ಸಂಭವಿಸಿದೆ. ಬಿಹಾರ ಮೂಲದ ಆಶಾದ್‌ ದಿಲ್ಶಾದ್‌ (22) ನೇಣಿಗೆ ಶರಣಾದ ಯುವಕ. ಆಶಾದ್‌ ದಿಲ್ಶಾದ್‌ ಹೆಬ್ರಿಯಲ್ಲಿ ಬಾಡಿಗೆ ರೂಮ್‌ನಲ್ಲಿ ವಾಸವಿದ್ದು ರೂಮಿನ ಒಳಗೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವುದೋ ವಿಚಾರದಲ್ಲಿ‌ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

🔸️ಪೆರ್ಣಂಕಿಲ ಬ್ರಹ್ಮಕಲಶೋತ್ಸವದ ಭವ್ಯವಾದ ಹೊರೆಕಾಣಿಕೆ ಮೆರವಣಿಗೆ

ಉಡುಪಿ: ಊರವರೆಲ್ಲರೂ ಸೇರಿ ನಡೆಸುವ ದೇವತಾ ಸೇವೆಯಿಂದ ಊರು ಸುಭಿಕ್ಷವಾಗುತ್ತದೆ, ಈ ಮೂಲಕ ದೇಶ ಸುಭಿಕ್ಷವಾಗುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ಶ್ರೀ ಕ್ಷೇತ್ರ ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ – ಶ್ರೀ ಮಹಾಗಣಪತಿ ದೇವರ ನೂತನ ದೇವಳದ ಸಮರ್ಪಣೆ, ಪುನಃಪ್ರತಿಷ್ಠೆ, ಸಹಸ್ರಕಲಶ ಬ್ರಹ್ಮಕುಂಭಾಭಿಷೇಕಕ್ಕೆ ಪೂರ್ವಬಾವಿಯಾಗಿ ನಡೆದ ಹೊರೆಕಾಣಿಕೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಊರವರು ನಡೆಸಿದ ಈ ಭವ್ಯ ಹೊರೆಕಾಣಿಕೆ ಮೆರವಣಿಗೆಯನ್ನು ನೋಡಿದಾಗ ಅವರ ಭಕ್ತಿಶ್ರದ್ಧೆಗಳು ಕಾಣುತ್ತಿವೆ. ಅನ್ನದಾನಕ್ಕೆ ಪೂರಕವಾಗಿ ನಡೆದ […]