ಉಡುಪಿ: ಷೇರು ಮಾರುಕಟ್ಟೆ ಟ್ರೇಡಿಂಗ್ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು

ಉಡುಪಿ: ಷೇರು ಮಾರುಕಟ್ಟೆ ಟ್ರೇಡಿಂಗ್ ಹೆಸರಿನಲ್ಲಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಬ್ದುಲ್ ರಫಿಯತ್ ಎಂಬವರಿಗೆ ದುಷ್ಕರ್ಮಿಗಳು ಷೇರು ಮಾರುಕಟ್ಟೆ ಟ್ರೇಡಿಂಗ್ ಬಗ್ಗೆ ವಾಟ್ಸಾಪ್‌ನಲ್ಲಿ ಮಾಹಿತಿಯನ್ನು ನೀಡುತ್ತಿದ್ದು, ಇದರಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿಗೆ ಹಣ ನೀಡುವುದಾಗಿ ತಿಳಿಸಿದ್ದರು. ಅದರಂತೆ ರಫಿಯತ್ ಅವರಿಂದ ದುಷ್ಕರ್ಮಿಗಳು ಒಟ್ಟು 16,78,500ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವುದಾಗಿ ದೂರಲಾಗಿದೆ.

ಜಾತಿಗಣತಿ ವರದಿ ಓದದೇ ವಿರೋಧ ಮಾಡಬೇಡಿ: ಕೆ. ಜಯಪ್ರಕಾಶ್ ಹೆಗ್ಡೆ

ಉಡುಪಿ: ಜಾತಿಗಣತಿ ವರದಿ ಓದದೇ ವಿರೋಧ ಮಾಡಬೇಡಿ. ವರದಿ ಓದಿದ ಬಳಿಕ ಬದಲಾವಣೆಗಳಿದ್ದರೆ ಸೂಚಿಸಿ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.ಜಾತಿಗಣತಿ ವರದಿ ಜಾರಿ ವಿಚಾರದ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಫೆಬ್ರವರಿ 29ಕ್ಕೆ ಅಧ್ಯಕ್ಷನಾಗಿ ನನ್ನ ಅವಧಿಯ ಕೊನೆಯ ದಿನವಾಗಿತ್ತು. ಅದೇ ದಿನ ಮುಖ್ಯಮಂತ್ರಿಗಳಿಗೆ ವರದಿ ಹಸ್ತಾಂತರಿಸಿದ್ದೇನೆ. ವರದಿ ಬಹಿರಂಗ ಮಾಡುವಂತೆ ಇಷ್ಟರವರೆಗೆ ನಾವು ಒತ್ತಡ ಹಾಕುತ್ತಿದ್ದೆವು. ಈಗ ಹಿಂದುಳಿದ ವರ್ಗದವರು ಒತ್ತಡ ಹಾಕುತ್ತಿದ್ದಾರೆ. ಮೊನ್ನೆ ಮುಖ್ಯಮಂತ್ರಿಗಳು […]

ಉಡುಪಿ: ಹೊಟ್ಟೆ ನೋವಿನಿಂದ ಬಾಲಕಿ ಮೃತ್ಯು.

ಉಡುಪಿ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ 76 ಬಡಗುಬೆಟ್ಟು ಗ್ರಾಮದ ಎಲ್ಲಪ್ಪಎಂಬವರ ಮಗಳು ಅಶ್ವಿನಿ(8) ಎಂಬಾಕೆ ಅ.9ರಂದು ಬೆಳಗ್ಗೆ ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಬರುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ratan Tata: ಸಾಕು ನಾಯಿಗೋಸ್ಕರ ಬ್ರಿಟನ್ ರಾಜಮನೆತನದ ಪ್ರತಿಷ್ಠಿತ ಪ್ರಶಸ್ತಿ ತಿರಸ್ಕರಿಸಿದ್ದ ರತನ್ ಟಾಟಾ

ದೇಶದ ಪ್ರತಿಷ್ಠಿತ ಕೈಗಾರಿಕೋದ್ಯಮಿ ರತನ್ ಟಾಟಾ(Ratan Tata) ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಉದ್ಯಮದ ಜತೆಗೆ ಪ್ರಾಣಿ ಪ್ರಿಯರು ಹೌದು. ಬ್ರಿಟನ್​ನ ರಾಜಮನೆತನ ನೀಡುವ ಪ್ರತಿಷ್ಠಿತ ಪ್ರಶಸ್ತಿಯನ್ನು ಅಂದು ತಮ್ಮ ಸಾಕು ನಾಯಿಗೋಸ್ಕರ ತಿರಸ್ಕರಿಸಿದ್ದರು. ಆ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ. ದೇಶದ ಪ್ರತಿಷ್ಠಿತ ಕೈಗಾರಿಕೋದ್ಯಮಿ ರತನ್ ಟಾಟಾ(Ratan Tata) ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಉದ್ಯಮದ ಜತೆಗೆ ಪ್ರಾಣಿ ಪ್ರಿಯರು ಹೌದು. ಬ್ರಿಟನ್​ನ ರಾಜಮನೆತನ ನೀಡುವ ಪ್ರತಿಷ್ಠಿತ ಪ್ರಶಸ್ತಿಯನ್ನು ಅಂದು ತಮ್ಮ ಸಾಕು ನಾಯಿಗೋಸ್ಕರ ತಿರಸ್ಕರಿಸಿದ್ದರು. ಆ ಕುರಿತ […]

ಮಂಗಳೂರು: ವಿ ಕೆ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್’ನಲ್ಲಿ “ವಿಕೆ ಉತ್ಸವ 2024” ಆರಂಭ.

ಮಂಗಳೂರು: ಅಕ್ಟೋಬರ್ 3ರಂದು, ವಿ ಕೆ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಯೇಯಾಡಿ ಶೋರೂಮ್‌ನಲ್ಲಿ “ವಿಕೆ ಉತ್ಸವ 2024” ಅನ್ನು ಉದ್ಘಾಟಿಸಿದೆ. ಮುಂದಿನ ಮೂರು ತಿಂಗಳುಗಳ ಕಾಲ ನಡೆಯಲಿರುವ ಈ ಉತ್ಸವವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಿಟ್ಟಲ್ ಕುಲಾಲ್ ಮತ್ತು ಅವರ ಪತ್ನಿ ವಿನುತಾ ಕುಲಾಲ್, ಸಿಬ್ಬಂದಿ ಮನೀಶ್, ಸಂತೋಷ್, ಸಂದೀಪ್, ಗಿರೀಶ್, ರೂಬನ್ ಅವರ ಸಮ್ಮುಖದಲ್ಲಿ ಉದ್ಘಾಟಿಸಿದರು. ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಈ ಉತ್ಸವ ಯೇಯಾಡಿ, ಕಲ್ಲಪ್ಪು-ತೊಕ್ಕೊಟ್ಟು, ವಾಮಂಜೂರು, ಮತ್ತು ಲೇಡಿ ಹಿಲ್ […]