ಕೊಕ್ಕರ್ಣೆಯ ಸತ್ಯನಾಥ ಸ್ಟೋರ್ಸ್’ನ ನೂತನ ಶಾಖೆಗೆ ಸಂಸದ ಕೋಟ, ಶಾಸಕ ಯಶ್ ಪಾಲ್ ಭೇಟಿ

ಉಡುಪಿ: ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಮುಖ್ಯರಸ್ತೆಯ ಓಂಶ್ರೀ ಸಂಕೀರ್ಣದಲ್ಲಿ ಆರಂಭಗೊಂಡ ‘ಸತ್ಯನಾಥ ಸ್ಟೋರ್ಸ್’ನ ನೂತನ ಶಾಖೆ “ಶ್ರೀರಾಮ್ ಟೆಕ್ಸ್‌ ಟೈಲ್ಸ್” ಮಳಿಗೆಗೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭೇಟಿ ನೀಡಿ, ಶುಭಹಾರೈಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಕೋಟ ಶ್ರೀನಿವಾಸ ಪೂಜಾರಿ‌ ಹಾಗೂ ಯಶ್ ಪಾಲ್ ಸುವರ್ಣರನ್ನು ಗೌರವಿಸಲಾಯಿತು.ಸಂಸ್ಥೆಯ ಪಾಲುದಾರರಾದ ಬಿ. ಸತ್ಯನಾಥ ಪುರುಷೋತ್ತಮ ಪೈ, ಬಿ. ಗಿರಿಧರ ಸತ್ಯನಾಥ ಪೈ, ಸ್ಮಿತಾ ಆರ್. ನಾಯಕ್, ಓಂಶ್ರೀ ರಾಘವೇಂದ್ರ […]

ವಾಯುಭಾರ ಕುಸಿತ ಹಿನ್ನೆಲೆ ಮುಂದಿನ 6 ದಿನ ರಾಜ್ಯಾದ್ಯಂತ ಭಾರೀ ಮಳೆ..!

ಬೆಂಗಳೂರು: ಕರ್ನಾಟಕ, ಗೋವಾ, ಕರಾವಳಿ ಪ್ರದೇಶದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದಲ್ಲಿ ಮುಂದಿನ 6 ದಿನಗಳವರೆಗೆ ರಾಜ್ಯಾದ್ಯಂತ ಎಲ್ಲೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದಲ್ಲಿ ಆಕ್ಟೊಬರ್ 11 ರಿಂದ 14 ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ಹಾವೇರಿ, ಗದಗ, ಚಿತ್ರದುರ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಹಾವೇರಿ, ಗದಗ ದಾವಣಗೆರೆ, ಬಳ್ಳಾರಿ, ರಾಮನಗರದಲ್ಲಿ ಭಾರೀ ಮಳೆಯಾಗಲಿದೆ. ಇನ್ನು ದಕ್ಷಿಣ ಭಾಗದ ಕೆಲವು ಜಿಲ್ಲೆಗಳಲ್ಲಿ ಅಕ್ಟೊಬರ್ […]

ಮಲ್ಪೆಯಲ್ಲಿ 9 ಮಂದಿ ಬಾಂಗ್ಲಾದೇಶಿಯರು ಪೊಲೀಸರ ವಶಕ್ಕೆ

ಉಡುಪಿ: ಮೀನುಗಾರಿಕಾ ಕಾರ್ಮಿಕರಾಗಿ ಉದ್ಯೋಗ ಆರಿಸಿಕೊಂಡು ಬಂದ ಒಂಬತ್ತು ಮಂದಿ ಬಾಂಗ್ಲಾದೇಶಿಯರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಉಡುಪಿಯ ಮಲ್ಪೆ ವಡಬಾಂಡೇಶ್ವರ ಬಸ್‌ ನಿಲ್ದಾಣ ಬಳಿ ನಡೆದಿದೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಲು ಪ್ರಯತ್ನಿಸಿದ್ದ ಮಹಮ್ಮದ್ ಮಾಣಿಕ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಮಲ್ಪೆಯಲ್ಲಿ ಇರುವವರ ಬಗ್ಗೆ ಮಾಹಿತಿ ನೀಡಿದ್ದನು. ಬಾಂಗ್ಲಾದೇಶದ ಇಮಿಗ್ರಷನ್ ಅಧಿಕಾರಿಗಳ ಪರಿಶೀಲನೆ ವೇಳೆ ಈತ ಬಾಂಗ್ಲಾದೇಶದ ಮಾಣಿಕ್ ಚೌಕ್ ರಾಜಶಾಹಿ ಎಂದು ತಿಳಿದುಬಂದಿದೆ. ಈತನ ವಿಚಾರಣೆ ವೇಳೆ ಹಲವರು ಮಲ್ಪೆಯಲ್ಲಿರುವುದು […]

ಉಡುಪಿ: ರೇಣುಕಾ ಸ್ವಾಮಿ ಹಾಗೂ ಯಮರಾಜನ ವೇಷ ವೈರಲ್

ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ನವರಾತ್ರಿಯ ಹಿನ್ನೆಲೆಯಲ್ಲಿ ವೇಷಧಾರಿಗಳಿಬ್ಬರು ರೇಣುಕಾ ಸ್ವಾಮಿ ಹಾಗೂ ಯಮರಾಜನ ವೇಷಧರಿಸಿದ್ದು, ಇದೀಗ ಈ ವೇಷ ಸಾಮಾಜಿಕ ಜಾಲತಾಣದಲ್ಲಿ ಭಾರೀ‌ ವೈರಲ್ ಆಗಿದೆ.ವಿಡಿಯೋ ತುಣುಕಿನಲ್ಲಿ ರೇಣುಕಾ ಸ್ವಾಮಿ ಹಾಗೂ ಯಮರಾಜನ ವೇಷ ಧರಿಸಿದ ವೇಷಧಾರಿಗಳು ತುಳುವಿನಲ್ಲಿ ಮಾತನಾಡುವುದನ್ನು ನಾವಿಲ್ಲಿ ಕಾಣಬಹುದು. ಉಡುಪಿ ಭಾಗದಲ್ಲಿ ನವರಾತ್ರಿಯ ಸಂದರ್ಭ ವೇಷ ಧರಿಸಿ ಮನೆ ಮನೆಗೆ ತೆರಳುವ ಸಂಪ್ರದಾಯವಿದೆ. ಪ್ರತಿ ವರ್ಷವೂ ವಿಭಿನ್ನ ಮತ್ತು ವಿಶೇಷವಾಗಿರುವ ವೇಷಗಳೊಂದಿಗೆ ಮನೆಮನೆಗೆ ವೇಷಧಾರಿಗಳು ಬರುತ್ತಾರೆ. ಹಾಗೆಯೇ ಪ್ರಸ್ತುತ […]

ಈಸಿಲೈಫ್ ಎಂಟರ್ಪ್ರೈಸಸ್ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಕೇಂದ್ರದ ಸ್ಥಳಾಂತರ ಹಾಗೂ ಉದ್ಘಾಟನಾ ಸಮಾರಂಭ

ಉಡುಪಿ:ಈಸೀ ಲೈಫ್ ಎಂಟರ್ಪ್ರೈಸಸ್ ನ ಉಡುಪಿ ಶಾಖೆಯು ನೂತನ ಕಟ್ಟಡಕ್ಕೆ ದಿ.11ರ ಶುಕ್ರವಾರ ,ಎನ್ .ಎಚ್ 66 ನಿಟ್ಟೂರು ಉಡುಪಿಗೆ ಸ್ಥಳಾಂತರಗೊಂಡಿತು. ಕಾರ್ಯಕ್ರಮ ಉದ್ಘಾಟನೆ ಶ್ರೀ ಕುದಿ ಶ್ರೀನಿವಾಸ ಭಟ್, ಪ್ರಗತಿಪರ ಕೃಷಿಕರು ಹಾಗೂ ನವೀನ್‌ ಚಂದ್ರ ಜೈನ್ ನಿಟ್ಟೆ – ಪ್ರಗತಿಪರ ಕೃಷಿಕರು ಸಂತೋಷ್ ಜತ್ತನ್, ನಗರ ಸಭೆ ಸದಸ್ಯರು, ನಿಟ್ಟೂರು,ಇವರೆಲ್ಲರೂ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.