ತ್ರಿಶಾ ಕ್ಲಾಸಸ್: ಸಿ ಎ ಫೈನಲ್, ಸಿ ಎ ಇಂಟರ್ ಮೀಡಿಯೆಟ್ ಸಾಧಕರಿಗೆ ಸನ್ಮಾನ ಕಾರ್ಯಕ್ರಮ.

ಮಂಗಳೂರು ತ್ರಿಶಾ ಕ್ಲಾಸಸ್ ವತಿಯಿಂದ ಸಿ ಎ ಫೈನಲ್ ಮತ್ತು ಇಂಟರ್ ಮೀಡಿಯೆಟ್ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಜುಲೈ 16 ರಂದು ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತ್ರಿಶಾ ಸಂಸ್ಥೆ ಸಂಸ್ಥಾಪಕರು ಸಿ ಎ ಗೋಪಾಲಕೃಷ್ಣ ಭಟ್ ಅವರು, ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ನೀವು ಪಟ್ಟ ಪರಿಶ್ರಮಕ್ಕೆ ಇಂದು ಫಲ ದೊರಕಿದೆ. ಇಲ್ಲಿಂದ ಹೊಸ ಪಯಣ ಆರಂಭವಾಗುತ್ತದೆ, ನಿಮ್ಮ ಪ್ರೋತ್ಸಾಹಕ್ಕೆ ತ್ರಿಶಾ ಎಂದಿಗೂ ನಿಮ್ಮ ಜೊತೆ ಇದೆ ಎಂದು […]
ಬೈಂದೂರು, ಹೆಬ್ರಿ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ: ಭಾರಿ ಮಳೆಯ ಹಿನ್ನೆಲೆಯಲ್ಲಿ ಬೈಂದೂರು ಹಾಗೂ ಹೆಬ್ರಿ ತಾಲ್ಲೂಕಿ ವ್ಯಾಪ್ತಿಯ ಅಂಗನವಾಡಿ ,ಪ್ರಾಥಮಿಕ ಪಾಠಶಾಲೆ ,ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಇಂದು (ಜುಲೈ 18.) ರಜೆಯನ್ನು ತಾಲೂಕಿನ ತಹಶೀಲ್ದಾರ್ ಗಳು ಘೋಷಣೆ ಮಾಡಿದ್ದಾರೆ.
ಜು.18ರಂದು ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು.೧೮ ರಂದು ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕಿನ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಕಾಲೇಜು (12 ನೇ ತರಗತಿ) ತರಗತಿಗಳಿಗೆ ರಜೆ ಘೊಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ಕಂಬಳ ಕ್ಷೇತ್ರದ ವೀರ ವರಪ್ಪಾಡಿ ಬಡಗುಮನೆಯ ಕೋಣ “ಲಕ್ಕಿ” ಇನ್ನಿಲ್ಲ.

ಕಿನ್ನಿಗೋಳಿ: ಕಂಬಳ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದ ವರಪಾಡಿ ‘ ಲಕ್ಕಿ’ ಎಂಬ ಕೋಣ ಬುಧವಾರ ಅನಾರೋಗ್ಯದಿಂದ ಕೊನೆಯುಸಿರೆಳೆದಿದೆ.ಕಳೆದ ವರ್ಷದ ಕಂಬಳ ಸೀಸನ್ ನಲ್ಲಿ 5 ಮೆಡಲ್ ಗಳನ್ನು ಲಕ್ಕಿ ಗೆದ್ದುಕೊಂಡಿತ್ತು. ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿ ನಡೆದ ಕಂಬಳದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ಲಕ್ಕಿ ಎರಡನೇ ಬಹುಮಾನ ಪಡೆದುಕೊಂಡಿದೆ. ಕಕ್ಯಪದವು, ಬೆಂಗಳೂರು, ನರಿಂಗಾನ, ಐಕಳ ಮತ್ತು ಜಪ್ಪು ಕಂಬಳಗಳಲ್ಲಿ ಮೆಡಲ್ ಗೆದ್ದಿದ್ದು, ವರಪಾಡಿ ಬಡಗುಮನೆ ದಿವಾಕರ ಚೌಟ ಅವರು ಸಾಕಿದ್ದ ಕೋಣ ನಿಧನ ಹೊಂದಿರುವುದು ಹಲವು […]
ಬೇಕಾಗಿದ್ದಾರೆ

ಕುಂದಾಪುರ ಮತ್ತು ಮಣಿಪಾಲದ ಅತಿದೊಡ್ಡ ಪ್ರೊಸೆಸಿಂಗ್ ಮತ್ತು ಪ್ರೊಡಕ್ಷನ್ ಇಂಡಸ್ಟ್ರಿಯಲ್ಲಿ ವಿವಿಧ ಹುದ್ದೆಗಳು.