ನಾಳೆ(ಜುಲೈ 19) ಬೈಂದೂರು ವಲಯದ ಶಾಲಾ ಕಾಲೇಜುಗಳಿಗೆ ರಜೆ

ಉಡುಪಿ: ಬೈಂದೂರು ತಾಲೂಕಿನಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಬೈಂದೂರು‌ ವಲಯದ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ನಾಳೆ (ಜುಲೈ 19) ರಜೆ ಘೋಷಿಸಿ ಬೈಂದೂರು ವಲಯದ ಬಿಇ ಒ ಆದೇಶ ನೀಡಿದ್ದಾರೆ.ಉಳಿದಂತೆ ಎಲ್ಲಾ ಪದವಿ, ಸ್ನಾತಕೊತ್ತರ ಪದವಿ. ಡಿಪ್ಲೋಮ, ಇಂಜಿನಿಯರಿಂಗ್, ಐ.ಟಿ.ಐ ಗಳಿಗೆ ರಜೆ ಘೋಷಿಸಿರುವುದಿಲ್

ಭಾರೀ ಮಳೆಗೆ ಮನೆಯವರ ಕಣ್ಣೆದುರೇ ಕುಸಿದುಬಿತ್ತು ಗೋಡೆ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉಡುಪಿ: ಭಾರೀ ಮಳೆಗೆ ಉಡುಪಿ ಕುತ್ಪಾಡಿ ಗ್ರಾಮದ ಕಟ್ಟೆಗುಡ್ಡೆಯ ಶಾರದಾ ಪೂಜಾರ್ತಿ ಎಂಬವರ ಮನೆಯ ಗೋಡೆ ದಿಢೀರ್ ಆಗಿ ಕುಸಿದು ಬಿದ್ದಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಮನೆಯ ಗೋಡೆ ಕುಸಿದು ಬೀಳುತ್ತಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಉಡುಪಿಯಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ಮನೆಯ ಗೋಡೆ ಏಕಾಏಕಿಯಾಗಿ ಕುಸಿದುಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಹತ್ತು ನಿಮಿಷದ ಮೊದಲು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.

ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಹಾಗೂ ವಿದ್ಯಾರ್ಥಿ ಸಂಸತ್ ಉದ್ಘಾಟನೆ.

ಕುಂದಾಪುರ: ಜುಲೈ 18 ರಂದು ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಫ್ರೆಶರ್ಸ್ ಡೇ ಹಾಗೂ ವಿದ್ಯಾರ್ಥಿ ಸಂಸತ್ ಉದ್ಘಾಟನೆಯನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಾದ ರಾಜೇಶ್ ನಾಯಕ್ ಅವರು ಮಾತನಾಡಿ ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರದ್ದೆ, ಶಿಸ್ತು, ಸತತ ಪ್ರಯತ್ನದೊಂದಿಗೆ ಭಾವಿ ರಾಷ್ಟ್ರದ ಭಾಗ್ಯೋದಯ ಶಿಲ್ಪಿಗಳಾಬೇಕು ಜೊತೆಗೆ ಜೀವನದಲ್ಲಿ ಸಂಸ್ಕಾರಗಳನ್ನು ಅಳವಡಿಸಿಕೊಂಡು ತಮ್ಮ […]

ನಾಟಾದಲ್ಲಿ ಎಕ್ಸ್ಪರ್ಟ್ ಕಾಲೇಜು ವಿದ್ಯಾರ್ಥಿಗಳ ಸಾಧನೆ.

ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆಗೊಳಿಸಿದ ರಾಜ್ಯಮಟ್ಟದ ಆರ್ಕಿಟೆಕ್ಟರ್ ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ ಪರ್ಟ್ ಪದವಿಪೂರ್ವ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು 100 ರ್ಯಾಂಕ್‌ನೊಳಗಿನ ರಾಂಕ್‌ ಪಡೆದಿದ್ದಾರೆ. ಸಂಜನ್ ನಾಯಕ್ ಕೆ. 53, ರಿತ್ವಿಕಾ ಸುಧಾಕರ್ ರೈ 64, ಅಮೃತ್ಯ ಆರ್.ಭಟ್ 76, ಸ್ತುತಿ 88, ನಂದಿತಾ ಸಿ.ಗಡದ್‌ 110, ಸುರೇಖಾ ವೈ 117, ಹಾಸಿನಿ ಎಂ.ಎಸ್.142, ಎಸ್.ರಿತಿಕಾ 250ನೇ ರ್ಯಾಂಕ್ ಪಡೆದ ಎಕ್ಸ್ಪರ್ಟ್ ವಿದ್ಯಾರ್ಥಿಗಳಾಗಿದ್ದಾರೆ. ಈ ರ್ಯಾಂಕ್ ಪಟ್ಟಿಯನ್ನು ನಾಟಾ ಪರೀಕ್ಷೆಯ ಒಟ್ಟು ಅಂಕಗಳನ್ನು ಪರಿಗಣಿಸಿ ಕರ್ನಾಟಕ […]

ತನಿಷ್ಕ್’ನಲ್ಲಿ ಫೆಸ್ಟಿವಲ್ ಆಫ್ ಡೈಮಂಡ್ಸ್’ ವಿಶೇಷ ಮಾರಾಟ

ಮಂಗಳೂರು, ಜುಲೈ 18: ಟಾಟಾ ಉದ್ಯಮ ಸಮೂಹಕ್ಕೆ ಸೇರಿದ ಭಾರತದ ಅತಿದೊಡ್ಡ ಆಭರಣ ರೀಟೆಲ್ ಬ್ರ‍್ಯಾಂಡ್ ತನಿಷ್ಕ್, ವಜ್ರಗಳ ಮೋಡಿ ಮಾಡುವ ಉತ್ಸವವನ್ನು ಹಮ್ಮಿಕೊಂಡಿದೆ. ನೈಸರ್ಗಿಕ ವಜ್ರಗಳ ಮಾಂತ್ರಿಕತೆ ಮತ್ತು ಅವುಗಳ ಕಾಲಾತೀತ ಸೌಂದರ್ಯವನ್ನು ನೋಡಬಹುದಾಗಿದೆ. ತನಿಷ್ಕ್ ಅವರ ‘ಫೆಸ್ಟಿವಲ್ ಆಫ್ ಡೈಮಂಡ್ಸ್’ ನಲ್ಲಿ, ಪ್ರತಿ ಅಭಿರುಚಿ ಮತ್ತು ಸಂದರ್ಭಗಳಿಗನುಗುಣವಾಗಿ 10,000ಕ್ಕೂ ಹೆಚ್ಚು ನೈಸರ್ಗಿಕ ವಜ್ರದ ಆಭರಣ ವಿನ್ಯಾಸಗಳನ್ನು ಹೊಂದಿದೆ. ಕ್ಲಾಸಿಕ್ ಸೊಬಗಿನ ಸಾರವನ್ನು ಸೆರೆಹಿಡಿಯುವ ಅಪರಿಮಿತ ಸಾಲಿಟೇರ್‌ಗಳಿಂದ ಹಿಡಿದು ಅಸಾಧಾರಣ ಕರಕುಶಲತೆಯನ್ನು ಪ್ರದರ್ಶಿಸುವ ಸಂಕೀರ್ಣವಾದ ಬಹು-ಹರಳಿನ […]