ಕಾಪು: ಕಾರಿಗೆ ಬೈಕ್ ಡಿಕ್ಕಿ; ಯುವಕ ಸ್ಥಳದಲ್ಲೇ ಮೃತ್ಯು

ಉಡುಪಿ: ಬೈಕ್ ವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕಾಪು ತಾಲೂಕಿನ ಕೊಪ್ಪಲಂಗಡಿಯಲ್ಲಿ ಇಂದು ಸಂಜೆ ನಡೆದಿದೆ. ಮೃತಪಟ್ಟ ಬೈಕ್‌ ಸವಾರ ತಮಿಳುನಾಡು ಮೂಲದ ಯುವಕನೆಂದು ಗುರುತಿಸಲಾಗಿದೆ‌. ಈ ಘಟನೆಯಲ್ಲಿ ಕಾರು ಚಾಲಕನಿಗೂ ಗಂಭೀರ ಗಾಯಗಳಾಗಿವೆ. ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಬೈಕ್, ಅದೇ ದಿಕ್ಕಿನಲ್ಲಿ ಬರುತ್ತಿದ್ದ ಕಾರಗೆ ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳದಲ್ಲಿದ್ದ ವಿದ್ಯುತ್‌ ಕಂಬಗಳು ಮುರಿದು ಬಿದ್ದಿದೆ. ಸ್ಥಳಕ್ಕೆ ಕಾಪು ಪೊಲೀಸರು […]

ಬಂಟ್ವಾಳ: ನಿರಂತರ ಗಾಳಿ ಮಳೆಗೆ ಶೆಡ್ ಕುಸಿದು ಬಿದ್ದು 1500 ಕೋಳಿಗಳು ಸಾವು.

ಬಂಟ್ವಾಳ: ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ಎಂಬಲ್ಲಿ ನಿರಂತರ ಗಾಳಿ ಮಳೆಗೆ ಕೋಳಿ ಸಾಕಣೆ ಮಾಡುವ ಶೆಡ್ ಏಕಾಏಕಿ ಕುಸಿದು ಬಿದ್ದ ಪರಿಣಾಮ ಸುಮಾರು ಒಂದುವರೆ ಸಾವಿರ ಕೋಳಿಗಳು ಸಾವನ್ನಪ್ಪಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ನಿವಾಸಿ ರಾಘವ ಅವರ ಮಾಲಕತ್ವದ ಶೆಡ್ ಇದಾಗಿದೆ. ಸುಮಾರು 2,200 ಕೋಳಿಗಳನ್ನು ಅವರು ಸಾಕಣೆ ಮಾಡುತ್ತಿದ್ದರು. ಈ ಪೈಕಿ 700 ಕೋಳಿಗಳು ದೊಡ್ಡದಾಗಿದ್ದವು. ಈ ಹಿನ್ನೆಲೆ 700 ಕೋಳಿಗಳನ್ನು ಮಾರಾಟ ಮಾಡಲಾಗಿತ್ತು. […]

ಭಾರೀ ಮಳೆ ಹಿನ್ನಲೆ: ಉಡುಪಿ, ದ.ಕ ಮತ್ತು ಉತ್ತರ ಕನ್ನಡದ ಕರಾವಳಿಯಲ್ಲಿ ಎತ್ತರದ ಅಲೆಗಳ ಎಚ್ಚರಿಕೆ.

ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರವು ಉಡುಪಿ, ದಕ್ಷಿಣ ಕನ್ನಡ, ಮತ್ತು ಉತ್ತರ ಕನ್ನಡದ ಕರಾವಳಿ ಪ್ರದೇಶಗಳಿಗೆ ಹೆಚ್ಚಿನ ಅಲೆಗಳ ಎಚ್ಚರಿಕೆ ಮತ್ತು ಉಬ್ಬರದ ಅಲರ್ಟ್ ನೀಡಿದೆ. ಉಡುಪಿಯಲ್ಲಿ ಎತ್ತರದ ಅಲೆಗಳು ಏಳುವ ಸಾಧ್ಯತೆ:ಈ ಅಲೆಗಳ ಎಚ್ಚರಿಕೆ, ಅಲರ್ಟ್ ಜುಲೈ 19 ರಂದು ಸಂಜೆ 05 :30ರಿಂದ ಜುಲೈ 21 ರ ರಾತ್ರಿ 11.30 ರ ವರೆಗೆ ಜಾರಿಯಲ್ಲಿರುತ್ತದೆ ಹಾಗೂ ಉಡುಪಿ ಕರಾವಳಿಯ ಬೈಂದೂರಿನಿಂದ ಕಾಪುವರೆಗಿನ ಕರಾವಳಿಯಲ್ಲಿ 3.5 ರಿಂದ 3.7 ಮೀಟರ್ ಎತ್ತರದ ಅಲೆಗಳು […]

ಉಡುಪಿ: ವಿದ್ಯುತ್ ಶಾಕ್’ನಿಂದ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು.

ಉಡುಪಿ: ವ್ಯಕ್ತಿಯೊಬ್ಬ ಮನೆ ಹತ್ತಿರ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದು, ಈ ವೇಳೆ ವಿದ್ಯುತ್ ಆಘಾತದಿಂದ ಗಂಭೀರವಾಗಿ ಗಾಯ ಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಮೂಡನಿಡಂಬೂರು ಗ್ರಾಮದ ಗಣೇಶ್ ಭಂಡಾರಿ(58) ಎಂದು ಗುರುತಿಸಲಾಗಿದೆ. ಜು.10ರಂದು ಇವರು ಮನೆ ಹತ್ತಿರದಲ್ಲಿ ಎಲೆಕ್ಟ್ರಿಷಿಯನ್ ಕೆಲಸವನ್ನು ಮಾಡುತ್ತಿದ್ದು, ಆಗ ಆಕಸ್ಮಿಕವಾಗಿ ವಿದ್ಯುತ್ ಪ್ರವಾಹಿಸಿ ಕೆಳಗೆ ಬಿದ್ದಿದ್ದು, ಈ ವೇಳೆ ಅವರ ಕುತ್ತಿಗೆಯು ಸಿಮೆಂಟ್ ಕಟ್ಟೆಗೆ ತಾಗಿ ಗಂಭೀರವಾಗಿ ಗಾಯಗೊಂಡದ್ದರು. ಆದರೆ ಜು.18ರಂದು ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ […]