ಉಡುಪಿ: ನೀರನ್ನು ಕುದಿಸಿ ಕುಡಿಯುವಂತೆ ಸೂಚನೆ

ಉಡುಪಿ, ಅಕ್ಟೋಬರ್ 16: ಉಡುಪಿ ನಗರಸಭಾ ವ್ಯಾಪ್ತಿಯ 35 ವಾರ್ಡ್ ಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಸ್ವರ್ಣಾ ನದಿಯ ಬಜೆ ಡ್ಯಾಂ, ಬಜೆ ನೀರು ಶುದ್ದೀಕರಣ ಘಟಕ (WTP) ಮಣಿಪಾಲ GSLR ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸುವುದರೊಂದಿಗೆ ಸದರಿ ನೀರಿನ ಮಾದರಿಯನ್ನು ಪ್ರತೀ ತಿಂಗಳಿಗೊಮ್ಮೆ ಪರೀಕ್ಷಿಸಿ, ನೀರು ಕುಡಿಯಲು ಯೋಗ್ಯವಾಗಿರುವ ಬಗ್ಗೆ ವರದಿಯನ್ನು ಪಡೆಯಲಾಗುತ್ತಿರುತ್ತದೆ.ಆದರೂ ಸಹ ಇತ್ತೀಚಿನ ದಿನಗಳಲ್ಲಿ ಅಕಾಲಿಕ ಮಳೆಯಿಂದಾಗಿ ನೀರಿನ ಬಣ್ಣ ಬದಲಾಗಿದ್ದು, ಸದರಿ ನೀರು ಕುಡಿಯಲು ಯೋಗ್ಯವಾಗಿದ್ದರೂ ಸಹ ಆರೋಗ್ಯದ ಹಿತದೃಷ್ಟಿಯಿಂದ […]
ಉಡುಪಿ: ಅ.20 ರಂದು ಉದ್ಯೋಗ ಮೇಳ

ಉಡುಪಿ: ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯದ ಅಧೀನದಲ್ಲಿ ಬರುವ ಸ್ವಾಯತ್ತ ವೈಜ್ಞಾನಿಕ ಸಂಸ್ಥೆಯಾದ ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (NIELIT) ಯು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯದ ನ್ಯಾಶನಲ್ ಕೆರಿಯರ್ ಸರ್ವಿಸ್ (NCS) ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಸಹಕಾರದೊಂದಿಗೆ ಬೆಂಗಳೂರು ನಗರ ಜಿಲ್ಲೆಯ ರಾಜಾಜಿನಗರದ ಕೆ.ಎಲ್.ಇ ಸಂಸ್ಥೆಯ ಎಸ್.ನಿಜಲಿಂಗಪ್ಪ […]
ಮಂಗಳೂರು: ಖಾಸಗಿ ಬಸ್ ನಿರ್ವಾಹಕನ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಪತ್ತೆ.

ಮಂಗಳೂರು: ಸ್ಟೇಟ್‌ಬ್ಯಾಂಕ್’ನ ಇಂದಿರಾ ಕ್ಯಾಂಟೀನ್ ಪರಿಸರದಲ್ಲಿ ಮಂಗಳೂರು-ವಿಟ್ಲ ನಡುವೆ ಸಂಚರಿಸುವ ಖಾಸಗಿ ಬಸ್ ನಿರ್ವಾಹಕರೊಬ್ಬರ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿರುವ ಘಟನೆ ನಡೆದಿದೆ. ಮೃತರು ಖಾಸಗಿ ಬಸ್ ನಿರ್ವಾಹಕರಾಗಿದ್ದ ರಾಜೇಶ್ (30). ಯಾವುದೋ ವಿಚಾರಕ್ಕೆ ಗಲಾಟೆಯಾಗಿ ಅಥವಾ ಲೂಟಿ ಮಾಡುವ ಸಂದರ್ಭ ಪ್ರತಿರೋಧ ಒಡ್ಡಿರುವುದಕ್ಕೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ವೆನ್‌ಲಾಕ್ ಶವಾಗಾರದಲ್ಲಿಡಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂದಾಪುರ: ಕಡಿಮೆ ರಕ್ತದೊತ್ತಡದಿಂದ ಮಹಿಳೆ ಮೃತ್ಯು.

ಕುಂದಾಪುರ: ಮಹಿಳೆಯೊಬ್ಬರು ಕಡಿಮೆ ರಕ್ತದೊತ್ತಡದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿರುವ ಘಟನೆ ಹೆಮ್ಮಾಡಿಯಲ್ಲಿ ಅ.14ರಂದು ನಡೆದಿದೆ. ಮೃತ ಮಹಿಳೆ ಹೆಮ್ಮಾಡಿ ನಿವಾಸಿ ಮರಿನಾ ಡಿ’ಸಿಲ್ವಾ (42). ಇವರು ಪತಿ ಕುಂದಾಪುರದ ಓಯಾಸಿಸ್ ಎಲೆಕ್ಟ್ರಾನಿಕ್ಸ್ ಮಾಲಕ ಲಾಯ್ಡ ಡಿ’ಸಿಲ್ವಾ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 2016ರ ಜೂ. 21ರಂದು ಮೊವಾಡಿಯಲ್ಲಿ ಸಂಭವಿಸಿದ್ದ ಭೀಕರ ಶಾಲಾ ವಾಹನ ದುರಂತದಲ್ಲಿ ಇವರ ಇಬ್ಬರು ಪುತ್ರಿಯರು ಸಾವನ್ನಪ್ಪಿದ್ದರು.
ಉಡುಪಿ:ಕಂಪ್ಯೂಟರ್ ಜ್ಞಾನವಿಲ್ಲದೆ ಉದ್ಯೋಗ ವ್ಯವಹಾರ ಅಸಾಧ್ಯ – ನಾಗೇಶ್ ಹೆಗ್ಡೆ

ಉಡುಪಿ:ಇಂದು ಡಿಜಿಟಲ್ ಸಾಕ್ಷರತೆಯಿಲ್ಲದೆ ದೈನಂದಿನ ಜೀವನ ನಡೆಯುವುದು ಕಷ್ಟ. ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಜ್ಞಾನವಿಲ್ಲದೆ ಉದ್ಯೋಗ ವ್ಯವಹಾರ ಅಸಾಧ್ಯ ಎಂದು ಉಡುಪಿ ಸ್ವದೇಶ್ ಗ್ರೂಪ್ ಆಫ್ ಹೋಟೆಲ್ಸ್ ನ ಚೇರ್ಮನ್ ಮ್ಯಾನೇಜಿಂಗ್ ಡೈರೆಕ್ಟರ್ ನಾಗೇಶ್ ಹೆಗ್ಡೆ ಹೇಳಿದರು. ಕುಂತಳನಗರದ ಉಡುಪಿ ಗ್ರಾಮೀಣ ಸಂಘದ ಗ್ರಾಮೀಣ ಬಂಟರ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಮಂಗಳೂರು ಪ್ರಾಯೋಜಕತ್ವದಲ್ಲಿ ನಡೆಯುವ ಕಂಪ್ಯೂಟರ್ ಉಚಿತ ತರಬೇತಿ ಕಾರ್ಯಕ್ರಮದ 17ನೇ ಬ್ಯಾಚ್ ನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ […]