ಬಾರ್ಕೂರು ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ(ಐಟಿಐ) 2024-25ನೇ ಸಾಲಿನ ಪ್ರವೇಶಾತಿ ಪ್ರಾರಂಭ.

ಬಾರ್ಕೂರು ವಿದ್ಯಾಭಿವರ್ದಿನಿ ಸಂಘದ ಆಡಳಿತಕ್ಕೊಳಪಟ್ಟ “ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆ”ಯು ದಿನಾಂಕ 01-08-1984ರಂದು ಪ್ರಾರಂಭಗೊಂಡು ಉಡುಪಿ ಜಿಲ್ಲೆಯಲ್ಲೇ ಪ್ರಥಮ ಕೈಗಾರಿಕಾ ತರಬೇತಿ ಸಂಸ್ಥೆಯಾಗಿ ಹೆಸರು ಪಡೆಯಿತು. ಭಾರತ ಸರ್ಕಾರದ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ (National Council for Vocational Training)ನೊಂದಿಗೆ ಸಂಯೋಜನೆ ಹೊಂದಿದ್ದು ರಾಜ್ಯ ಸರಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆಯ ಅಡಿಯಲ್ಲಿ ತರಬೇತಿಯನ್ನು ನೀಡುತ್ತಿರುವ ಅನುದಾನಿತ ಸಂಸ್ಥೆಯಾಗಿರುತ್ತದೆ. ಸಂಸ್ಥೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ತರಬೇತಿ:40 ವರ್ಷಗಳ ಹಿಂದೆ ಅಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾದ […]

ಮುಲ್ಕಿ: ಯುವಕ ನೀರುಪಾಲು

ಮೂಲ್ಕಿ: ಕೊಳಚಿಕಂಬಳ ಬಳಿ ಮರುವಾಯಿ ಹೆಕ್ಕಲು ನದಿಗಿಳಿದ ಯುವಕನೊಬ್ಬ ನೀರುಪಾಲಾಗಿರುವ ಘಟನೆ ನಡೆದಿದೆ. ನಾಪತ್ತೆಯಾದ ಯುವಕನನ್ನು ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಷ್(24) ಎಂದು ಗುರುತಿಸಲಾಗಿದೆ. ಸುಮಾರು 10 ಯುವಕರ ತಂಡ ಬಜಪೆಯ ಅದ್ಯಪಾಡಿಯಿಂದ ಮರುವಾಯಿ ಹೆಕ್ಕಲು ಆಗಮಿಸಿದ್ದು, ಅದರಲ್ಲಿ ನಾಲ್ವರು ಮರುವಾಯಿ ಹೆಕ್ಕುವುದಕ್ಕಾಗಿ ಸಸಿಹಿತ್ಲು ಮುಂಡಾ ಬೀಚ್‌ ಬಳಿಯ ಅಳಿವೆಯ ಬಳಿ ನದಿಗೆ ಇಳಿದಿದ್ದರು. ಉಳಿದ ಆರು ಮಂದಿ ದಡದಲ್ಲಿಯೇ ಇದ್ದರು, ನೀರಿಗೆ ಇಳಿದವರಲ್ಲಿ ಈಜು ಬಾರದ ಕಾರಣ ಕೆಲವು ಯುವಕರು […]

ಹೆಬ್ರಿ: ಬೈಕ್’ಗಳು ಮುಖಾಮುಖಿ ಡಿಕ್ಕಿ – ಸವಾರ ಸ್ಥಳದಲ್ಲೇ ಮೃತ್ಯು.

ಹೆಬ್ರಿ: ಬೈಕ್ ಸವಾರನೋರ್ವನ ಓವರ್ ಟೇಕ್ ಭರದಲ್ಲಿ ಬೈಕ್ಗಳು ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಹೆಬ್ರಿ ತಾಲೂಕಿನ ಮುನಿಯಾಲಿನ ಚಟ್ಕಲ್ ಪಾದೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಭಾನುವಾರ ಸಂಜೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಬೈಕ್ ಸವಾರ ಅಂಡಾರು ಗ್ರಾಮದ ನಿವಾಸಿ ಭಾಸ್ಕರ ಶೆಟ್ಟಿ (52) ಸ್ಥಳದಲ್ಲೇ ಮೃತಪಟ್ಟಿದ್ದಾರೆ‌. ಇನ್ನೋರ್ವ ಬೈಕ್ ಸವಾರ ಸಂದೀಪ್ ಎಂಬವರು ತೀವ್ರ ಗಾಯಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಿವಾಸಿ ಸಂದೀಪ್ ಎಂಬವರು ಕಾರ್ಕಳ […]

ಮಂಗಳೂರು: ಸೂಪರ್ ಮಾಮ್ 2024 ಆಚರಣೆ

ಸೂಪರ್ ಮಾಮ್ 2024 ಆಚರಣೆಯು ತಾಯಂದಿರ ಪ್ರೀತಿಯ ಹೃದಯವಂತಿಕೆಗೆ ಒಂದು ಹೃದಯಸ್ಪರ್ಶಿ ಗೌರವಾರ್ಪಣೆಯಾಗಿದೆ. ಕೃತಜ್ಞತೆ, ವೈಭವ ಮತ್ತು ಅನಿಯಂತ್ರಿತ ಮಜಾದ ವಾತಾವರಣದಲ್ಲಿ, ಸೂಪರ್ ಮಾಮ್ 2024 ಸ್ಮರಣೀಯವಾಗಿ ಉಳಿಯುವ ಆಚರಣೆಯಲ್ಲಿ ಕೇಂದ್ರ ಸ್ಥಾನವನ್ನು ವಹಿಸಿತು. BON ಮಸಾಲಾ & ಫುಡ್ ಪ್ರೊಡಕ್ಟ್ಸ್, ELC India , CFAL India ಮತ್ತು CaratLane ನಿಂದ ಶಕ್ತಿಯುತವಾಗಿ ಪ್ರಾಯೋಜಿಸಲಾದ BON ಸೂಪರ್ ಮಾಮ್ ಒಂದು ಅದ್ಭುತ ಘಟನೆಯನ್ನು ಸಂಘಟಿಸಿತು. ಇದು ಎಲ್ಲಾ ಹಾಜರಾದವರ ಮೇಲೆ ಅಳಿಸಲಾಗದ ಗುರುತನ್ನು ಬಿಟ್ಟಿತು. ಹಾಜರಾದ […]