ಉಡುಪಿ: ಗಾಳಿ ಸಹಿತ ವಿವಿಧೆಡೆ ಮಳೆ.

ಉಡುಪಿ :ಮೇ 14 ಉಡುಪಿ ಜಿಲ್ಲೆಯ ವಿವಿದೆಡೆ ಮಂಗಳವಾರ ಸಂಜೆ ಗುಡುಗು ಸಹಿತ ಗಾಳಿ ಮಳೆಯಾಗಿದೆ. ತಾಲೂಕಿನ ಹಲವೆಡೆ ಸುಮಾರು ಅರ್ಧ ತಾಸುಗಳ ಕಾಲ ಭಾರಿ ಮಳೆಯಾಗಿದೆ.
ಬಂಟಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡಿಗೆ ಸಮಾರಂಭ.

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 11ನೇ ವರ್ಷದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡಿಗೆ ಸಮಾರಂಭವು ದಿನಾಂಕ 11 ಮೇ 2024 ರಂದು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು. ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ ಈ ಸಮಾರಂಭದ ಮುಖ್ಯ ಅಥಿತಿಗಳಾಗಿ ಮಾತನಾಡಿ ವಿದ್ಯಾರ್ಥಿಗಳ ಸಾಧನೆಗಳು ಸಂಸ್ಥೆಗೆ ಒಂದು ಉತ್ತಮ ಜಾಹೀರಾತುಗಳಾಗಿವೆ, ವಿದ್ಯಾರ್ಥಿಗಳ ಉತ್ತಮ ನಡವಳಿಕೆ ಸಂಸ್ಥೆಯ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು. ಪಧವೀದರರು ಸಮಾಜದ ಎಲ್ಲಾ ಸವಾಲುಗಳನ್ನು ಎದುರಿಸಲು ಬೇಕಾಗುವಂತಹ ಕೌಶಲ್ಯವನ್ನು ಹೊಂದಬೇಕು ಎಂದು ತಿಳಿಸಿದರು. ಈ […]
ಉಡುಪಿ: “ಮರೆಯಲಾರೆ ಆ ದಿನಗಳ” ಪುಸ್ತಕ ಬಿಡುಗಡೆ

ಉಡುಪಿ: ಉಡುಪಿ ಸಾಹಿತ್ಯ ಲೋಕದ ಹಿರಿಯರಾದ ಡಾ.ಶಿವರಾಮ ಕಾರಂತ್ ಒಡನಾಡಿ. ಉಡುಪಿ ಸುಹಾಸಂ ವೇದಿಕೆಯ ಮಾಜಿ ಅಧ್ಯಕ್ಷರಾದ ಹಿರಿಯ ಸಾಹಿತಿ ಕೆ. ವಿ. ಶ್ರೀನಿವಾಸ್ ರಾವ್ ಉಡುಪಿ ತಮ್ಮ 87ನೇ ವಯಸ್ಸಿನಲ್ಲಿ ತಾವು ರಚಿಸಿದ “ಮರೆಯಲಾರೆ ಆ ದಿನಗಳ” ಪುಸ್ತಕ ಬಿಡುಗಡೆ ಸಮಾರಂಭ ಮೇ.12 ಆದಿತ್ಯವಾರ ಉಡುಪಿಯ ಶ್ರೀ ಕೃಷ್ಣ ಪ್ರತಿಷ್ಠಾನ ಸಭಾಂಗಣ ಜರಗಿತು. ಸಮಾರಂಭಾದಲ್ಲಿ ಮುಖ್ಯ ಅತಿಥಿ ಯಾಗಿ ಪ್ರೋ. ವೈ. ಮೋಹನ್ ರಾವ್, ಡಾ.ಶಂಕರ್ ಮಂಗಳೂರು, ಪ್ರೋ.ರಮೇಶ್ ರಾವ್ ಕಿದಿಯೂರು ಜೊತೆಗೂಡಿ ಪುಸ್ತಕ ಬಿಡುಗಡೆ […]
ಕನ್ನಡ ಚಲನಚಿತ್ರ ಹಿರಿಯ ನಟ ದೊಡ್ಡಣ್ಣ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ

ಉಡುಪಿ: ಕನ್ನಡ ಚಲನಚಿತ್ರದ ಹಿರಿಯ ನಟ ಶ್ರೀ ದೊಡ್ಡಣ್ಣ ಅವರು ಮೇ.13 ರಂದು ಕುಟುಂಬಸಮೇತರಾಗಿ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ, ಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆದು ಪರ್ಯಾಯ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದು ತೆರಳಿದರು.
ಸುಳ್ಯ: ವಿದ್ಯಾರ್ಥಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ: ಕಾಲೇಜು ವಿದ್ಯಾರ್ಥಿಯೊಬ್ಬ ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಬೆಳ್ಳಾರೆ ಗ್ರಾಮದ ನೆಟ್ಟಾರಿನ ಕಿನ್ನಿಮಜಲು ಹುಕ್ರಪ್ಪ ಅವರ ಪುತ್ರ, ಸುಳ್ಯ ಖಾಸಗಿ ಕಾಲೇಜಿನ ವಿದ್ಯಾರ್ಥಿ ಚರಣ್ ಕುಮಾರ್ ಕೆ. ಮೃತರು ಎಂದು ತಿಳಿದು ಬಂದಿದೆ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.