ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರವಿಶಾಸ್ತ್ರಿಯವರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ.

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಪ್ರಸಿದ್ಧ ಕ್ರಿಕೆಟ್ ವೀಕ್ಷಕ ವಿವರಣೆಕಾರ ಶ್ರೀಯುತ ರವಿಶಾಸ್ತ್ರಿಯವರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿ ಶ್ರೀದೇವರ ದರ್ಶನ ಹಾಗೂ ಶ್ರೀಸುಬ್ರಹ್ಮಣ್ಯ ಮಠದ ಸಂಪುಟ ನರಸಿಂಹ ಸ್ವಾಮಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಾಲಯದ ವತಿಯಿಂದ ಗೌರವಿಸಲಾಯಿತು. ಕುಕ್ಕೆ ಶ್ರೀಸುಬ್ರಹ್ಮಣ್ಯ ಮಠದಲ್ಲಿ ಶ್ರೀವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಶ್ರೀಯುತ ರವಿಶಾಸ್ತ್ರಿಯವರನ್ನು ಶಾಲು ಹೊದೆಸಿ ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. ಶ್ರೀವೆಂಕಟರಾಜ, ಶ್ರೀವಾದಿರಾಜ ಪೆಜತ್ತಾಯ, ಶ್ರೀಪಿ.ಲಾತವ್ಯ ಆಚಾರ್ಯ ಉಪಸ್ಥಿತರಿದ್ದರು.

ಚೇರ್ಕಾಡಿ ದೊಡ್ಡಮನೆ ಶಿವರಾಂ ಜಿ ಶೆಟ್ಟಿ ನಿಧನ

ಉಡುಪಿಯ ಕೊಡವೂರು ನಿವಾಸಿ, ಚೇರ್ಕಾಡಿ ದೊಡ್ಡಮನೆ ಶಿವರಾಂ ಜಿ. ಶೆಟ್ಟಿಯವರು ಹೃದಯಾಘಾತದಿಂದ ಇಂದು ಸಂಜೆ 5 ಗಂಟೆಗೆ ನಿಧನ ಹೊಂದಿದರು. ಶ್ರೀಯುತರು ಊರಿನ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು ಹಾಗೂ ಚೇರ್ಕಾಡಿ ದೊಡ್ಡಮನೆ ಸಂಪ್ರದಾಯಬದ್ದ ಕಂಬಳ ಆಯೋಜನೆಯ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದರು. ಅಪಾರ ಸಂಖ್ಯೆಯ ಕುಟುಂಬಸ್ಥರು, ಧರ್ಮಪತ್ನಿ, ಮಗಳು ಹಾಗೂ ಅಳಿಯರನ್ನು ಅಗಲಿರುತ್ತಾರೆ.ಉಡುಪಿಯ ಕೊಡವೂರು ನಿವಾಸಿ, ಚೇರ್ಕಾಡಿ ದೊಡ್ಡಮನೆ ಶಿವರಾಂ ಜಿ. ಶೆಟ್ಟಿಯವರು ಹೃದಯಾಘಾತದಿಂದ ಇಂದು ಸಂಜೆ 5 ಗಂಟೆಗೆ ನಿಧನ ಹೊಂದಿದರು

ಉಡುಪಿ: ಬಸ್ಸುಗಳು ನಿಗಧಿತ ಮಾರ್ಗದಲ್ಲಿ ಸಂಚರಿಸಲು ಸೂಚನೆ

ಉಡುಪಿ, ಮೇ 15: ಸಂತೆಕಟ್ಟೆಯಿಂದ ಉಡುಪಿ ಕಡೆಗೆ ಬರುವ ಕೆಲವೊಂದು ಬಸ್ಸಿನ ಪರವಾನಿಗೆಯಲ್ಲಿ ನಿಟ್ಟೂರು–ರಾ.ಹೆ.17 ಎಂದು ನಮೂದಿಸಿರುವ ಬಸ್ಸುಗಳು ಅಂಬಾಗಿಲು ರಾ.ಹೆ.66 ಕರಾವಳಿ ಬೈಪಾಸಿನಿಂದ ಅಂಬಲಪಾಡಿ ಬೈಪಾಸ್- ಬ್ರಹ್ಮಗಿರಿ-ಅಜ್ಜರಕಾಡು-ತಾಲೂಕು ಕಛೇರಿ ಮೂಲಕ ಹಾಗೂ ಉಳಿದ ಸಿಟಿ ಬಸ್ಸುಗಳು ಅಂಬಾಗಿಲು ತಾಂಗದಗಡಿ-ಗುಂಡಿಬೈಲು ಮೂಲಕ ಕಲ್ಸಂಕ ಬಂದು ಬೃಂದಾವನ ಹೋಟೆಲ್ ಬಳಿ ಎಡಕ್ಕೆ ತಿರುಗಿ ಕಾಫಿಯ ಹೋಟೆಲ್ ಬಳಿ ಬಲಕ್ಕೆ ತಿರುಗಿ ಸಿಟಿ ಬಸ್ಸು ನಿಲ್ದಾಣಕ್ಕೆ ತಲುಪುವಂತೆ ಹಾಗೂ ಬಾರ್ಕೂರು-ಬ್ರಹ್ಮಾವರ-ಹೊನ್ನಾಳ-ಹೆಬ್ರಿ-ಪೆರ್ಡೂರು-ಕುಕ್ಕೆಹಳ್ಳಿ ಹಾಗೂ ಇತರೆ ಕಡೆಯಿಂದ ಬರುವ ಷಟಲ್ ಸರ್ವೀಸ್ ಬಸ್ಸುಗಳು […]

ಉಡುಪಿ: ಸಿಡಿಲು ಬಡಿದು ಯುವಕ ಮೃತ್ಯು.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.ಸುರೇಶ್ ಶೆಟ್ಟಿ(38) ಮೃತಪಟ್ಟವರು ಎಂದು ಹೇಳಲಾಗಿದೆ. ಸಂಜೆ ಮಳೆ ಬರುತ್ತಿದ್ದಾಗ ಮನೆ ಬಳಿ ನಿಂತಿದ್ದ ಸುರೇಶ್ ಶೆಟ್ಟಿ ಸಿಡಿಲು ಬಡಿದು ಶಂಕರ ನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬಾರ್ಕೂರ್ ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)ಯಲ್ಲಿ ಕ್ಯಾಂಪಸ್ ಇಂಟರ್ವ್ಯೂ.

ಉಡುಪಿ: ಬಾರ್ಕೂರ್ ಹೆರಾಡಿ ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮೇ ಹಾಗೂ ಜೂ ತಿಂಗಳಲ್ಲಿ ಕ್ಯಾಂಪಸ್ ಇಂಟರ್ವ್ಯೂ ನಡೆಯಲಿದ್ದು, ಕ್ಯಾಂಪಸ್ ಇಂಟರ್ವ್ಯೂನ ದಿನಾಂಕ, ಸಂಸ್ಥೆಯ ಹೆಸರು ಹಾಗೂ ಹುದ್ದೆಗಳು ಹೀಗಿವೆ. ದಿನಾಂಕ:16-05-2024 ದಿನಾಂಕ: 20-05-2024 & 21-05-2024 ದಿನಾಂಕ: 03-06-2024 ದಿನಾಂಕ 05-06-2024 ದಿನಾಂಕ: 07-06-2024 ದಿನಾಂಕ: 10-06-2024 ದಿನಾಂಕ:15-06-2024 ವಿದ್ಯಾರ್ಥಿಗಳಿಗೆ ಅತ್ಯುತ್ತಮ ತಾಂತ್ರಿಕ ಶಿಕ್ಷಣ ತರಬೇತಿ:40 ವರ್ಷಗಳ ಹಿಂದೆ ಅಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೀರ್ತಿಶೇಷ ವಿ.ಎಲ್. ರೋಚ್‌ರವರ ದೂರದರ್ಶಿತ್ವದಿಂದ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಈ […]