ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಉಡುಪಿ: ಚೇತನಾ ನವೋದಯ ಸ್ವಸಹಾಯ ಗುಂಪುಗಳ ಮಾಹಿತಿ ಕಾರ್ಯಾಗಾರ

ಉಡುಪಿ: ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾಗಿರುವ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಚೇತನಾ ಸ್ವಸಹಾಯ ಗುಂಪುಗಳ ಸದಸ್ಯರ ಮಾಹಿತಿ ವಿನಿಮಯ ಕಾರ್ಯಾಗಾರವು ಸಂಘದ ಜಗನ್ನಾಥ ಸಭಾಭವನದಲ್ಲಿ ಜರಗಿತು. ಸ್ವಸಹಾಯ ಗುಂಪುಗಳ ಬಲವರ್ಧನೆಗಾಗಿ ಹಮ್ಮಿಕೊಂಡ ಈ ಮಾಹಿತಿ ಕಾರ್ಯಾಗಾರದಲ್ಲಿ ಸುಮಾರು 100 ಸ್ವಸಹಾಯ ಗುಂಪುಗಳ ಸದಸ್ಯರು ಭಾಗವಹಿಸಿ ಮಾಹಿತಿ ಪಡೆದರು. ನವೋದಯ ಸ್ವಸಹಾಯ ಗುಂಪುಗಳ ಮೇಲ್ವಿಚಾರಕರಾದ ಹರಿನಾಥ್‍ರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನವೋದಯ ಸ್ವಸಹಾಯ ಗುಂಪುಗಳ ಕೋ-ಆರ್ಡಿನೇಟರ್‍ಗಳಾದ ಕೃಷ್ಣ ನಾಯ್ಕ್, ಸುಮಿತ್ರಾ, ಗೀತಾ […]
ಎಂಪಿಎಂ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

ಕಾರ್ಕಳ: ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮ ಎಂ.ಪಿ.ಎಂ ಕಾಲೇಜಿನಲ್ಲಿ ಮೇ.16 ರಂದು ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಎಂ. ಪಿ. ಎಂ. ನ ಹಳೆ ವಿದ್ಯಾರ್ಥಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಸುರೇಶ್ ಅತ್ತೂರ್ ಇವರು ಮಾತನಾಡಿ , ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯು ಒಂದು ಮಹತ್ತರ ಪಾತ್ರ ವಹಿಸುತ್ತದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ […]
ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)ಯಲ್ಲಿ ‘ಬೆಲ್ ಓ ಸೀಲ್ ವಾಲ್ವ್ಸ್ ಪ್ರೈ.ಲಿ. ಕಂಪನಿಯಿಂದ ಕ್ಯಾಂಪಸ್ ಸಂದರ್ಶನ.

ಬಾರ್ಕೂರು: ಉಡುಪಿ ಸಂತೆಕಟ್ಟೆಯ ‘ಬೆಲ್ ಓ ಸೀಲ್ ವಾಲ್ವ್ಸ್ ಪ್ರೈ.ಲಿ.’ ಕಂಪನಿಯಿಂದ ಮೇ14 ರಂದು ನೇಶನಲ್ ತರಬೇತಿ ಸಂಸ್ಥೆಯಲ್ಲಿ ಕ್ಯಾಂಪಸ್ ಸಂದರ್ಶನವನ್ನು ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಜನರಲ್ ಮೆಕ್ಯಾನಿಕ್ (ಫಿಟ್ಟರ್) ಮತ್ತು ವೆಲ್ಡರ್ ಹುದ್ದೆಗೆ ಸಂದರ್ಶನವನ್ನು ನಡೆಸಿದರು. ಬೆಲ್ ಓ ಸೀಲ್ ವಾಲ್ವ್ಸ್ ಪ್ರೈ.ಲಿ.’ಗೆ ಬಾರ್ಕೂರು ನೇಶಷನಲ್ ಕೈಗಾರಿಕಾ ತರಬೇತಿ ಸಂಸ್ಥೆಯ ಸುಮಾರು 30 ವಿದ್ಯಾರ್ಥಿಗಳು, ಸರಕಾರಿ ಐಟಿಐ ಬಿಡ್ಕಲ್’ಕಟ್ಟೆಯ 6 ವಿದ್ಯಾರ್ಥಿಗಳು, ಹಾಗೂ ಟ್ರಿನಿಟಿ ಐಟಿಐ ಉದ್ಯಾವರದ 5 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಿಕ್ಷಣ, ಮದುವೆ, ಹಾಗೂ ವಸತಿಗೂ ಪಿಎಫ್ ಸೌಲಭ್ಯ ವಿಸ್ತರಣೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ತನ್ನ ಚಂದಾದಾರರಿಗೆ ಮಹತ್ವದ ಶುಭ ಸುದ್ದಿಯೊಂದನ್ನು ನೀಡಿದೆ. ಆಟೋ ಕ್ಲೈಮ್ ಸೆಟಲ್‌ಮೆಂಟ್ ಸೌಲಭ್ಯವನ್ನು ಮತ್ತಷ್ಟು ಉದ್ದೇಶಗಳಿಗೆ ಸಂಸ್ಥೆ ವಿಸ್ತರಿಸಿದೆ. ಸದ್ಯ ಅನಾರೋಗ್ಯದ ಚಿಕಿತ್ಸೆ ವೆಚ್ಚಕ್ಕೆ ಮಾತ್ರ ಈ ಸೌಲಭ್ಯ ಇತ್ತು. ಇದನ್ನೀಗ ಶಿಕ್ಷಣ, ಮದುವೆ ಮತ್ತು ವಸತಿ ಉದ್ದೇಶಗಳಿಗೂ ವಿಸ್ತರಿಸಿರುವುದಾಗಿ ಇಪಿಎಫ್‌ಒ ತಿಳಿಸಿದೆ. ಸುಮಾರು 6 ಕೋಟಿಗೂ ಹೆಚ್ಚಿನ ಚಂದಾದಾರರಿಗೆ ಈ ಹೊಸ ಸೌಲಭ್ಯ ಸಿಗಲಿದೆ. ಈ ನಿರ್ಧಾರದಿಂದ ಯಾವುದೇ ಮಾನವ ಹಸ್ತಕ್ಷೇಪ ಇಲ್ಲದೆ ಐಟಿ ವ್ಯವಸ್ಥೆಯ ಮೂಲಕವೇ ಇಂತಹ ಕ್ಲೈಮ್‌ಗಳು […]
ಕಾರ್ಕಳ ಎಂಪಿಎಂ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ