ಬಾರ್ಕೂರು ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮೇ 20, 21ರಂದು ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ. ಕಂಪನಿಯಿಂದ ಕ್ಯಾಂಪಸ್ ಸಂದರ್ಶನ.

ಬಾರ್ಕೂರು: ಬಾರ್ಕೂರು ವಿದ್ಯಾಭಿವರ್ಧಿನಿ ಸಂಘದ ಆಡಳಿತಕ್ಕೊಳಪಟ್ಟ ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗವನ್ನು ಕೊಡಿಸುವ ಬಗ್ಗೆ ಚಿಂತನೆ ನಡೆಸಿ ಪ್ರತಿ ವರ್ಷ ಹಲವು ಕಂಪನಿಗಳಿಂದ ಕ್ಯಾಂಪಸ್ ಸಂದರ್ಶನ ಮಾಡುತ್ತಾ ಬಂದಿರುತ್ತದೆ. ಮೇ 20 ಮತ್ತು 21 ರಂದು ಪ್ರತಿಷ್ಠಿತ ಕಂಪನಿಯಾದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ. ಅವರಿಂದ ಕ್ಯಾಂಪಸ್ ಸಂದರ್ಶನ ಇರುತ್ತದೆ. ಅರ್ಹ ವಿದ್ಯಾರ್ಥಿಗಳು ಇದನ್ನು ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಬಾರಕೂರು ನ್ಯಾಶನಲ್ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಉಡುಪಿ: ‘ಗೀತಾಂಜಲಿ ಸಿಲ್ಕ್’ನ ಸಂಸ್ಥಾಪಕ ನೀರೆಬೈಲೂರು ಗೋವಿಂದ ನಾಯಕ್ ನಿಧನ

ಉಡುಪಿ: ಉಡುಪಿಯ ‘ಗೀತಾಂಜಲಿ ಸಿಲ್ಕ್’ ಮತ್ತು ಶಾಂತಿಸಾಗರ್ ಹೊಟೇಲ್‌ನ ಸಂಸ್ಥಾಪಕರಾದ ನೀರೆಬೈಲೂರು ಗೋವಿಂದ ನಾಯಕ್ (89) ಮೇ19 ರಂದು ಬೆಳಗ್ಗೆ 6.10ಕ್ಕೆ ಹೃದಯಾಘಾತದಿಂದ ನಿಧನರಾದರು. ಪುತ್ರರಾದ ಶ್ರೀರಾಮಕೃಷ್ಣ ನಾಯಕ್ (ಆರ್.ಕೆ), ಲಕ್ಷ್ಮಣ ನಾಯಕ್, ರಮೇಶ ನಾಯಕ್, ಹರೀಶ್ ನಾಯಕ್, ಸಂತೋಷ್ ವಾಗ್ಳೆ, ಸುನೀತ ಪ್ರಕಾಶ್ ಪ್ರಭು, ಸೊಸೆಯಂದಿರು, ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕ.ಸಾ‌.ಪ. ಉಡುಪಿ ತಾಲೂಕು ಘಟಕದಿಂದ “ಮನೆಯೇ ಗ್ರಂಥಾಲಯ” ವಿನೂತನ ಕಾರ್ಯಕ್ರಮ

ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ ‘ಮನೆಯೇ ಗ್ರಂಥಾಲಯ’ ಎಂಬ ವಿನೂತನ ಕಾರ್ಯಕ್ರಮಕ್ಕೆ ಕನ್ನಡದ ಹಿರಿಯ ವಿದ್ವಾಂಸ ನಾಡೋಜ ಡಾ.ಕೆ.ಪಿ.ರಾವ್ ಅವರು ಇದೇ ಬರುವ ಮಂಗಳವಾರ ಸಂಜೆ 5:30ಕ್ಕೆ ಉಡುಪಿಯ ಬೈಲೂರಿನಲ್ಲಿರುವ ಶಶಿಪ್ರಭಾ ಮತ್ತು ವಿವೇಕಾನಂದ ಅವರ ಮನೆಯಲ್ಲಿ ಚಾಲನೆ ನೀಡಲಿದ್ದಾರೆ. ಮನೆ ಮಂದಿರ ಅಂಗಡಿ ಆಸ್ಪತ್ರೆ ಬ್ಯಾಂಕು ಇನ್ನಿತರ ಸ್ಥಳಗಳಲ್ಲಿ ಗ್ರಂಥಾಲಯ ಸ್ಥಾಪನೆಗೊಳ್ಳುವ ಮೂಲಕ ಓದುವ ಹವ್ಯಾಸ ಬೆಳೆಸುವ ಒಂದು ವಿನೂತನ ಕಾರ್ಯಕ್ರಮವೇ ಮನೆಯೇ ಗ್ರಂಥಾಲಯ. ಕನ್ನಡದ ಹಿರಿಯ […]

ಕ್ರಿಕೆಟ್ ಆಡುವ ವೇಳೆ ಸಿಡಿಲು ಬಡಿದು ಬಾಲಕ ಮೃತ್ಯು.

ಶಿರಸಿ: ತಾಲ್ಲೂಕಿನ ಬನವಾಸಿಯಲ್ಲಿ ಸಂಜೆ ವೇಳೆ ಆಟವಾಡುತ್ತಿದ್ದ ಬಾಲಕನೊಬ್ಬ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಬಾಲಕ ಸಾಜೀದ್ ಅಷ್ಪಾಕ್ ಅಲಿ ಶೇಖ್(17). ಸ್ನೇಹಿತರ ಜತೆಗೂಡಿ ಇಲ್ಲಿನ ಜಯಂತಿ ಪ್ರೌಢಶಾಲೆ ಸಮೀಪದ ಬಯಲಿನಲ್ಲಿ ಕ್ರಿಕೆಟ್ ಆಡುವ ವೇಳೆ ಸಿಡಿಲು ಬಡಿದಿದೆ. ಸಿಡಿಲಿನ ಅಬ್ಬರಕ್ಕೆ ಭಯಗೊಂಡ ಸ್ನೇಹಿತರು ದೂರ ಓಡಿದ್ದು, ಅಷ್ಫಾಕ್ ಅಲಿ ಅಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣ ಶಿರಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆತನ ಪ್ರಾಣ ಹೋಗಿದ್ದನ್ನು ವೈದ್ಯರು ದೃಢೀಕರಿಸಿದ್ದಾರೆ. ಮರಣೋತ್ತರ ಪರೀಕ್ಷೆ […]