ಮಣಿಪಾಲ: MSDC ಓರಣೆ ಇಂಟರ್ನ್ಯಾಷನಲ್ ವತಿಯಿಂದ ಮೇಕಪ್ ವಿಭಾಗದಲ್ಲಿ ಡಿಪ್ಲೋಮಾ ಮಾಡಲು ಅರ್ಜಿ ಆಹ್ವಾನ.

ಮಣಿಪಾಲ: ಮಣಿಪಾಲ ಸ್ಕಿಲ್ ಡೆವೆಲವ್ಮೆಂಟ್ ಸೆಂಟರ್ (MSDC) ಓರಣೆ ಇಂಟರ್ನ್ಯಾಷನಲ್ ವತಿಯಿಂದ ಮೇಕಪ್ ವಿಭಾಗದಲ್ಲಿ ಡಿಪ್ಲೋಮಾ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಮೇಕಪ್ ಅನ್ನು ವೃತ್ತಿಯಾಗಿ ಮಾಡಬಯಸುವವರಿಗೆ ಇದೊಂದು ಒಳ್ಳೆಯ ಆಯ್ಕೆಯಾಗಿದೆ. ಉದ್ಘಾಟನಾ ಕೊಡುಗೆಯನ್ನು ಪಡೆಯಲು ಕರೆ ಮಾಡಿ: 8123165068, 8123163935
ಮಲ್ಪೆ ಡೆಲ್ಟಾ ಬೀಚ್’ನಲ್ಲಿ ಸ್ವಚ್ಛತಾ ಅಭಿಯಾನ

ಉಡುಪಿ: MAHE MIT NSS ಘಟಕದ 50 ಸ್ವಯಂಸೇವಕರು NSS ಕಾರ್ಯಕ್ರಮ ಅಧಿಕಾರಿ ಡಾ.ಲಕ್ಷ್ಮಣ್ ರಾವ್ ಅವರೊಂದಿಗೆ ಮಲ್ಪೆ ಡೆಲ್ಟಾ ಪಾಯಿಂಟ್ ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. ಬೀಚ್ ನಲ್ಲಿದ್ದ 70ಕ್ಕೂ ಹೆಚ್ಚು ಚೀಲ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಇದು ಸಮುದ್ರ ಮಾಲಿನ್ಯ ಮತ್ತು ಪ್ಲಾಸ್ಟಿಕ್ ಪ್ರಭಾವದ ಬಗ್ಗೆ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ತಿಳಿಸಲು ಆಯೋಜಿಸಲಾದ ಜಾಗೃತಿ ಕಾರ್ಯಕ್ರಮವಾಗಿದೆ. NSS ಸ್ವಯಂಸೇವಕರು ಬೀಚ್ ಕ್ಲೀನಿಂಗ್ ಡ್ರೈವ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರತಿಜ್ಞೆ ಮಾಡಿದರು ಮತ್ತು ಏಕ […]
ಬ್ರಹ್ಮಾವರ: ಜೆಸಿಬಿ ಢಿಕ್ಕಿ – ಸ್ಕೂಟರ್ ಸವಾರ ಮೃತ್ಯು.

ಬ್ರಹ್ಮಾವರ: ಬ್ರಹ್ಮಾವರದ ನೀಲಾವರ ಗ್ರಾಮದಲ್ಲಿ ಜೆಸಿಬಿ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಬ್ರಹ್ಮಾವರದ ಮಟಪಾಡಿಯ ಅಭಿಷೇಕ್ (28) ಮೃತಪಟ್ಟವರು. ಇವರು ನಿನ್ನೆ ಬೆಳಿಗ್ಗೆ ನೀಲಾವರ ಗ್ರಾಮದ ಬಲ್ಜಿ ರೋಡ್‌ನಲ್ಲಿರುವ ಮಟಪಾಡಿಯಿಂದ ಕುಂಜಾಲು ಕಡೆಗೆ ಹೋಗುತ್ತಿದ್ದರು. ಈ ವೇಳೆ ಜೆ.ಸಿ.ಬಿ ವಾಹನವನ್ನು ಅದರ ಚಾಲಕನು ಪಕ್ಕದ ಮಣ್ಣಿನ ರೋಡ್ ನಿಂದ ನಿರ್ಲಕ್ಷತನದಿಂದ ಮುಖ್ಯ ರಸ್ತೆಗೆ ಚಲಾಯಿಸಿ ಅಭಿಷೇಕ್ ರವರ ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಅಭಿಷೇಕ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು […]
ಅಭ್ಯರ್ಥಿಗಳ ಗೆಲುವಿಗೆ ಅವಿರತ ಶ್ರಮಿಸೋಣ: ಮತದಾರರ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಪ್ರತಾಪ್ ಸಿಂಹ ನಾಯಕ್ ಕರೆ

ಮಂಗಳೂರು: ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಪ್ರತಿ ಮತದಾರರನ್ನು ನೇರವಾಗಿ ಸಂಪರ್ಕ ಮಾಡುವ ಮೂಲಕ ಶ್ರಮಿಸಬೇಕು, ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಶಿಕ್ಷಕರ ಕ್ಷೇತ್ರದ ಸಂಚಾಲಕರು ಹಾಗೂ ಶಾಸಕರಾದ ಪ್ರತಾಪ್ ಸಿಂಹ ನಾಯಕ್ ಕರೆ ನೀಡಿದರು. ಇಲ್ಲಿನ ಅಸೈಗೋಳಿಯ ಬಂಟರ ಭವನದಲ್ಲಿ ಭಾನುವಾರ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆ ಹಿನ್ನೆಲೆ ಮತದಾರರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಯೊಂದು ಚುನಾವಣೆಗೂ ಅದರದ್ದೇ ಆದ ಮಹತ್ವವಿದೆ, ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾದ ಡಾ.ಧನಂಜಯ ಸರ್ಜಿ […]
ಕಾರ್ಕಳ: ಕಲ್ಲು ಸಾಗಿಸುತ್ತಿದ್ದ ಲಾರಿ ಪಲ್ಟಿ – ಇಬ್ಬರು ಕಾರ್ಮಿಕರು ಮೃತ್ಯು.

ಕಾರ್ಕಳ: ತಾಲೂಕಿನ ನಿಟ್ಟೆ ಭ್ರಾಮರಿ ಕ್ರಾಸ್ ನಲ್ಲಿ ಕಲ್ಲು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ನಡೆದಿದೆ. ನಿಟ್ಟೆ ಗ್ರಾಮದ ದೂಪದಕಟ್ಟೆ ಮರಿಪರಪುವಿನಿಂದ ಕಲ್ಲು ಲೋಡ್ ಮಾಡಿ ಮಂಗಳೂರು ಹೊರಡುವಾಗ ಲಾರಿ ನಿಯಂತ್ರಣ ತಪ್ಪಿ ಹೊಂಡಕ್ಕುರುಳಿದೆ. ಈ ಪರಿಣಾಮ ಕೊಪ್ಪಳ ಜಿಲ್ಲೆ ಎಲಬುರ್ಗಿ ದೇವಾಳಪುರದ ಕರಿಯಪ್ಪ (22) ಮತ್ತು ನರಿಯಪ್ಪ (27) ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹಾಗೂ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.