ಹಿರಿಯಡಕ: ಮೇ.26 ರಂದು ರಕ್ತದಾನ ಶಿಬಿರ

ಹಿರಿಯಡಕ: ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಿರಿಯಡಕ ವಲಯ, ಎಮ್.ಜೆ. ಫ್ರೆಂಡ್ಸ್ ಮುಂಡುಜೆ, ಸಹಾಯ ಹಸ್ತ ಮುಂಡುಜೆ ಹಿರಿಯಡಕ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವು ಮೇ.26 ರಂದು ಮುಂಡುಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಬ್ರಹ್ಮಾವರ: ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತ್ಯು.

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಹಾವಂಜೆ ಗ್ರಾಮದ ಪರಾರಿಮಠ ಬಳಿ ಬಾವಿಗೆ ಬಿದ್ದ ಚೆಂಡನ್ನು ತೆಗೆಯುವಾಗ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ. ಮೃತಪಟ್ಟವರು ದೀಪಕ್‌ (58) ಎಂದು ತಿಳಿದು ಬಂದಿದೆ. ಅವರು ಮಕ್ಕಳೊಂದಿಗೆ ಕ್ರಿಕೆಟ್‌ ಆಡುವಾಗ ಚೆಂಡು ಸಮೀಪದ ಬಾವಿಗೆ ಬಿದ್ದಿತ್ತು. ಆಗ ಚೆಂಡನ್ನು ಬಾವಿಯಿಂದ ಹೊರಗೆ ತೆಗೆಯಲು ಹೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಹಿರಿಯಡಕ: ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ.

ಹಿರಿಯಡಕ: ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ ಮಾಡಿದ ಆರೋಪಿಗಳ ವಿರುದ್ಧ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಜರಗುತ್ತು ಅಂಜಾರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾದ ರೇವುನಾಥ ಪ್ರೇಮನಾಥ ಸಂದರ್ಶನಕ್ಕೆ ಮೇ 20ರಂದು ಆತನ ಸ್ನೇಹಿತರಾದ ಸುಧೀಶ ಮತ್ತು ವರುಣ ಅವರು ಹಣ್ಣು, ಬಿಸ್ಕೇಟ್‌ಗಳನ್ನು ತಂದಿದ್ದು, ಮುಖ್ಯದ್ವಾರದಲ್ಲಿ ದ್ವಾರ ಪಾಲಕನಾಗಿ ಕರ್ತವ್ಯಕ್ಕೆ ಇದ್ದ ಸಂತೋಷ ದಗಾಟೆ ಅವರಿಗೆ ನೀಡಿ ರೇವುನಾಥ ಅವರಿಗೆ ಕೊಡಲು ತಿಳಿಸಿದ್ದರು. ಅನಂತರ ಕೈದಿಯೊಂದಿಗೆ ಮಾತನಾಡಿ ಅವರು ತೆರಳಿದ್ದರು. ಅನಂತರ ಕಾರಾಗೃಹದ ಸಿಬ್ಬಂದಿ, ಸಹಾಯಕ ಜೈಲರ್‌ ಸೇರಿ […]

ಮಂಗಳೂರಿನಲ್ಲಿ 24ರಿಂದ ನಾಂದಿ ರಂಗಾಯಣ ನಾಟಕೋತ್ಸವ.

ಮೈಸೂರು ರಂಗಾಯಣದ 2023-24 ನೆ ಸಾಲಿನ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳ ಅಭಿನಯ ಮೂರು ನಾಟಕ ಗಳ ಪ್ರದರ್ಶನದ ನಾಂದಿ ನಾಟಕೋತ್ಸವವು, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಮೇ 24 ರಿಂದ 26 ರ ತನಕ ಪ್ರತಿದಿನ ಸಂಜೆ 7.00 ಕ್ಕೆ ನಡೆಯಲಿದೆ. ಅರೆಹೊಳೆ ಪ್ರತಿಷ್ಠಾನ ಆಯೋಜಿಸಿರುವ ಈ ನಾಟಕೋತ್ಸವವು, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾಭಿ (ರಿ) ಮಂಗಳೂರು ಸಹಕಾರದಲ್ಲಿ ನಡೆಯಲಿದೆ. […]

ದೊಡ್ಡಣ್ಣ ಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರಪರಿವಾರ ದೇವರುಗಳಿಗೆ ಸ್ನಪನ ಕಲಶ ಅಭಿಷೇಕ ಸಂಪನ್ನ

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರ ಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ 18ನೇ ಪ್ರತಿಷ್ಠ ವರ್ಧಂತಿ ಮಹೋತ್ಸವದ ಪ್ರಯುಕ್ತ ಆದ್ಯ ಗಣಪತಿಯಾಗ ಸಫರಿವಾರ ದೇವರುಗಳಿಗೆ ಪ್ರಧಾನ ಯಾಗ ಸ್ನಪನ ಕಲಶಾಭಿಷೇಕ ಪ್ರಸನ್ನ ಪೂಜೆ ಮಹಾಪೂಜೆ ಹಾಗೂ ಮಹಾ ಅನ್ನ ಸಂತರ್ಪಣೆ ನೆರವೇರಿತು.ಕ್ಷೇತ್ರ ಧರ್ಮದ ಶ್ರೀ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಶ್ರೀ ಗಣೇಶ್ ಸರಳಾಯ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ವೇದಮೂರ್ತಿ ಕೊಲಕಾಡಿ ವಾದಿರಾಜ ಉಪಾಧ್ಯಾಯ ಅವರು ದಕ್ಷಿಣ […]