ದೇಶದ ರಕ್ಷಣೆ, ಸುಭದ್ರತೆಗಾಗಿ ಕಾಪು ಮಾರಿಗುಡಿಯಲ್ಲಿ ವಿಶೇಷ ಪೂಜೆ

ಉಡುಪಿ: ಸೈನಿಕರಿಗೆ ಶುಭಕೋರಿ ದೇಶಾದ್ಯಂತ ದೇಗುಲಗಳಲ್ಲಿ ಪೂಜೆ ಹೋಮ ಹವನಗಳು ನಡೆಯುತ್ತಿವೆ. ದಂಡಿನ ಮಾರಿಯಮ್ಮ ಎಂದೆ ಪ್ರಖ್ಯಾತವಾಗಿರುವ, ಸೈನಿಕರ ರಕ್ಷಣೆಗೆ ಕಟಿಬದ್ಧವಾದ ಶಕ್ತಿ ದೇಗುಲ ಉಡುಪಿಯ ಕಾಪು ಮಾರಿಯಮ್ಮನಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಇತ್ತೀಚಿಗಷ್ಟೇ ಬ್ರಹ್ಮ ಕಲಾಶೋತ್ಸವದಿಂದ ಹೊಸ ಚೇತನ ಪಡೆದಿರುವ ದೇಗುಲದಲ್ಲಿ ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸೈನಿಕರು ಆರಾಧಿಸಿದ ತಾಯಿ ಎಂದೇ ಪ್ರತೀತಿ ಇರುವ ಕಾಪು ಮಾರಿಯಮ್ಮನ ಈ ಪೂಜೆ ದೇಶದ ರಕ್ಷಣೆ ಹಾಗೂ ಸುಭದ್ರತೆಗೆ ನಾಂದಿಯಾಗಲಿ ಎಂದು ಭಕ್ತರು ಪ್ರಾರ್ಥಿಸಿದ್ದಾರೆ. ಕಾಪು ಎಂದರೆ […]
ಉಡುಪಿ: ಶುಕ್ರವಾರದ ಜುಮಾ ನಮಾಜ್ ಬಳಿಕ ದೇಶದ ಒಳಿತಿಗಾಗಿ ಮುಸಲ್ಮಾನರಿಂದ ಸಾಮೂಹಿಕ ಪ್ರಾರ್ಥನೆ

ಉಡುಪಿ: ಭಾರತ ಪಾಕ್ ಉದ್ವಿಗ್ನತೆ ಹಿನ್ನೆಲೆಯಲ್ಲಿ ಶುಕ್ರವಾರ (ಮೇ.09)ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.ದೇಶದಲ್ಲಿ ಶಾಂತಿ ನೆಲೆಸುವಂತೆ ಮುಸಲ್ಮಾನ ಬಾಂಧವರು ದುಆ ನಿರ್ವಹಿಸಿದರು.ಶತ್ರು ರಾಷ್ಟ್ರದ ಯುದ್ಧದಲ್ಲಿ ದೇಶಕ್ಕೆ ಹಿತವಾಗಬೇಕು, ಆದಷ್ಟು ಬೇಗ ದೇಶ ಮತ್ತೆ ಶಾಂತಿಯತ್ತ ಮರಳಬೇಕು ಎಂದು ಶುಕ್ರವಾರದ ಜುಮಾ ನಮಾಜಿನ ಬಳಿಕ ಧರ್ಮಗುರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಬಳಿಕ ಮಾತನಾಡಿದ ಮುಸ್ಲಿಂ ಮುಖಂಡ ಇಕ್ಬಾಲ್ ಮನ್ನಾ ಅವರು, ಪೆಹಲ್ಗಾಂ ದಾಳಿಯ ನಂತರ ನಾವು ಪಾಕಿಗಳಿಗೆ ತಕ್ಕ ಪಾಠ ಕಲಿಸಿದ್ದೇವೆ.ಪಾಕಿಸ್ಥಾನಕ್ಕೆ ಹೊಡೆಯಲು ಭಾರತಕ್ಕೆ ಅರ್ಧ ಗಂಟೆ ಸಾಕು.ಪದೇಪದೇ […]
ಮೇ 14ರಿಂದ ಉಡುಪಿಯಲ್ಲಿ “ಮಾವು ಮೇಳ-2025”

ಉಡುಪಿ: ಸೀಕೋ ಮತ್ತು ಯು.ಬಿ. ಫ್ರೂಟ್ಸ್, ಮಂಗಳೂರು ಇವರ ಆಶ್ರಯದಲ್ಲಿ ಐದು ದಿನಗಳ “ಮಾವು ಮೇಳ-2025” ಇದೇ ಮೇ 14 ರಿಂದ 18 ರವರೆಗೆ ಉಡುಪಿ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ನಡೆಯಲಿದೆ ಎಂದು ಸೀಕೋ ಮತ್ತು ಯು.ಬಿ. ಫ್ರೂಟ್ಸ್ ಪಾಲುದಾರ ಅಬ್ದುಲ್ ಕುಂಞಿ ತಿಳಿಸಿದರು. ಈ ಕುರಿತು ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೇ 14ರಂದು ಸಂಜೆ 4 ಗಂಟೆಗೆ ವಿಧಾನಸಭೆ ಸಭಾಪತಿ ಯು.ಟಿ ಖಾದರ್ ಅವರು ಮಾವು ಮೇಳಕ್ಕೆ ಚಾಲನೆ ನೀಡಲಿದ್ದಾರೆ. […]
ಉಡುಪಿ:IND-PAK WAR:ಮಲ್ಪೆಯಲ್ಲಿ ಮೊಳಗಿದ ಸೈರನ್.!

ಉಡುಪಿ: ಭಾರತ-ಪಾಕಿಸ್ಥಾನ ನಡುವಿನ ಯುದ್ಧಭೀತಿಯ ಮುನ್ನೆಚ್ಚರಿಕೆ ಕ್ರಮವಾಗಿ ಮಲ್ಪೆಯ ಬಾಪುತೋಟದಲ್ಲಿರುವ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಅಗ್ನಿಶಾಮಕ ದಳದಿಂದ ನಾಗರಿಕ ರಕ್ಷಣಾ ಅಣಕು ಕಾರ್ಯಾಚರಣೆ ನಡೆಸಲಾಯಿತು. ಸಂಜೆ ಸುಮಾರು 4 ರ ವೇಳೆಗೆ ಸಂಸ್ಥೆಯ ಸೈರನ್ ಮೊಳಗತೊಡಗಿದ್ದು, ಕೂಡಲೇ ಅಗ್ನಿಶಾಮಕ ದಳದವರು ಆಗಮಿಸಿ ವಿದ್ಯುತ್ ಹಾಗೂ ಗ್ಯಾಸ್ ಸಂಪರ್ಕವನ್ನು ಕಡಿತಗೊಳಿಸಿದರು. ಕರ್ತವ್ಯ ನಿರತರಾಗಿದ್ದವರನ್ನು ಕೂಡಲೇ ಸುರಕ್ಷಿತ ಸ್ಥಳಕ್ಕೆ ರವಾನಿಸಿ ಎಷ್ಟು ಮಂದಿ ಇದ್ದಾರೆ ಎಂಬ ಮಾಹಿತಿ ಪಡೆದು ಉಳಿದವರಿಗೆ ಒಳಭಾಗದಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಅವರನ್ನು ಪತ್ತೆ ಹಚ್ಚಲಾಯಿತು. […]
Ind-Pak War: ಭಾರತದ ದಾಳಿಗೆ ರಾತ್ರೋ ರಾತ್ರಿ ಪಾಕಿಸ್ತಾನದ ಮೂರು ಏರ್ ಬೇಸ್ ಉಡಿಸ್- ಮೇ 14ರವರೆಗೆ ಉತ್ತರ ಭಾರತದಲ್ಲಿ ವಿಮಾನಯಾನ ಸಂಪೂರ್ಣ ಸ್ಥಗಿತ

ನವದೆಹಲಿ: ಕಳೆದ 48 ಗಂಟೆಯಲ್ಲಿ ಪಾಕ್ ನಿಂದ ಭಾರತದ 36 ನಗರಗಳು ಟಾರ್ಗೆಟ್ ನಲ್ಲಿದ್ದು 20 ನಗರಗಳ ಮೇಲೆ ಡ್ರೋನ್, ಶೆಲ್ ದಾಳಿ ನಡೆಯುತ್ತಲೇ ಇದೆ. ದಾಳಿಯನ್ನು ಭಾರತೀಯ ಸೇನೆ ತಡೆಯುತ್ತಲೇ ಇದೆ (Ind-Pak War).ಭಾರತೀಯ ಕಾಲಮಾನದಂತೆ ಮದ್ಯರಾತ್ರಿ 2 ಗಂಟೆಗೆ ಪಾಕಿಸ್ತಾನದ ಲಾಹೋರ್ ನ ಸೇನೆಯ ಡಿಎಚ್ಎ ಬಳಿ ಭಾರಿ ಪ್ರಮಾಣದ ಸ್ಪೋಟದ ಸದ್ದಾಗಿದೆ. ಸ್ವಲ್ಪ ಸಮಯದ ನಂತರ ಪಾಕಿಸ್ತಾನದ ವಾಯುಸೇನೆಯ ಏರ್ ಬೇಸ್ ಗಳಾದ ರಾವಲ್ಪಿಂಡಿಯ ನೂರ್ ಖಾನ್ ಏರ್ ಬೇಸ್ ಚಕ್ಲಾಲ, ಪಂಜಾಬ್ […]