ವಿಶ್ವ ನಂ1 ಪಟ್ಟಕ್ಕೇರಿದ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ

ನವದೆಹಲಿ: ಭಾರತದ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸೋಮವಾರ ಇತ್ತೀಚಿನ ಪುರುಷರ ಜಾವೆಲಿನ್ ಎಸೆತದ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ ಮತ್ತು ವಿಶ್ವ ಅಥ್ಲೆಟಿಕ್ಸ್ ಬಿಡುಗಡೆ ಮಾಡಿದ ಶ್ರೇಯಾಂಕದಲ್ಲಿ ಹೊಸ ವಿಶ್ವ ನಂ.1 ಆಗಿ ಹೊರಹೊಮ್ಮಿದ್ದಾರೆ. ಚೋಪ್ರಾ 1455 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಆಗಸ್ಟ್ 30, 2022 ರಿಂದ ಚೋಪ್ರಾ ನಂ.2 ಸ್ಥಾನದಲ್ಲಿದ್ದರು, ಆದರೆ ಈ ವಾರ ಹಾಲಿ ವಿಶ್ವ ಚಾಂಪಿಯನ್ ಪೀಟರ್ಸ್ ಅವರನ್ನು ಹಿಂದಿಕ್ಕಿ ನಂ.1 ಪಟ್ಟವನ್ನು ಅಲಂಕರಿಸಿದ್ದಾರೆ.

ಆರ್ಚರಿ ವಿಶ್ವಕಪ್: ನಂಬರ್ 1 ಆಟಗಾರನನ್ನು ಮಣಿಸಿ ಮೊದಲ ವೈಯಕ್ತಿಕ ಚಿನ್ನ ಗೆದ್ದ ಭಾರತೀಯ ಪ್ರಥಮೇಶ್ ಸಮಾಧಾನ್ ಜಾವ್ಕರ್

ಚೀನಾದ ಶಾಂಘೈನಲ್ಲಿ ನಡೆದ ಆರ್ಚರಿ ವಿಶ್ವಕಪ್‌ನ 2ನೇ ಹಂತದ ಪಂದ್ಯದಲ್ಲಿ ಭಾರತದ ಪ್ರಥಮೇಶ್ ಸಮಾಧಾನ್ ಜಾವ್ಕರ್ ಅವರು ಶನಿವಾರದಂದು ವಿಶ್ವದ ನಂಬರ್ 1 ಆಟಗಾರ ಮೈಕ್ ಸ್ಕ್ಲೋಸರ್ ಅವರನ್ನು ಸೋಲಿಸಿ ಪುರುಷರ ವೈಯಕ್ತಿಕ ಕಾಂಪೌಂಡ್ ಚಿನ್ನದ ಪದಕವನ್ನು ಗೆದ್ದುಕೊಂಡರು. 19 ವರ್ಷದ ಜಾವ್ಕರ್ ನಿಕಟ ಪೈಪೋಟಿಯ ಫೈನಲ್‌ನಲ್ಲಿ ಡಚ್ ಬಿಲ್ಲುಗಾರನನ್ನು 149-148 ಅಂಕಗಳಿಂದ ಸೋಲಿಸಿದರು. THE CLOSEST MATCH 😲🔥Prathamesh Jawkar 🇮🇳 wins his firts-ever individual gold in the circuit in Shanghai.#ArcheryWorldCup […]

Virat Kohli: ದಾಖಲೆಯ ಸೆಂಚುರಿ ಸಿಡಿಸಿದ ಕಿಂಗ್ ಕೊಹ್ಲಿ

Virat Kohli Century: ಅಲ್ಲದೆ ಐಪಿಎಲ್​ನಲ್ಲಿ ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳಲ್ಲಿ ಶತಕ ಬಾರಿಸಿದ RCB ತಂಡದ ಮೊದಲ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ.   IPL 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ ದಾಖಲೆ ವಿರಾಟ್ ಕೊಹ್ಲಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. […]