ಐಪಿಎಲ್ ಹರಾಜು: 24.75 ಕೋಟಿ ರೂ ಗೆ ಕೆಕೆಆರ್ ಪಾಲಾದ ಸ್ಟಾರ್ಕ್; 20.50 ಕೋಟಿಗೆ ಕಮಿನ್ಸ್ ಎಸ್.ಆರ್.ಎಚ್ ಪಾಲು!!

ದುಬೈ: ಆಸ್ಟ್ರೇಲಿಯದ ನಾಯಕ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಐಪಿಎಲ್ ನಲ್ಲಿ ದಾಖಲೆ ಮೊತ್ತಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಪಾಲಾಗಿದ್ದಾರೆ. ವಿಶ್ವ ಕಪ್ ವಿಜೇತ ನಾಯಕ ಬರೋಬ್ಬರಿ 20.50 ಕೋಟಿ ರೂ ಬೆಲೆಗೆ ಎಸ್.ಆರ್.ಎಚ್ ಪಾಲಾಗಿದ್ದಾರೆ. ಕಮಿನ್ಸ್ ಅವರ ಸಹ ಆಟಗಾರ ಮತ್ತು ಆಸ್ಟ್ರೇಲಿಯಾದ ವಿಶ್ವಕಪ್ ಫೈನಲ್ ಹೀರೋ ಟ್ರಾವಿಸ್ ಹೆಡ್ ಅವರನ್ನು ಎಸ್‌ಆರ್‌ಹೆಚ್ ₹6.80 ಕೋಟಿಗೆ ಪಡೆದುಕೊಂಡಿದೆ. ಆಸ್ಟ್ರೇಲಿಯಾ ಬೌಲರ್ ಮಿಶೆಲ್ ಸ್ಟಾರ್ಕ್ ಅವರು ತಮ್ಮ ನಾಯಕನ ದಾಖಲೆಯನ್ನು ಮುರಿದು 24.75 ಕೋಟಿ ರೂ ಗಳಿಗೆ ಕೆ.ಕೆ.ಆರ್ […]

ಐಪಿಎಲ್ ನಾಯಕ ಸ್ಥಾನದ ಯುಗಾಂತ್ಯಕ್ಕೆ ಮುಂಬೈ ಇಂಡಿಯನ್ಸ್ ನಿಂದ ಭಾವಪೂರ್ಣ ವಿದಾಯ

ಮುಂಬೈ: ಮುಂಬೈ ಇಂಡಿಯನ್ಸ್ (MI) ತಂಡವು ನಾಯಕ ಸ್ಥಾನದಿಂದ ಹೊರನಡೆಯುತ್ತಿರುವ ತನ್ನ ಆಟಗಾರ ರೋಹಿತ್ ಶರ್ಮಾ ಅವರಿಗೆ ಹೃತ್ಪೂರ್ವಕ ವಿದಾಯ ಸಲ್ಲಿಸಿದೆ. ಶರ್ಮಾ ಅವರ ಐಪಿಎಲ್ ಪಯಣದ ಯುಗ ಅಂತ್ಯವಾಗಿದೆ. ಶರ್ಮಾ ಅವರ ನಾಯಕತ್ವದಲ್ಲಿ, ತಂಡವು 2013 ರಿಂದ ಐದು IPL ಪ್ರಶಸ್ತಿಗಳು ಮತ್ತು ಚಾಂಪಿಯನ್ಸ್ ಲೀಗ್ T20 ಗೆಲುವು ಸೇರಿದಂತೆ ಗಮನಾರ್ಹ ಯಶಸ್ಸನ್ನು ಸಾಧಿಸಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಶರ್ಮಾ ಅವರ ಅಪ್ರತಿಮ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸಿದೆ. ಇನ್ನು ಮುಂದೆ ತಂಡದ ನ್ಯಾಕತ್ವವನ್ನು ಹಾರ್ದಿಕ್ […]

ಕ್ರಿಕೆಟ್ ದಂತಕತೆ ಎಂ.ಎಸ್. ಧೋನಿಯ ಜರ್ಸಿ ನಂ.7 ಇನ್ನು ಮುಂದೆ ಆಟಗಾರರಿಗೆ ಲಭ್ಯವಿಲ್ಲ: ಜೆರ್ಸಿಗೆ ನಿವೃತ್ತಿ ನೀಡಲು BCCI ನಿರ್ಧಾರ

ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ಐಕಾನಿಕ್ ನಂ.7 ಜೆರ್ಸಿ ಇನ್ನು ಮುಂದೆ ಯಾವುದೇ ಭಾರತೀಯ ಆಟಗಾರ ಪಡೆಯಲು ಸಾಧ್ಯವಾಗುವುದಿಲ್ಲ. ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ಧೋನಿ ಅವರ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದ ಮೂರು ವರ್ಷಗಳ ನಂತರ, ಧೋನಿ ಅವರ ವೃತ್ತಿಜೀವನದುದ್ದಕ್ಕೂ ಅವರ ಜೊತೆ ಇದ್ದ ಸಂಖ್ಯೆಗೆ ನಿವೃತ್ತಿ ನೀಡಲು BCCI ನಿರ್ಧರಿಸಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, 2004 ರಲ್ಲಿ ಚೊಚ್ಚಲ ಪ್ರವೇಶ ಮಾಡಿದ ನಂತರ ಧೋನಿ ಕ್ರೀಡೆಗೆ ನೀಡಿದ ಕೊಡುಗೆಗೆ ಗೌರವ […]

ಕೇಂದ್ರ ಸರ್ಕಾರ ಆರೋಪ : ಭಾರತ ವಿರೋಧಿ ಚಟುವಟಿಕೆಗಳಿಗೆ ಕೆನಡಾ ನಿರಂತರ ಅವಕಾಶ

ನವದೆಹಲಿ: ‘ಭಾರತ ವಿರೋಧಿ ಚಟುವಟಿಕೆಗಳಿಗೆ ಕೆನಡಾ ನಿರಂತರವಾಗಿ ಅವಕಾಶ ಮಾಡಿಕೊಡುತ್ತಿದೆ’ ಎಂದು ಆರೋಪಿಸಿದೆ. ಖಲಿಸ್ತಾನಿ ಉಗ್ರ ಹರ್​ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿಚಾರವಾಗಿ ಭಾರತದ ಜೊತೆ ರಾಜತಾಂತ್ರಿಕ ಸಂಬಂಧಗಳಿಗೆ ಧಕ್ಕೆ ತಂದುಕೊಂಡಿರುವ ಕೆನಡಾ ಪ್ರಧಾನಿ ಜಸ್ಟಿನ್​ ಟ್ರುಡೊ ವಿರುದ್ಧ ಕೇಂದ್ರ ಸರ್ಕಾರ ಮತ್ತೊಮ್ಮೆ ವಾಗ್ದಾಳಿ ನಡೆಸಿದೆ. ಕೆನಡಾ ವಿರುದ್ಧ ಭಾರತ ಸರ್ಕಾರ ಗಂಭೀರ ಆರೋಪ ಮಾಡಿದೆ. ಆ ದೇಶದಲ್ಲಿ ಭಾರತ ವಿರುದ್ಧದ ಉಗ್ರ ಕೃತ್ಯಗಳಿಗೆ ಸರ್ಕಾರವೇ ಅವಕಾಶ ನೀಡುತ್ತಿದೆ ಎಂದು ಟೀಕಿಸಿದೆ. ಇಡೀ ವಿಶ್ವವೇ ಭಯೋತ್ಪಾದನೆಯ ವಿರುದ್ಧ […]

ನ.19 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ v/s ಆಸ್ಟ್ರೇಲಿಯಾ ವರ್ಲ್ಡ್ ಕಪ್ ಫೈನಲ್: ಎಲ್ಲರ ಚಿತ್ತ ಭಾರತದತ್ತ

ಗುರುವಾರ ಈಡನ್ ಗಾರ್ಡನ್‌ನಲ್ಲಿ ನಡೆದ 2023 ರ ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತದ ವಿರುದ್ಧ ಫೈನಲ್ ಪ್ರಶಸ್ತಿ ಹಣಾಹಣಿಗೆ ಸಿದ್ದವಾಗಿದೆ. ನವೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಆಸ್ಟ್ರೇಲಿಯಾ ತಂಡವು 3 ವಿಕೆಟ್ ಮತ್ತು 2.4 ಓವರ್‌ಗಳು ಉಳಿದಿರುವಂತೆಯೇ 213 ರನ್‌ಗಳನ್ನು ಬೆನ್ನಟ್ಟುವ ಮೂಲಕ ರೋಮಾಂಚಕವಾಗಿ ಮೇಲುಗೈ ಸಾಧಿಸಿತು. ಐದು ಬಾರಿ ಟೂರ್ನಿ ಗೆದ್ದಿರುವ ಆಸ್ಟ್ರೇಲಿಯಾಕ್ಕೆ ಇದು 8ನೇ ಏಕದಿನ ವಿಶ್ವಕಪ್. ಭಾರತವು ಎರಡು […]