ಮೊದಲ ಏಕದಿನ ಕ್ರಿಕೆಟ್ನಲ್ಲಿ ಬಾಂಗ್ಲಾಗೆ ಶರಣಾದ ಭಾರತ ತಂಡ

ಮೀರ್‌ಪುರ್ (ಬಾಂಗ್ಲಾದೇಶ): ಢಾಕಾದ ಶೇರ್ -ಎ- ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಳೆ ಕಾರಣ ಡಿಎಲ್ಎಸ್ ಅನ್ವಯ 44 ಓವರ್ಗಳಿಗೆ ಏಕದಿನ ಪಂದ್ಯವನ್ನು ಸೀಮಿತಗೊಳಿಸಲಾಗಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಂಡ 34 ಓವರ್ಗಳಲ್ಲಿ 152 ರನ್ ಗಳಿಸಿ ಆಲೌಟ್ ಆಗಿತ್ತು. ಈ ಸಾಧಾರಣ ಮೊತ್ತದ ಗುರಿ ತಲುಪುವಲ್ಲಿ ಭಾರತೀಯ ತಂಡ ವಿಫಲವಾಗಿದೆ. 35.5 ಓವರ್ಗಳಲ್ಲಿ ಕೇವಲ 113 ರನ್ಗಳಿಗೆ ಸರ್ವಪತನ ಕಂಡಿದೆ. ಈ ಗೆಲುವಿನ ಮೂಲಕ ಬಾಂಗ್ಲಾ ಮಹಿಳಾ ತಂಡವು ಐತಿಹಾಸ ನಿರ್ಮಿಸಿದೆ. ಇದು […]
ಅಶ್ವಿನ್ – ಜಡ್ಡು ಸ್ಪಿನ್ ದಾಳಿ ಹೊಗಳಿದ ನಾಯಕ ರೋಹಿತ್

ಡೊಮಿನಿಕಾ(ವೆಸ್ಟ್ ಇಂಡೀಸ್): ಪದಾರ್ಪಣಾ ಪಂದ್ಯದಲ್ಲಿಯೇ ಶತಕ ಸಾಧನೆ ಮಾಡಿದ ಯಶಸ್ವಿ ಜೈಸ್ವಾಲ್, ಹಿರಿಯ ಆಟಗಾರ ಆರ್ ಅಶ್ವಿನ್ ಅವರ ಸ್ಪಿನ್ಮಾಂತ್ರಿಕತೆಗೆ ತರಗೆಲೆಯಂತೆ ಉದುರಿದ ವಿಂಡೀಸ್ ಬ್ಯಾಟಿಂಗ್ ಪಡೆ ಯಾವುದೇ ಹಂತದಲ್ಲಿ ಪ್ರತಿರೋಧ ಒಡ್ಡದೇ ಸೋಲೊಪ್ಪಿಕೊಂಡಿತು.ಯುವ ಪಡೆಯೊಂದಿಗೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ಭಾರತ ಕ್ರಿಕೆಟ್ ತಂಡ ಮೊದಲ ಟೆಸ್ಟ್‌ನಲ್ಲಿ ಕೆರೆಬಿಯನ್ನರ ವಿರುದ್ಧ ಇನಿಂಗ್ಸ್ ಮತ್ತು 141 ರನ್ ವಿಕ್ರಮ ಸಾಧಿಸಿದೆ.ಚೊಚ್ಚಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಸ್ಪಿನ್ ದ್ವಯರಾದ ಅಶ್ವಿನ್- […]
ಅಮೆರಿಕ ಓಪನ್ ಬ್ಯಾಡ್ಮಿಂಟನ್ ನಿಂದ ಸೋತು ಹೊರಬಿದ್ದ ಸಿಂಧು, ನಾಲ್ಕರಘಟ್ಟಕ್ಕೆ ಲಗ್ಗೆಯಿಟ್ಟ ಲಕ್ಷ್ಯ ಸೇನ್

ಕೌನ್ಸಿಲ್ ಬ್ಲಫ್ಸ್ (ಯುಎಸ್‌ಎ): ಕೆನಡಾ ಓಪನ್ ಗೆದ್ದು ಬೀಗಿದ್ದ ಭಾರತದ ತಾರಾ ಷಟ್ಲರ್ ಲಕ್ಷ್ಯ ಸೇನ್ ಅವರು ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಬ್ಯಾಡ್ಮಿಂಟನ್ನಲ್ಲಿ ಪುರುಷರ ಸಿಂಗಲ್ಸ್ ಸೆಮಿಫೈನಲ್ ತಲುಪಿದರು.ಶುಕ್ರವಾರ ರಾತ್ರಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಲಕ್ಷ್ಯಸೇನ್ 21-10, 21-17ರಲ್ಲಿ ಭಾರತದವರೇ ಆದ ಶಂಕರ್ ಮುತ್ತುಸಾಮಿ ಸುಬ್ರಮಣಿಯನ್ ಅವರನ್ನು ಸೋಲಿಸಿದರು. ಪಂದ್ಯದಲ್ಲಿ ಪೂರ್ಣ ಪ್ರಾಬಲ್ಯ ಮೆರೆದ ಸೇನ್, ಯಾವುದೇ ಸಮಯದಲ್ಲಿ ಶಂಕರ್ ಪುಟಿದೇಳದಂತೆ ತಡೆದರು. ಮೊದಲ ಸೆಟ್ನ ಆರಂಭದಲ್ಲಿ 7-1 ರಿಂದ ಮುನ್ನಡೆ ಸಾಧಿಸಿದ ಸೇನ್ ಪಾಯಿಂಟ್ […]
2024ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಆಟಗಾರ ಶ್ರೀ ಏಷ್ಯನ್ ಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಲಾಂಗ್ ಜಂಪರ್ ಶ್ರೀಶಂಕರ್

ಬ್ಯಾಂಕಾಕ್: 24 ವರ್ಷದ ಶ್ರೀಶಂಕರ್ ಅವರು ತಮ್ಮ ಅಂತಿಮ ಸುತ್ತಿನ ಜಿಗಿತದಲ್ಲಿ 8.37 ಮೀಟರ್‌ಗಳನ್ನು ಕ್ರಮಿಸುವ ಮೂಲಕ ಒಲಿಂಪಿಕ್ ಅರ್ಹತೆ ಸಾಧಿಸಿದ್ದಾರೆ. ಪ್ಯಾರಿಸ್ ಗೇಮ್ಸ್ ಮಾರ್ಕ್ 8.27 ಮೀ ಆಗಿದ್ದು, ಅರ್ಹತಾ ಅವಧಿ ಜುಲೈ 1 ರಂದು ಪ್ರಾರಂಭವಾಗಿದೆಸ್ಟಾರ್ ಇಂಡಿಯಾ ಲಾಂಗ್ ಜಂಪರ್ ಮುರಳಿ ಶ್ರೀಶಂಕರ್ ಶನಿವಾರ ಬ್ಯಾಂಕಾಕ್ ನಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 8.37 ಮೀಟರ್‌ಗಳ ಎರಡನೇ ವೃತ್ತಿಜೀವನದ ಅತ್ಯುತ್ತಮ ಪ್ರಯತ್ನದೊಂದಿಗೆ ಬೆಳ್ಳಿ ಪದಕ ಗೆದ್ದು 2024 ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.ಚೈನೀಸ್ […]
ಶತಕ ಸಿಡಿಸಿದ ಎಡಗೈ ಬ್ಯಾಟ್ಸ್ಮನ್: ಚೊಚ್ಚಲ ಟೆಸ್ಟ್ನಲ್ಲೇ ಯಶಸ್ವಿ ಜೈಸ್ವಾಲ್

ಹೈದರಾಬಾದ್: ಡೊಮಿನಿಕಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ದಿನದಂದು ಯಶಸ್ವಿ ಜೈಸ್ವಾಲ್ ಅಜೇಯ 143 ರನ್ ಗಳಿಸಿದರು. ವೆಸ್ಟ್ ಇಂಡೀಸ್‌ನ 150ಕ್ಕೆ ಪ್ರತ್ಯುತ್ತರವಾಗಿ, ಭಾರತವು 312/2ಕ್ಕೆ ಆರಾಮವಾಗಿ ಸಿದ್ಧವಾಯಿತು. ಜೈಸ್ವಾಲ್ ಜೊತೆಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಸಾಥ್ ನೀಡಿದ್ದಾರೆ.ಯುವ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್‌ಗೆ ಮುಂಬೈನಲ್ಲಿ ಪಾನಿಪುರಿ ಮಾರಾಟ ಮಾಡುವುದರಿಂದ ಹಿಡಿದು ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಸೇರುವವರೆಗಿನ ಇದು ಸುದೀರ್ಘ ಹಾಗೂ ಪ್ರಯಾಸಕರವಾದ ಪ್ರಯಾಣ ಆಗಿದೆ. ಚೊಚ್ಚಲ […]