ಎರಡನೇ ಸುತ್ತಿಗೆ ಪ್ರವೇಶಿಸಿದ ಶ್ರೀಕಾಂತ್, ಪ್ರಣಯ್​​, ಪಿವಿ ಸಿಂಧು

ಸಿಡ್ನಿ (ಆಸ್ಟ್ರೇಲಿಯಾ):ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್ 21-18, 21-7ರಲ್ಲಿ ವಿಶ್ವದ 14ನೇ ಶ್ರೇಯಾಂಕದ ಜಪಾನ್‌ನ ಷಟ್ಲರ್ ಕೆಂಟಾ ನಿಶಿಮೊಟೊ ಅವರನ್ನು ಸೋಲಿಸಿದರು. ಗುರುವಾರ ನಡೆಯಲಿರುವ ಎರಡನೇ ಸುತ್ತಿನಲ್ಲಿ ಅವರು ಚೈನೀಸ್ ತೈಪೆಯ ಸು ಲಿ ಯಾಂಗ್ ವಿರುದ್ಧ ಆಡಲಿದ್ದಾರೆ. ಭಾರತದ ಅತ್ಯುನ್ನತ ಶ್ರೇಯಾಂಕದ ಸಿಂಗಲ್ಸ್ ಷಟ್ಲರ್ ಪ್ರಣಯ್ ಅವರು ಹಾಂಕಾಂಗ್‌ನ ವಿಶ್ವದ ನಂ. 15 ರ ಲೀ ಚೆಯುಕ್ ಯಿಯು ಅವರ ಸವಾಲನ್ನು ಎದುರಿಸಿ 21-18, 16-21, 21-15 ಅಂತರದಲ್ಲಿ ಗೆದಿದ್ದಾರೆ. ವಿಶ್ವ 9ನೇ ಶ್ರೇಯಾಂಕದ ಆಟಗಾರ ಪ್ರಣಯ್​​ […]

ವಿಶ್ವ ಶ್ರೇಯಾಂಕದಲ್ಲಿ ಉತ್ತಮ ಏರಿಕೆ ಕಂಡ ಎಚ್‌ಎಸ್ ಪ್ರಣಯ್, ಲಕ್ಷ್ಯ ಸೇನ್:ಬಿಡಬ್ಲ್ಯೂಎಫ್

ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಕಿಡಂಬಿ ಶ್ರೀಕಾಂತ್ ಕೂಡ ತಮ್ಮ ಶ್ರೇಯಾಂಕದಲ್ಲಿ ಸುಧಾರಣೆ ಕಂಡಿದ್ದು, ಒಂದು ಸ್ಥಾನ ಮೇಲೇರಿ 19ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಮತ್ತೊಂದು ಗಮನಾರ್ಹ ಪ್ರಗತಿಯನ್ನು ರಾಷ್ಟ್ರೀಯ ಚಾಂಪಿಯನ್ ಮಿಥುನ್ ಮಂಜುನಾಥ್ ನಾಲ್ಕು ಸ್ಥಾನಗಳನ್ನು ಮೇಲಕ್ಕೇರಿ 50 ನೇ ಸ್ಥಾನವನ್ನು ಪಡೆದರು. ಭಾರತದ ಬ್ಯಾಡ್ಮಿಂಟನ್ ಆಟಗಾರರಾದ ಎಚ್‌ಎಸ್ ಪ್ರಣಯ್ ಮತ್ತು ಲಕ್ಷ್ಯ ಸೇನ್ ಬಿಡಬ್ಲ್ಯೂಎಫ್ ವಿಶ್ವ ಶ್ರೇಯಾಂಕದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ.ಬಿಡಬ್ಲ್ಯೂಎಫ್ ವಿಶ್ವ ಶ್ರೇಯಾಂಕದಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಎಚ್‌ಎಸ್ ಪ್ರಣಯ್ ಮತ್ತು […]

2023ರ ಏಕದಿನ ವಿಶ್ವಕಪ್‌ ಗೆ ನೆಟ್‌ನಲ್ಲಿ ಅಭ್ಯಾಸಕ್ಕಿಳಿದ ವಿಲಿಯಮ್ಸನ್

ವಿಶ್ವಕಪ್ 2023ರ ಉದ್ಘಾಟನಾ ಪಂದ್ಯವು ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವೆ ಅಕ್ಟೋಬರ್ 5 ರಂದು ನಡೆಯಲಿದೆ. ಇದಕ್ಕೂ ಮುನ್ನ ನ್ಯೂಜಿಲೆಂಡ್‌ಗೆ ಶುಭ ಸುದ್ದಿ ಸಿಕ್ಕಂತಾಗಿದೆ. ನ್ಯೂಜಿಲೆಂಡ್ ನಾಯಕ ಬಲಗೈ ಸ್ಟಾರ್ ಬ್ಯಾಟರ್ ಕೇನ್ ವಿಲಿಯಮ್ಸನ್ ಗಾಯದಿಂದ ಚೇತರಿಸಿಕೊಂಡ ಬಳಿಕ ನೆಟ್ ಅಭ್ಯಾಸ ಆರಂಭಿಸಿದ್ದಾರೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಗಾಯದಿಂದ ಚೇತರಿಸಿಕೊಂಡು ನೆಟ್ಸ್ನಲ್ಲಿ ಅಭ್ಯಾಸಕ್ಕಿಳಿಸಿದ್ದಾರೆ. ನೆಟ್ಸ್ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ವಿಲಿಯಮ್ಸನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 2023ರ ಐಸಿಸಿ ಏಕದಿನ ವಿಶ್ವಕಪ್‌ ಆರಂಭಕ್ಕೆ ಇನ್ನು 2 ತಿಂಗಳು […]

ಭಾರತೀಯ ವನಿತೆಯರ ತಂಡವು ಸ್ಪ್ಯಾನಿಷ್ ಹಾಕಿ ಫೆಡರೇಶನ್ ಇಂಟರ್ನ್ಯಾಷನಲ್ ಟೂರ್ನಮೆಂಟ್‌ನ ಪ್ರಶಸ್ತಿ ಗೆದ್ದು ಆಗ್ರಸ್ಥಾನ

ಬಾರ್ಸಿಲೋನಾ (ಸ್ಪೇನ್): ಭಾನುವಾರ ಇಲ್ಲಿ ನಡೆದ ಮೂರು ರಾಷ್ಟ್ರಗಳ 100ನೇ ವಾರ್ಷಿಕೋತ್ಸವದ ಸ್ಪ್ಯಾನಿಷ್ ಹಾಕಿ ಫೆಡರೇಶನ್ ಇಂಟರ್ನ್ಯಾಷನಲ್ ಟೂರ್ನಮೆಂಟ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಆತಿಥೇಯ ಸ್ಪೇನ್ ಅನ್ನು 3-0 ಗೋಲುಗಳಿಂದ ಸೋಲಿಸಿತು.100ನೇ ವಾರ್ಷಿಕೋತ್ಸವದ ಸ್ಪ್ಯಾನಿಷ್ ಹಾಕಿ ಫೆಡರೇಶನ್ ಇಂಟರ್ನ್ಯಾಷನಲ್ ಟೂರ್ನಮೆಂಟ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡವು ಆತಿಥೇಯ ಸ್ಪೇನ್ ಅನ್ನು 3-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿದೆ.ಈ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಟೇಬಲ್ ಟಾಪರ್‌ ಆದ ಭಾರತವು ಬಲವಾದ ಆರಂಭವನ್ನು ಪಡೆಯಿತು. ನಿಖರವಾದ ಪಾಸ್‌ಗಳೊಂದಿಗೆ ಶಿಸ್ತುಬದ್ಧ […]

ಆರಂಭಿಕರ ಎಲೈಟ್ ಪಟ್ಟಿಯಲ್ಲಿ ಕಿಶನ್ ನಂ.1: ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ಇಶಾನ್​​​.

ಬಾರ್ಬಡೋಸ್ (ವೆಸ್ಟ್​​ ಇಂಡೀಸ್​​):ಸದ್ಯ ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿರುವ ಭಾರತ ತಂಡದಲ್ಲಿ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಕದಿನ ಸರಣಿಯ ಮೊದಲೆರಡು ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕಿಶನ್​ ಉತ್ತಮ ಲಯದಲ್ಲಿ ಬ್ಯಾಟಿಂಗ್​ ಮಾಡಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ ಕಿಶನ್​ ಸಚಿನ್​ ದಾಖಲೆಯನ್ನು ಮುರಿದರು. ಭಾರತ ಕ್ರಿಕೆಟ್​ ತಂಡದ ಫ್ಯೂಚರ್​ ಸ್ಟಾರ್​ ಆಟಗಾರರ ಪಟ್ಟಿಯಲ್ಲಿ ಇಶಾನ್​ ಕಿಶನ್ ಸಹ ಒಬ್ಬರು.ಕ್ರಿಕೆಟ್​ ದೇವರು ಎಂದೇ ಕರೆಸಿಕೊಳ್ಳುವ ಸಚಿನ್​ ತೆಂಡೂಲ್ಕರ್​ ಅವರು ಮಾಡಿದ್ದ ದಾಖಲೆಯನ್ನು ಯುವ ಆಟಗಾರ […]