ಝಾಕ್ ಕ್ರಾಲಿ ಉತ್ಸುಕತೆ: ಭಾರತದ ವಿರುದ್ಧದ ಟೆಸ್ಟ್​ ಸರಣಿಯಲ್ಲೂ ಇಂಗ್ಲೆಂಡ್​ನ ‘ಬಾಜ್‌ಬಾಲ್’ ಆಟ

ಲಂಡನ್ (ಯುಕೆ): ಭಾರತದ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲೂ ಇಂಗ್ಲೆಂಡ್​ ತಂಡವು ತನ್ನ ‘ಬಾಜ್‌ಬಾಲ್’ ಶೈಲಿಯ ಆಕ್ರಮಣಕಾರಿ ಬ್ಯಾಟಿಂಗ್​ ಮುಂದುವರೆಸಲಿದೆ.ವಿಭಿನ್ನ ಪರಿಸ್ಥಿತಿ, ವಾತಾವರಣದಲ್ಲಿ ನಮ್ಮ ತಂಡದ ಸತ್ವಪರೀಕ್ಷೆಗೆ ಇದೊಂದು ಅದ್ಭುತ ಅವಕಾಶ ಎಂದು ಇಂಗ್ಲೆಂಡ್‌ನ ಆಕ್ರಮಣಕಾರಿ ಆರಂಭಿಕ ಆಟಗಾರ ಝಾಕ್ ಕ್ರಾಲಿ ಹೇಳಿದ್ದಾರೆ. ಭಾರತದ ವಿರುದ್ಧ ನಡೆಯಲಿರುವ ಟೆಸ್ಟ್​ ಸರಣಿಯಲ್ಲೂ ಇಂಗ್ಲೆಂಡ್​ ತಂಡ​ ಬಾಜ್‌ಬಾಲ್ ಶೈಲಿಯ ಆಟ ಆಡುವ ಕುರಿತಂತೆ ತಂಡದ ಆರಂಭಿಕ ಆಟಗಾರ ಝಾಕ್ ಕ್ರಾಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಿವೀಸ್​ನ ಮಾಜಿ ಬ್ಯಾಟರ್​ […]

ಅಮೆರಿಕ ಕಿಡ್ಸ್ ವರ್ಲ್ಡ್ ಚಾಂಪಿಯನ್ಸ್‌ನ ಟಾಪ್ -5 ರಲ್ಲಿ ಮೂವರು ಭಾರತೀಯರು: ಗಾಲ್ಫ್​ನಲ್ಲಿ ನಿಹಾಲ್ ಚೀಮಾ ದ್ವಿತೀಯ

ಪೈನ್‌ಹರ್ಸ್ಟ್ (ಅಮೆರಿಕ): ಅಮೆರಿಕದಲ್ಲಿ ನಡೆಯುತ್ತಿರುವ 6 ರಿಂದ 12 ವರ್ಷ ವಯಸ್ಸಿನ ಬಾಲಕ – ಬಾಲಕಿಯರ ವಿಶ್ವಚಾಂಪಿಯನ್‌ ಶಿಪ್‌ನಲ್ಲಿ ಭಾರತೀಯ ಮೂವರು ಪುಟ್ಟ ಕ್ರೀಡಾ ಪಟುಗಳು ಟಾಪ್​-5 ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದರಲ್ಲಿ 6 ವರ್ಷದೊಳಗಿನ ಬಾಲಕರ ವಿಭಾಗದ ಗಾಲ್ಫ್ ಆಟದಲ್ಲಿ ನಿಹಾಲ್ ಚೀಮಾ ದ್ವಿತೀಯ ಸ್ಥಾನ ಪಡೆದು ಮಿಂಚಿದ್ದಾನೆ. ಇನ್ನು ಕಬೀರ್ ಗೋಯಲ್ 4 ನೇ ಸ್ಥಾನ ಪಡೆದುಕೊಂಡಿದ್ದರೆ, ಓಜಸ್ವಿನಿ ಸಾರಸ್ವತ್ ಎಂಬ ಬಾಲಕಿ, ಬಾಲಕಿಯರ ವಿಭಾಗದಲ್ಲಿ ಐದನೇ ಸ್ಥಾನ ಗಿಟ್ಟಿಸಿಕೊಂಡು ದೇಶಕ್ಕೆ ಹೆಮ್ಮೆ ತಂದಿದ್ದಾರೆ. […]

ಭಾರತಕ್ಕೆ ಚಿನ್ನ:ಆರ್ಚರಿಯಲ್ಲಿ ಗೆದ್ದ ವನಿತೆಯರಿಗೆ ಅಭಿನಂದಿಸಿದ ಪ್ರಧಾನಿ ಮೋದಿ, ಖರ್ಗೆ

ನವದೆಹಲಿ :ಟ್ವಿಟ್​ ಮಾಡಿರುವ ಮೋದಿ,”ನಮ್ಮ ಅಸಾಧಾರಣ ಸಂಯುಕ್ತ ಮಹಿಳಾ ತಂಡವು ಬರ್ಲಿನ್‌ನಲ್ಲಿ ನಡೆದ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊಟ್ಟಮೊದಲ ಚಿನ್ನದ ಪದಕವನ್ನು ತಂದುಕೊಟ್ಟಿರುವುದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ. ನಮ್ಮ ಚಾಂಪಿಯನ್‌ಗಳಿಗೆ ಅಭಿನಂದನೆಗಳು! ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಈ ಅತ್ಯುತ್ತಮ ಫಲಿತಾಂಶಕ್ಕೆ ಕಾರಣವಾಯಿತು” ಎಂದು ಬರೆದು ಶುಭಾಶಯ ತಿಳಿಸಿದ್ದಾರೆ ಬರ್ಲಿನ್‌ನಲ್ಲಿ ನಡೆದ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್ 2023 ರಲ್ಲಿ ಚಿನ್ನದ ಪದಕ ಗೆದ್ದ ಜ್ಯೋತಿ ಸುರೇಖಾ ವೆನ್ನಮ್, ಪರ್ನೀತ್ ಕೌರ್ ಮತ್ತು ಅದಿತಿ ಗೋಪಿಚಂದ್ […]

ವಿಶ್ವ ಗೇಮ್ಸ್​ 2023ರ ಐಬಿಎಸ್‌ಎ :ಭಾರತದ ಅಂಧರ ಕ್ರಿಕೆಟ್ ತಂಡಗಳ ನಾಯಕರು, ಉಪನಾಯಕರ ಹೆಸರು ಪ್ರಕಟ

ಬೆಂಗಳೂರು :ಭಾರತದ ಅಂಧರ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳ ನಾಯಕರು ಮತ್ತು ಉಪನಾಯಕರುಗಳ ಹೆಸರು ಪ್ರಕಟವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪುರುಷರ ಕ್ರಿಕೆಟ್ ತಂಡದ ನಾಯಕನಾಗಿ ಅಜಯ್ ಕುಮಾರ್ ರೆಡ್ಡಿ ಇಲ್ಲೂರಿ ಮತ್ತು ವೆಂಕಟೇಶ್ವರ ರಾವ್ ದುನ್ನಾ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಬಿ 2 ವಿಭಾಗದ ಇಬ್ಬರೂ ಆಟಗಾರರು ಆಂಧ್ರಪ್ರದೇಶ ಮೂಲದವರಾಗಿದ್ದಾರೆ. ಕರ್ನಾಟಕ ಮೂಲದ ವರ್ಷಾ ಉಮಾಪತಿ (ಬಿ1 ವಿಭಾಗ) ಮಹಿಳಾ ಕ್ರಿಕೆಟ್ ತಂಡ ನಾಯಕಿಯಾಗಿ, ಒಡಿಶಾದ ಫುಲಾ ಸರನ್ (ಬಿ 3 ವಿಭಾಗ) ರನ್ನು […]

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿ,. ಸಾಧಕಿ ಪಲ್ಲವಿ ಸಂದರ್ಶನ

ಮೈಸೂರು : ಇತ್ತೀಚೆಗೆ ಉಗಾಂಡದಲ್ಲಿ ನಡೆದ ಪ್ಯಾರಾ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತವನ್ನು ಪಲ್ಲವಿ ಪ್ರತಿನಿಧಿಸಿದ್ದರು. ಇವರು ಮೈಸೂರಿನಲ್ಲಿ ತರಬೇತಿದಾರರೊಬ್ಬರ ಸಹಾಯದಿಂದ ನಾಲ್ಕು ಜನ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರರ ಜೊತೆ ಸೇರಿ, ಮನೆಯೊಂದರಲ್ಲಿ ವಾಸವಾಗಿದ್ದಾರೆ. ಅಲ್ಲಿಯೇ ತರಬೇತಿಯನ್ನು ಪಡೆಯುತ್ತಿದ್ದಾರೆ. ಇವರಿಗೆ ವಿದೇಶಗಳಲ್ಲಿ ಪಂದ್ಯವನ್ನಾಡಲು ಆರ್ಥಿಕ ಸಂಕಷ್ಟ ಎದುರಾಗಿದೆ.ಉಗಾಂಡದಲ್ಲಿ ನಡೆದ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಕರ್ನಾಟಕದ ಪಲ್ಲವಿ ಎರಡು ಚಿನ್ನದ ಪದಕ ಜಯಿಸಿ ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರಿಗೆ ಕ್ರೀಡೆಯಲ್ಲಿ ಮತ್ತಷ್ಟು […]