‘ಯಂಗ್ ಇಂಡಿಯಾ’ಗೆ ಬುಮ್ರಾ ಕ್ಯಾಪ್ಟನ್: ಐರ್ಲೆಂಡ್ ಪ್ರವಾಸ

ಹೈದರಾಬಾದ್:ಯುವ ಆಟಗಾರರ ಟೀಂ ವಿಂಡೀಸ್ನಲ್ಲಿ ಯಶಸ್ಸು ಸಾಧಿಸುವಲ್ಲಿ ಎಡವಿತು. ಇನ್ನು, ಇದೇ 18ರಿಂದ ಮೂರು ಟಿ20 ಪಂದ್ಯಗಳ ಸರಣಿಗೆ ಭಾರತ ತಂಡ ಜಸ್ಪ್ರಿತ್ ಬುಮ್ರಾ ನಾಯಕತ್ವದಲ್ಲಿ ಐರ್ಲೆಂಡ್ ಪ್ರವಾಸ ಮಾಡಲಿದೆ. ಗಾಯದಿಂದ ಚೇತರಿಸಿಕೊಂಡು ನೇರವಾಗಿ ಕ್ಯಾಪ್ಟನ್ ಆಗಿ ತಂಡಕ್ಕೆ ಬುಮ್ರಾ ಕಮ್ಬ್ಯಾಕ್ ಮಾಡಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ತಂಡ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟಿ20 ಸರಣಿ ಕಳೆದುಕೊಂಡಿತು. ಐರ್ಲೆಂಡ್ ಪ್ರವಾಸದಲ್ಲಿ ರಿಂಕು ಸಿಂಗ್, ಜಿತೇಶ್ ಶರ್ಮಾ ಮತ್ತು ಶಹಬಾಜ್ ಅಹ್ಮದ್ ಪಾದಾರ್ಪಣೆಗೆ ಎದುರು ನೋಡುತ್ತಿದ್ದಾರೆ. ಶಿವಂ […]
ಭಾರತ-ಪಾಕ್ ಸೇರಿ: ಐಸಿಸಿ ಏಕದಿನ ಕ್ರಿಕೆಟ್ 8 ಪಂದ್ಯಗಳ ದಿನ ಬದಲು; ಇದೇ 15ರಿಂದ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ

ದುಬೈ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ವೇಳಾಪಟ್ಟಿಯಲ್ಲಿ ಎಂಟು ಪಂದ್ಯಗಳ ಬದಲಾವಣೆಯಾಗಿದೆ. ಬೆಂಗಳೂರಿನ ಮೈದಾನದಲ್ಲಿ ಭಾರತ- ನೆದರ್ಲ್ಯಾಂಡ್ಸ್ ನಡುವಿನ ಪಂದ್ಯ ಒಂದು ದಿನ ಮುಂದೂಡಲಾಗಿದೆ.ಗುಜರಾತ್‌ನ ಅಹಮದಾಬಾದ್ನಲ್ಲಿ ನಡೆಯುವ ಭಾರತ-ಪಾಕಿಸ್ತಾನ ಪಂದ್ಯ ಸೇರಿದಂತೆ ಒಟ್ಟು ಎಂಟು ಪಂದ್ಯಗಳ ದಿನ ಬದಲಾಗಿದ್ದು, ಹೊಸ ವೇಳಾಪಟ್ಟಿಯನ್ನು ಐಸಿಸಿ ಇಂದು ಬಿಡುಗಡೆಗೊಳಿಸಿತು. ಇತ್ತೀಚೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ವೇಳಾಪಟ್ಟಿಯ ಬದಲಾವಣೆಯ ಸಾಧ್ಯತೆಗಳ ಬಗ್ಗೆ ಮಾತನಾಡಿದ್ದರು. ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳು, ಹಬ್ಬದಂದು ಕ್ರಿಕೆಟ್ ಪಂದ್ಯಗಳು ನಡೆದರೆ ಭದ್ರತಾ ಸಮಸ್ಯೆ ಉಂಟಾಗುವ ಸಮಸ್ಯೆಯಿದೆ ಎಂದು […]
ಐಸಿಸಿ ರ್‍ಯಾಂಕಿಂಗ್‌ನಲ್ಲಿ ಗಿಲ್, ಕಿಶನ್‌ಗೆ ಸಿಹಿ ಸುದ್ದಿ

ದುಬೈ: ಆರಂಭಿಕ ಆಟಗಾರರಾದ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ತಮ್ಮ ವೃತ್ತಿಜೀವನದ ಅತ್ಯುತ್ತಮ ರ್‍ಯಾಂಕಿಂಗ್ ಗಿಟ್ಟಿಸಿಕೊಂಡಿದ್ದಾರೆ.ವೆಸ್ಟ್ ಇಂಡೀಸ್ ಪ್ರವಾಸದ ಏಕದಿನ ಪಂದ್ಯಗಳಲ್ಲಿ ಭಾರತ ಕ್ರಿಕೆಟ್ ತಂಡದ ಯುವ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಿದ್ದು ಐಸಿಸಿ ಶ್ರೇಯಾಂಕದಲ್ಲಿ ಚೇತರಿಕೆ ಕಂಡಿದ್ದಾರೆ.ಐಸಿಸಿ ಏಕದಿನ ರ್‍ಯಾಂಕಿಂಗ್ ಬಿಡುಗಡೆಯಾಗಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮಿಂಚಿದ ಯುವ ಆಟಗಾರರು ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ […]
ಭಾರತದ ಜೂನಿಯರ್ ಪುರುಷ, ಮಹಿಳಾ ಹಾಕಿ ತಂಡಕ್ಕೆ ಹೊಸ ಕೋಚ್ ಆಗಿ ಹರ್ಮನ್ ಕ್ರೂಸ್

ನವದೆಹಲಿ: ಭಾರತೀಯ ಪುರುಷ ಮತ್ತು ಮಹಿಳಾ ಹಾಕಿ ಜೂನಿಯರ್ ತಂಡಗಳ ನೂತನ ತರಬೇತುದಾರರಾಗಿ ಎರಡು ದಶಕಗಳ ಕಾಲ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವವಿರುವ ನೆದರ್‌ಲ್ಯಾಂಡ್‌ನ ಹರ್ಮನ್ ಕ್ರೂಸ್ ಅವರನ್ನು ನೇಮಕ ಮಾಡಿರುವುದಾಗಿ ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆಈ ವರ್ಷಾಂತ್ಯದಲ್ಲಿ ಜೂನಿಯರ್ ಹಾಕಿ ವಿಶ್ವಕಪ್ ನಡೆಯಲಿದ್ದು ಹರ್ಮನ್ ಕ್ರೂಸ್ ಅವರನ್ನು ಭಾರತದ ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಹರ್ಮನ್ ಕ್ರೂಸ್ ನೆದರ್ಲ್ಯಾಂಡ್ಸ್ ಮೂಲದ ಹಾಕಿ ಕ್ಲಬ್ ಡೆನ್ ಬಾಷ್ನಲ್ಲಿ ಮುಖ್ಯಕೋಚ್ ಆಗಿ ಕೆಲಸ ಮಾಡಿದ್ದರು. ಇವರು […]
ಡಲ್ಲಾಸ್ ವಿರುದ್ಧ ಮಿಯಾಮಿಗೆ ಗೆಲುವು

ನವದೆಹಲಿ:ಇಂಟರ್ ಮಿಯಾಮಿಗಾಗಿ ಅಡುತ್ತಿರುವ ಅವರು ಎಫ್ಸಿ ಡಲ್ಲಾಸ್ ವಿರುದ್ಧದ ಪಂದ್ಯದಲ್ಲಿ ನೀಡಿದ ಅದ್ಭುತ ಪ್ರದರ್ಶನ ಫುಟ್ಬಾಲ್ ಪ್ರಿಯರಿಗೆ ಅಷ್ಟೇ ಅಲ್ಲದೇ ಆಟವನ್ನು ನೋಡಿದ ಇತರರಿಗೂ ಒಮ್ಮೆಗೆ ರೋಮಾಂಚನವನ್ನು ಉಂಟುಮಾಡಿದೆ ಕಾಲ್ಚೆಂಡಿನ ಆಟದಲ್ಲಿ ಸೂಪರ್ ಸ್ಟಾರ್ ಆಗಿರುವ ಲಿಯೋನೆಲ್ ಮೆಸ್ಸಿ ನಡೆದ ಪಂದ್ಯದಲ್ಲಿ ತಮ್ಮ ಕಾಲ್ಚೆಳಕವನ್ನು ತೋರಿದ್ದಾರೆ.ಮಿಯಾಮಿ ಪರ ಆಡುತ್ತಿರುವ ಲಿಯೋನೆಲ್ ಮೆಸ್ಸಿ ಪಂದ್ಯದಲ್ಲಿ ಗಳಿಸಿದ ಗೋಲ್ ಟ್ವಿಟರ್ನಲ್ಲಿ ವೈರಲ್ ಆಗುತ್ತಿದೆ. 85ನೇ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್ ಮೆಸ್ಸಿ ಕರಾರುವಕ್ಕಾಗಿ ಬಳಸಿಕೊಂಡಿದ್ದಾರೆ. ಎಫ್ಸಿ ಡಲ್ಲಾಸ್ನ ಗೋಲ್ ಕೀಪರನ್ನು […]