ನಿವೃತ್ತಿ ಹಿಂಪಡೆದ ಇಂಗ್ಲೆಂಡ್‌ ಕ್ರಿಕೆಟಿಗ: ತಂಡಕ್ಕೆ ಮರಳಲಿದ ಬೆನ್‌ ಸ್ಟೋಕ್ಸ್

ಲಂಡನ್:ಜುಲೈ 18, 2022ರಂದು ಬೆನ್​​​ ಸ್ಟೋಕ್ಸ್​ ಏಕದಿನ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಆಗಸ್ಟ್​ 16, 2023ರಂದು ನಿವೃತ್ತಿ ಹಿಂಪಡೆದಿದ್ದಾರೆ. ವಿಶ್ವಕಪ್​ಗೂ ಮುನ್ನ ಇಂಗ್ಲೆಂಡ್​ ತಂಡ ತವರು ಮೈದಾನದಲ್ಲಿ ನ್ಯೂಜಿಲೆಂಡ್​ ವಿರುದ್ಧ ಏಕದಿನ ಸರಣಿ ಆಡಲಿದೆ. ಸಪ್ಟೆಂಬರ್​ 8ರಿಂದ ಈ ಪಂದ್ಯಗಳು ನಡೆಯಲಿದೆ. ಈ ಸಿರೀಸ್​ನ ಮೂಲಕ ಬೆನ್​ ಆಂಗ್ಲರ ಏಕದಿನ ಪಡೆಗೆ ಮತ್ತೆ ಸೇರ್ಪಡೆ ಆಗಲಿದ್ದಾರೆ. ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರು ತಮ್ಮ ದೇಶಕ್ಕೆ ಮುಂದಿನ ವಿಶ್ವಕಪ್ ​ಉಳಿಸಿಕೊಡುವ ಸಲುವಾಗಿ ನಿವೃತ್ತಿ […]

ಐಸಿಸಿ ಟಿ20 ಶ್ರೇಯಾಂಕ ಬಿಡುಗಡೆ : ಸೂರ್ಯಕುಮಾರ್‌ ಅಗ್ರಸ್ಥಾನ

ದುಬೈ: ವೆಸ್ಟ್​ ಇಂಡೀಸ್​ ವಿರುದ್ಧ ಭಾರತ ತಂಡ ಸರಣಿ ಸೋಲು ಅನುಭವಿಸಿದರೂ ತೀರಾ ಕಳಪೆ ಪ್ರದರ್ಶನ ತೋರಿಲ್ಲ. ಇಂದು ಐಸಿಸಿ ಟಿ20 ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತದ ಆಟಗಾರರು ಉತ್ತಮ ಏರಿಕೆ ಕಂಡಿದ್ದಾರೆ.ವಿಂಡೀಸ್​ ಸರಣಿಯ ನಂತರ ಬಿಡುಗಡೆಯಾದ ಐಸಿಸಿ ಟಿ20 ಕ್ರಿಕೆಟ್‌ ಶ್ರೇಯಾಂಕದಲ್ಲಿ ಶುಭ್‌ಮನ್​ ಗಿಲ್​, ತಿಲಕ್​ ವರ್ಮಾ ಮತ್ತು ಜೈಸ್ವಾಲ್​ ಉತ್ತಮ ಏರಿಕೆ ಕಂಡಿದ್ದಾರೆ ಅಗ್ರಸ್ಥಾನದಲ್ಲಿದ್ದ ಸೂರ್ಯ ಕುಮಾರ್ ಯಾದವ್​ ತಮ್ಮ ಸ್ಥಾನವನ್ನು ಸುಭದ್ರವಾಗಿ ಕಾಯ್ದುಕೊಂಡಿದ್ದಾರೆ. ಆರಂಭಿಕ ಆಟಗಾರ ಶುಭ್‌ಮನ್​ ಗಿಲ್​ 25ನೇ ಶ್ರೇಯಾಂಕಕ್ಕೆ […]

ಬುಮ್ರಾ ನಾಯಕತ್ವದಲ್ಲಿ ಐಪಿಎಲ್​ ಸ್ಟಾರ್ಸ್ ಪಡೆ : ಐರ್ಲೆಂಡ್​ ಟಿ20 ಸರಣಿಗೆ ತೆರಳಿದ ಭಾರತ ತಂಡ

ಹೈದರಾಬಾದ್​: ವೆಸ್ಟ್​ ಇಂಡೀಸ್​ ಪ್ರವಾಸದ ನಂತರ ಟಿ20 ಸ್ಟಾರ್​ಗಳ ಪಡೆ ಐರ್ಲೆಂಡ್​ಗೆ ಇಂದು ತೆರಳಿದೆ. ಗಾಯದಿಂದ ಚೇತರಿಸಿಕೊಂಡಿರುವ ವೇಗಿ ಜಸ್ಪ್ರಿತ್​ ಬುಮ್ರಾ ಅವರ ನಾಯಕತ್ವದಲ್ಲಿ ತಂಡ ಐರ್ಲೆಂಡ್​ನಲ್ಲಿ ಪಂದ್ಯಗಳನ್ನು ಆಡಲಿದೆ. ಆಗಸ್ಟ್​ 18 ರಿಂದ ಆರಂಭ ಆಗಲಿರುವ ಐರ್ಲೆಂಡ್​ ವಿರುದ್ಧದ 3 ಟಿ20 ಪಂದ್ಯಗಳ ಸರಣಿಗೆ ಭಾರತ ತಂಡ ಇಂದು ಪ್ರವಾಸ ಬೆಳೆಸಿದೆ ಭಾರತ ಮತ್ತು ಐರ್ಲೆಂಡ್ ನಡುವಿನ ಮೂರು ಟಿ20 ಪಂದ್ಯಗಳು ಡಬ್ಲಿನ್‌ನ ಮಲಾಹೈಡ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಆಗಸ್ಟ್ 18, 20 ಮತ್ತು 23 […]

ಯುವ ಪ್ರತಿಭೆಗೆ ಅವಕಾಶ: ಏಷ್ಯನ್ ಗೇಮ್ಸ್​ನಿಂದ ಹಿಂದೆ ಸರಿದ ವಿನೇಶ್ ಫೋಗಟ್

ನವದೆಹಲಿ: ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಿಂದ ವಿನಾಯಿತಿ ಪಡೆದು ನೇರಪ್ರವೇಶ ಪಡೆದುಕೊಂಡಿದ್ದ ಫೋಗಟ್ ಗಾಯದ ಕಾರಣದಿಂದಾಗಿ ಆಡುತ್ತಿಲ್ಲ ಎಂದು ತಿಳಿಸಿದ್ದಾರೆ. ಭಾರತೀಯ ಕುಸ್ತಿ ಫೆಡರೇಶನ್ (IWF) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ವಿನೇಶ್ ಫೋಗಟ್ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್​ನಿಂದ ಹಿಂದೆ ಸರಿದಿದ್ದಾರೆ.ಸೆಪ್ಟೆಂಬರ್ 23ರಿಂದ ಚೀನಾದದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್​ನಿಂದ ವಿನೇಶ್ ಫೋಗಟ್ ಹಿಂದೆ ಸರಿದಿದ್ದಾರೆ. ತಮ್ಮ ಎಕ್ಸ್‌ಆಯಪ್​ ಖಾತೆಯಲ್ಲಿ ಪತ್ರವೊಂದನ್ನು ಪೋಸ್ಟ್​ ಮಾಡಿರುವ ಅವರು, “ನಾನು […]

ಮಂಗಳೂರು ಡ್ರ್ಯಾಗನ್ಸ್ ಜಯಭೇರಿ: ಮಹಾರಾಜ ಟೂರ್ನಿಯಲ್ಲಿ ಮೊದಲ ಶತಕ ಸಿಡಿಸಿದ ಶರತ್

ಬೆಂಗಳೂರು: ಬಿ.ಆರ್.ಶರತ್ ದಾಖಲಿಸಿದ ಅಜೇಯ ಶತಕ (111) ಹಾಗೂ ರೋಹನ್ ಪಾಟೀಲ್ (54) ಅರ್ಧಶತಕದ ನೆರವಿನಿಂದ ಮೈಸೂರು ವಾರಿಯರ್ಸ್ ತಂಡದ ವಿರುದ್ಧ ಮಂಗಳೂರು ಡ್ರ್ಯಾಗನ್ಸ್ 5 ವಿಕೆಟ್‌ಗಳ ಜಯ ದಾಖಲಿಸಿದೆ. ಮಹಾರಾಜ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿಂದು ಮಂಗಳೂರು ಡ್ರ್ಯಾಗನ್ಸ್ ತಂಡವು ಮೈಸೂರು ನೀಡಿದ್ದ 202 ರನ್‌ ತಲುಪಿ ಗೆದ್ದು ಬೀಗಿತು.ಮೈಸೂರು ನೀಡಿದ 202 ರನ್​ಗಳ ಬೃಹತ್​ ಗುರಿಯನ್ನು ಮಂಗಳೂರು ತಂಡ 7 ಎಸೆತ ಬಾಕಿ​ ಇರುವಂತೆಯೇ ತಲುಪಿತು. ಆದರೆ, 54 ರನ್ ಗಳಿಸಿದ್ದ ರೋಹನ್ ಪಾಟೀಲ್ ಜೆ.ಸುಚಿತ್​ಗೆ […]