ಭಾರತ-ಐರ್ಲೆಂಡ್ ಮೊದಲ ಟಿ-20ಗೆ ಪ್ರಸಿದ್ಧ ಕೃಷ್ಣ, ರಿಂಕು ಪಾದಾರ್ಪಣೆ

ಡಬ್ಲಿನ್ (ಐರ್ಲೆಂಡ್): ಇಲ್ಲಿನ ದಿ ವಿಲೇಜ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.ಈ ಸರಣಿಯ ಮೂಲಕ ಪ್ರಸಿದ್ಧ ಕೃಷ್ಣ ಮತ್ತು ರಿಂಕು ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇಬ್ಬರು ಆಟಗಾರರಿಗೆ ಜಸ್ಪ್ರೀತ್ ಬುಮ್ರಾ ಕ್ಯಾಪ್ ಕೊಟ್ಟು ಸ್ವಾಗತಿಸಿದರು. ಐರ್ಲೆಂಡ್-ಭಾರತ ನಡುವಿನ ಮೂರು ಟಿ20 ಸರಣಿಯ ಮೊದಲ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿದೆ. ಐರ್ಲೆಂಡ್: […]
ಏಕದಿನ ವಿಶ್ವಕಪ್‌ಗೆ ಆಸೀಸ್ ಭರ್ಜರಿ ತಯಾರಿ: ತಂಡದಿಂದ ಸ್ಮಿತ್, ಸ್ಟಾರ್ಕ್ ಔಟ್

ಮೆಲ್ಬೋರ್ನ್ (ಆಸ್ಟ್ರೇಲಿಯಾ): ಭಾರತದಲ್ಲಿ ಈ ವರ್ಷಾಂತ್ಯದಲ್ಲಿ ನಡೆಯುವ ಏಕದಿನ ಕ್ರಿಕೆಟ್ ವಿಶ್ವಕಪ್ ಹಿನ್ನೆಲೆಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20, ಏಕದಿನ ಸರಣಿಯಿಂದ ಅನುಭವಿ ಆಟಗಾರರಾದ ಸ್ಟೀವ್ ಸ್ಮಿತ್ ಮತ್ತು ಮಿಚೆಲ್ ಸ್ಟಾರ್ಕ್ ಅವರನ್ನು ಕೈಬಿಡಲಾಗಿದೆ.ಇಬ್ಬರು ಆಟಗಾರರು ವಿಶ್ವಕಪ್ಗೂ ಮುನ್ನ ತಂಡ ಸೇರುತ್ತಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಲಿರುವ ಆಸ್ಟ್ರೇಲಿಯಾ ತಂಡದಿಂದ ಸ್ಮಿತ್ ಮತ್ತು ಸ್ಟಾರ್ಕ್ ಅವರನ್ನು ಕೈ ಬಿಡಲಾಗಿದೆ. “ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ […]
ಭಾರತ ತಂಡ ಪ್ರತಿನಿಧಿಸಿ ಕಿಂಗ್ ಕೊಹ್ಲಿ ಇಂದಿಗೆ 15 ವರ್ಷ

ಹೈದರಾಬಾದ್:19 ವರ್ಷದೊಳಗಿನವರ ವಿಶ್ವಕಪ್ ತಂಡದ ನಾಯಕರಾಗಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ನಿಂದ 2008ರ ಇದೇ ದಿನ ಶ್ರೀಲಂಕಾ ಪ್ರವಾಸದ ಬಿ ತಂಡಕ್ಕೆ ಆಯ್ಕೆ ಆಗಿ ಮೈದಾನದಲ್ಲಿ ಬ್ಯಾಟ್ ಹಿಡಿದು ನಿಂತಿದ್ದರು. ವಿರಾಟ್ ತಮ್ಮ ಸಾಮರ್ಥ್ಯವನ್ನು 19 ವರ್ಷದೊಳಗಿನವರ ವಿಶ್ವಕಪ್ನಲ್ಲೇ ತೋರಿದ್ದರು. ಆರು ಪಂದಗಳಲ್ಲಿ 47ರ ಸರಾಸರಿಯಲ್ಲಿ 235 ರನ್ ಗಳಿಸಿದ್ದರು. ಅಂದು ಅವರ ಆಟ ಕಂಡ ಹಿರಿಯರು, ಭಾರತಕ್ಕೆ ಒಬ್ಬ ಉತ್ತಮ ಆಟಗಾರ ಸಿಕ್ಕಿದ್ದಾನೆ ಎಂದಿದ್ದರು. ಅದನ್ನು ವಿರಾಟ್ ಸಾಬೀತು ಮಾಡಿದ್ದಾರೆ […]
ಅಥ್ಲೀಟ್ ದ್ಯುತಿ ಚಂದ್ ಉದ್ದೀಪನ ಮದ್ದು ಸೇವನೆ ಹಿನ್ನೆಲೆ : 4 ವರ್ಷ ನಿಷೇಧ

ನವದೆಹಲಿ: ಏಷ್ಯನ್ ಗೆಮ್ಸ್ನಲ್ಲಿ ಎರಡು ಬೆಳ್ಳಿ ಪದಕ ಸಂಪಾದಿಸಿದ ಭಾರತದ ಮಹಿಳಾ ಅಥ್ಲೀಟ್ ದ್ಯುತಿ ಚಂದ್ ಅವರಿಗೆ ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆಯು (WADA) ನಾಲ್ಕು ವರ್ಷಗಳ ಕಾಲ ನಿಷೇಧ ಶಿಕ್ಷೆ ವಿಧಿಸಿದೆ.ಕಳೆದ ವರ್ಷ ಡಿಸೆಂಬರ್ 5ರಂದು ಸಂಗ್ರಹಿಸಿದ್ದ ಮಾದರಿಯಲ್ಲಿ ಆಂಡ್ರೊಜೆನ್ ರಿಸೆಪ್ಟರ್ ಮಾಡ್ಯುಲೇಟರ್‌ಗಳಿಗೆ (ಎಸ್‌ಎಆರ್‌ಎಂ) ಕಂಡು ಬಂದಿದ್ದರಿಂದ ನಿಷೇಧ ಹೇರಲಾಗಿದೆ. ಹೀಗಾಗಿ ಮುಂದಿನ ನಾಲ್ಕು ವರ್ಷಗಳ ಕಾಲ ದ್ಯುತಿ ಯಾವುದೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವಂತಿಲ್ಲ. ನಿಷೇಧದ ಅವಧಿ ಜನವರಿ 3, […]
ದೇಶದ 12 ನಗರಗಳಲ್ಲಿ ಪಂದ್ಯಾಟ : ಪ್ರೋ ಕಬಡ್ಡಿ ಹೊಸ ಸೀಸನ್‌ಗೆ ಮುಹೂರ್ತ

ಮುಂಬೈ: 9 ಆವೃತ್ತಿಗಳ ಭರ್ಜರಿ ಯಶಸ್ಸಿನ ಬಳಿಕ 10ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ ಡಿಸೆಂಬರ್ 2ರಿಂದ ಆರಂಭವಾಗಲಿದೆ. ಈ ಸಲದ ಟೂರ್ನಿ ದೇಶದ ಹನ್ನೆರಡು ನಗರಗಳಲ್ಲಿ ಹಂತಹಂತವಾಗಿ ನಡೆಯಲಿದೆ.ಪ್ರೋ ಕಬಡ್ಡಿ ಆಯೋಜಿಸುತ್ತಿರುವ ಮಾಶಲ್ ಸ್ಪೋರ್ಟ್ಸ್ ಮತ್ತು ಲೀಗ್ ಮುಖ್ಯಸ್ಥ ಹಾಗೂ ಲೀಗ್ ಆಯುಕ್ತ ಅನುಪಮ್ ಗೋಸ್ವಾಮಿ ಮಾತನಾಡಿ, “ಹತ್ತನೇ ಆವೃತ್ತಿಯನ್ನು ಆಯೋಜಿಸಲು ನಾವು ಉತ್ಸುಕರಾಗಿದ್ದೇವೆ. ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ನಾವು ನಮ್ಮ ಕ್ರೀಡಾಪಟುಗಳು ಮತ್ತು ಅಭಿಮಾನಿಗಳಿಗೆ ಕೃತಜ್ಞರಾಗಿರುತ್ತೇವೆ” ಎಂದರು. ಪ್ರೋ ಕಬಡ್ಡಿ 10ನೇ ಸೀಸನ್ ಡಿಸೆಂಬರ್ […]