ಭಾರತದ ಚೆಸ್ ಪ್ರತಿಭೆ ಪ್ರಜ್ಞಾನಂದ ಪೋಸ್ಟ್: ಸದಾ ಬೆಂಬಲಿಸುವ ಅಮ್ಮನ ಜೊತೆಗೆ

ಚೆನ್ನೈ (ತಮಿಳುನಾಡು) : ಫಿಡೆ ವಿಶ್ವಕಪ್ ಚೆಸ್ ಚಾಂಪಿಯನ್‌ಶಿಪ್ ಟೂರ್ನಿಯ ಫೈನಲ್‌ನಲ್ಲಿ ಬೆಳ್ಳಿ ಪದಕ ಗೆದ್ದ ತಮಿಳುನಾಡಿನ ಆಟಗಾರ ಆರ್.ಪ್ರಜ್ಞಾನಂದ, ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದು, ಪ್ರೋತ್ಸಾಹ ಹಾಗೂ ಬೆಂಬಲ ನೀಡಿದ ಎಲ್ಲರಿಗೂ, ಅದ್ರಲ್ಲೂ ವಿಶೇಷವಾಗಿ ತಾಯಿ ಆರ್.ನಾಗಲಕ್ಷ್ಮಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.”ನಾನು ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದೇನೆ. ಮುಂದಿನ ವರ್ಷದ ಸ್ಪರ್ಧೆಗೆ ಅರ್ಹತೆ ಪಡೆದಿದ್ದೇನೆ. ನಿಮ್ಮ ಪ್ರೀತಿ, ಬೆಂಬಲ ಮತ್ತು ಪ್ರಾರ್ಥನೆಗಳಿಗಾಗಿ ನಾನು ಕೃತಜ್ಞ. ಶುಭ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ವಿಶೇಷವಾಗಿ, […]
ಮಂಗಳೂರಿನ ವಿರುದ್ಧ ಗೆದ್ದು ಸೆಮಿಫೈನಲ್ ಪ್ರವೇಶಿಸಿದ ಹಾಲಿ ಚಾಂಪಿಯನ್ ಗುಲ್ಬರ್ಗ : ಮಹಾರಾಜ ಟ್ರೋಫಿ

ಬೆಂಗಳೂರು: ಮಂಗಳೂರು ಡ್ರ್ಯಾಗನ್ಸ್ ವಿರುದ್ಧ 8 ವಿಕೆಟ್‌ಗಳಿಂದ ಜಯ ಸಾಧಿಸುವ ಮೂಲಕ ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಗುಲ್ಬರ್ಗ ಪರ ಬೌಲಿಂಗ್‌ನಲ್ಲಿ ಅಭಿಲಾಷ್ ಶೆಟ್ಟಿ (3/33) ಬ್ಯಾಟಿಂಗ್‌ನಲ್ಲಿ ಕೆ.ವಿ ಅನೀಶ್ (72*) ಹಾಗೂ ಎಲ್.ಆರ್ ಚೇತನ್ (58) ಗೆಲುವಿನ ರೂವಾರಿಗಳಾಗಿ ಮಿಂಚಿದರು. ಹುಬ್ಬಳ್ಳಿ, ಮೈಸೂರು ತಂಡಗಳು ಕ್ವಾಲಿಫೈ ಆದ ನಂತರ ಮೂರನೇ ತಂಡವಾಗಿ ಸೆಮಿಸ್ಗೆ ಗುಲ್ಬರ್ಗ ಪ್ರವೇಶಿಸಿದೆ. ಸಧ್ಯ ಬೆಂಗಳೂರು ಮತ್ತು ಶಿವಮೊಗ್ಗ ನಡುವೆ ಪಂದ್ಯ ನಡೆಯುತ್ತಿದ್ದು, ಬೆಂಗಳೂರು ಗೆದ್ದಲ್ಲಿ […]
ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡ ಟೈಗರ್ಸ್ : ಹುಬ್ಬಳ್ಳಿಗೆ 5 ವಿಕೆಟ್‌ಗಳಿಂದ ಮಂಗಳೂರು ವಿರುದ್ಧ ಗೆಲುವು.

ಬೆಂಗಳೂರು: ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಹುಬ್ಬಳ್ಳಿ ಟೈಗರ್ಸ್ ಅಂಕಪಟ್ಟಿಯಲಿ ಅಗ್ರ ಸ್ಥಾನ ಕಾಪಾಡಿಕೊಂಡಿದೆ. ಹುಬ್ಬಳ್ಳಿ ಪರ ಮನ್ವಂತ್ ಕುಮಾರ್ (5/33) ಮೊಹಮ್ಮದ್ ತಾಹಾ (51) ಮತ್ತು ನಾಯಕ ಮನೀಶ್ ಪಾಂಡೆ (56*) ಆಟದ ನೆರವಿನಿಂದ ಮಂಗಳೂರು ತಂಡವನ್ನು ನಿರಾಯಾಸವಾಗಿ ಹುಬ್ಬಳ್ಳಿ ಸೋಲಿಸಿತು.ಲೀಗ್ನಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಹುಬ್ಬಳ್ಳಿ ಟೈಗರ್ಸ್ ಅಂಕಪಟ್ಟಿಯಲ್ಲಿ 16 ಅಂಕದಿಂದ ಅಗ್ರ ಪಟ್ಟವನ್ನು ಉಳಿಸಿಕೊಂಡಿದೆ. ಅಲ್ಲದೇ ನಿನ್ನೆ ಶಿವಮೊಗ್ಗ ಲಯನ್ಸ್ […]
ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಮಣಿಸಿ ಚಿನ್ನ ಪದಕಕ್ಕೆ ಮುತ್ತಿಗೆ

ಬರ್ಮಿಂಗ್ಹ್ಯಾಮ್: ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್ (ಐಬಿಎಸ್‌ಎ) ವಿಶ್ವ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್ ವಿಶ್ವ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಮಣಿಸಿ ಚಿನ್ನ ಗೆದ್ದಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಾಂಗರೂ ಪಡೆ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 114ರನ್ ಕಲೆ ಹಾಕಿತು. ಮತ್ತೊಂದೆಡೆ ಭಾರತದ ಪುರುಷರ ಅಂಧರ ಕ್ರಿಕೆಟ್ ತಂಡವು ಐಬಿಎಸ್‌ಎ ವಿಶ್ವ […]
50 ಮೀಟರ್ ಪಿಸ್ತೂಲ್ ISSF ವಿಶ್ವ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ‘ಭಾರತೀ’ಯರಿಗೆ ಬಂಗಾರ

ಬಾಕು (ಅಜರ್‌ಬೈಜಾನ್): ಇಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್ನ 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ವನಿತೆಯರ ಗುಂಪು ಚಿನ್ನದ ಪದಕ ಸಾಧಿಸಿದೆ. ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್ನಲ್ಲಿ ತಿಯಾನಾ, ಸಾಕ್ಷಿ ಸೂರ್ಯವಂಶಿ ಮತ್ತು ಕಿರಣದೀಪ್ ಕೌರ್ ಅವರ ತಂಡ 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಸಂಭ್ರಮಿಸಿತು. ತಿಯಾನಾ, ಸಾಕ್ಷಿ ಸೂರ್ಯವಂಶಿ ಮತ್ತು ಕಿರಣದೀಪ್ ಕೌರ್ ಅವರಿದ್ದ ತಂಡ ಚೀನಾ ಮತ್ತು ಮಂಗೋಲಿಯಾವನ್ನು ಮಣಿಸಿ ಪ್ರಶಸ್ತಿ ಗೆದ್ದಿದೆ. ಭಾರತದ ಈ ಮೂವರು […]