ಅ.1 ರಿಂದ ಕಚೇರಿಗೆ ಬರುವಂತೆ ಉದ್ಯೋಗಿಗಳಿಗೆ ಸೂಚನೆ ವರ್ಕ್ ಫ್ರಂ ಹೋಮ್ ನಿಲ್ಲಿಸಿದ ಟಿಸಿಎಸ್

ಬೆಂಗಳೂರು : ವರ್ಕ್ ಫ್ರಂ ಹೋಮ್ ಅಥವಾ ಹೈಬ್ರಿಡ್ ಕೆಲಸವನ್ನು ಅಂತ್ಯಗೊಳಿಸಲಾಗಿದೆ ಎಂದು ಉದ್ಯೋಗಿಗಳಿಗೆ ಕಳುಹಿಸಲಾದ ಆಂತರಿಕ ಇಮೇಲ್ನಲ್ಲಿ ಕಂಪನಿ ತಿಳಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಆದಾಗ್ಯೂ ತೀರಾ ಅಗತ್ಯದ ಸಂದರ್ಭಗಳಲ್ಲಿ ಹೈಬ್ರಿಡ್ ಮಾದರಿಯ ಕೆಲಸಕ್ಕೆ ಅನುಮತಿ ನೀಡುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅಥವಾ ಹೈಬ್ರಿಡ್ ಮಾದರಿಯ ಕೆಲಸವನ್ನು ಸಂಪೂರ್ಣವಾಗಿ ತೆಗೆದುಹಾಕಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಅಕ್ಟೋಬರ್ 1 ರಿಂದ ಎಲ್ಲಾ ಉದ್ಯೋಗಿಗಳು ಕಡ್ಡಾಯವಾಗಿ ಕಚೇರಿಗೆ ಹಾಜರಾಗುವಂತೆ […]
ಏಷ್ಯನ್ ಗೇಮ್ಸ್ನಲ್ಲಿ ಹೊಸ ದಾಖಲೆ ಬರೆದ ಕನ್ನಡತಿ , ಗಾಲ್ಫ್ ಪಟು ಅದಿತಿ ಅಶೋಕ್ಗೆ ಬೆಳ್ಳಿ ಪದಕ

ಹಾಂಗ್‌ಝೌ (ಚೀನಾ): ಏಷ್ಯನ್ ಕ್ರೀಡಾಕೂಟದ ಗಾಲ್ಫ್‌ನಲ್ಲಿ ಕರ್ನಾಟಕ ಅದಿತಿ ಅಶೋಕ್ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕರ್ನಾಟಕ ಗಾಲ್ಫ್ ಪಟು ಅದಿತಿ ಅಶೋಕ್ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದು ದಾಖಲೆ ಬರೆದಿದ್ದಾರೆ.ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ತಂದಿದ್ದಾರೆ. ಭಾನುವಾರ ಬೆಳಗ್ಗೆ ನಡೆದ ಗಾಲ್ಫ್ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಅದಿತಿ ಅಶೋಕ್ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡರು. ಗಾಲ್ಫ್‌ನಲ್ಲಿ ಪದಕ ಜಯಿಸಿದ ದೇಶದ ಮೊದಲ ಮಹಿಳಾ ಪಟು ಎಂಬ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ.ಇನ್ನು ಏಷ್ಯನ್ […]
ಏಷ್ಯಾಡ್ನಲ್ಲಿ 10ನೇ ಬಂಗಾರ : ಸಾಂಪ್ರದಾಯಿಕ ಎದುರಾಳಿ ಮಣಿಸಿ ಚಿನ್ನ ಗೆದ್ದ ಭಾರತ

ಹ್ಯಾಂಗ್‌ಝೌ (ಚೀನಾ): ಇಂದು (ಶನಿವಾರ) ನಡೆದ ಫೈನಲ್ ಪಂದ್ಯದಲ್ಲಿ ಮಹೇಶ್ ಮಂಗಾಂವ್ಕರ್, ಸೌರವ್ ಘೋಸಾಲ್ ಮತ್ತು ಅಭಯ್ ಸಿಂಗ್ ದಿಟ್ಟ ಪ್ರದರ್ಶನ ತೋರಿದ್ದು, ತೀವ್ರ ಪೈಪೋಟಿಯ ನಡುವೆ ಪಾಕಿಸ್ತಾನವನ್ನು 2-1 ರಿಂದ ಸೋಲಿಸಿ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ.ಏಷ್ಯಾನ್ ಗೇಮ್ಸ್ನಲ್ಲಿ ಸಾಂಪ್ರದಾಯಿಕ ಎದುರಾಳಿಯನ್ನು ಮಣಿಸುವ ಮೂಲಕ ಭಾರತ ಸ್ಕ್ವಾಷ್ ಗೇಮ್ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದೆ.19ನೇ ಏಷ್ಯಾಡ್ನಲ್ಲಿ ಭಾರತದ ಅಥ್ಲೀಟ್ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಂದು ಸ್ಕ್ವಾಷ್ ಗೇಮ್ನಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿ ಚಿನ್ನದ ಪದಕ ಗೆದ್ದಿದೆ. ಸ್ಕ್ವಾಷ್ನಲ್ಲಿ ಸಾಂಪ್ರದಾಯಿಕ […]
ವಿಶ್ವಕಪ್ ಪಯಣ : 2011 ಕಪ್ ವಿಜೇತ ತಂಡದಲ್ಲಿ ವಿರಾಟ್, ಅಶ್ವಿನ್.

ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 2011ರಲ್ಲಿ ವಿಶ್ವಕಪ್ ವಿಜೇತ ತಂಡದಲ್ಲಿ ಭಾಗವಹಿಸಿದ್ದ ಇಬ್ಬರು ಆಟಗಾರರಾಗಿದ್ದಾರೆ. 2011ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಅಮೋಘ ಪ್ರದರ್ಶನ ನೀಡುವಲ್ಲಿ ಇವರಿಬ್ಬರು ಪ್ರಮುಖ ಪಾತ್ರ ವಹಿಸಿದ್ದರು. ಈಗ 2023 ರಲ್ಲಿ ವಿರಾಟ್ ಕೊಹ್ಲಿ ತಮ್ಮ ನಾಲ್ಕನೇ ವಿಶ್ವಕಪ್ ಮತ್ತು ರವಿಚಂದ್ರನ್ ಅಶ್ವಿನ್ ತಮ್ಮ ಮೂರನೇ ಏಕದಿನ ವಿಶ್ವಕಪ್ ಆಡಲಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ 2023 ಅಕ್ಟೋಬರ್ 5 ರಿಂದ ಆರಂಭವಾಗಲಿದೆ.ಭಾರತದ ಸ್ಟಾರ್ […]
ಕಾರ್ತಿಕ್ಗೆ ಬೆಳ್ಳಿ, ಗುಲ್ವೀರ್ಗೆ ಕಂಚು :10000 ಮೀ ಓಟದಲ್ಲಿ ಭಾರತಕ್ಕೆ ಎರಡು ಪದಕದ ಗರಿ

ಹ್ಯಾಂಗ್‌ಝೌ (ಚೀನಾ): 19ನೇ ಏಷ್ಯಾಡ್ನಲ್ಲಿ ಪುರುಷರ 10000 ಮೀ ಓಟದ ಫೈನಲ್‌ನಲ್ಲಿ ಭಾರತಕ್ಕೆ ಡಬಲ್ ಪದಕ ಸಿಕ್ಕಿದೆ. ಏಷ್ಯನ್ ಗೇಮ್ಸ್‌ನಲ್ಲಿ ಶನಿವಾರ ಕಾರ್ತಿಕ್ ಕುಮಾರ್ ಬೆಳ್ಳಿ ಮತ್ತು ಗುಲ್ವೀರ್ ಸಿಂಗ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.ಏಷ್ಯಾನ್ ಗೇಮ್ಸ್ನಲ್ಲಿ ಪುರುಷರ 10000 ಮೀ ಓಟದ ಫೈನಲ್‌ನಲ್ಲಿ ಕಾರ್ತಿಕ್ ಬೆಳ್ಳಿ, ಗುಲ್ವೀರ್ ಕಂಚಿನ ಪದಕ ಗೆದ್ದಿದ್ದಾರೆ. ಕಾರ್ತಿಕ್ 28:15.38 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರೆ, ಗುಲ್ವೀರ್ 28:17.21 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಪಡೆದರು. ಅಯ್ಹಿಕಾ ಮತ್ತು ಸುತೀರ್ಥ […]