ಕ್ರಿಕೆಟ್ ಆಟಗಾರ ರಿಷಭ್ ಪಂತ್ ಬಿಎಂಡಬ್ಲ್ಯು ಕಾರು ಡಿವೈಡರ್‌ಗೆ ಡಿಕ್ಕಿ: ಕಾರಿನಲ್ಲಿ ಬೆಂಕಿ; ಗಂಭೀರ ಗಾಯ

ರೂರ್ಕಿ: ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಅವರ ಕಾರು ದೆಹಲಿಯಿಂದ ಮನೆಗೆ ಮರಳುತ್ತಿದ್ದಾಗ ಅಪಘಾತಕ್ಕೀಡಾಗಿದೆ. ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಅವರ ಕಾರು ಅಪಘಾತಕ್ಕೀಡಾಯಿತು. ಪ್ರಾಥಮಿಕ ಮಾಹಿತಿಯ ಪ್ರಕಾರ, ರಿಷಬ್ ಅವರನ್ನು ಮೊದಲು ರೂರ್ಕಿಯ ಸಕ್ಷಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ ಮತ್ತು ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಪಂತ್ ತಮ್ಮ ಬಿಎಂಡಬ್ಲ್ಯು ಕಾರನ್ನು ಚಲಾಯಿಸುತ್ತಿದ್ದಾಗ ಘಟನೆ ಸಂಭವಿಸಿದೆ. ಅವರು […]

ಬಾರದ ಲೋಕಕ್ಕೆ ಪಯಣಿಸಿದ ಫುಟ್ಬಾಲ್ ದಂತಕಥೆ ಪೀಲೆ: ಮೂರು ಬಾರಿ ವಿಶ್ವಕಪ್ ಗೆದ್ದ ಏಕೈಕ ಫುಟ್ಬಾಲ್ ಪಟು

ಫುಟ್ಬಾಲ್ ದಂತಕಥೆ, ಬ್ರೆಜಿಲ್‌ನ ಸಾರ್ವಕಾಲಿಕ ಪ್ರಮುಖ ಸ್ಕೋರರ್ ಪೀಲೆ 92 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 77 ಗೋಲುಗಳೊಂದಿಗೆ ಆಟವನ್ನು ಆಡಿದ ಸರ್ವಶ್ರೇಷ್ಠ ಆಟಗಾರ ತಮ್ಮ 82 ನೇ ವಯಸ್ಸಿನಲ್ಲಿ ಬಾರದ ಲೋಕದತ್ತ ಪಯಣಿಸಿದ್ದಾರೆ. ಅಪ್ರತಿಮ, ಪ್ರತಿಭೆ, ಚುರುಕುತನ ಮತ್ತು ಸೃಜನಶೀಲತೆಯಿಂದ ತುಂಬಿದ ಸುಂದರವಾದ ಆಟದಿಂದ ಮೂರು-ಬಾರಿ ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿರುವ ಪೀಲೆ ಅಕ್ಟೋಬರ್ 23, 1940 ರಂದು, ದಕ್ಷಿಣ ಬ್ರೆಜಿಲ್‌ನ ಟ್ರೆಸ್ ಕೊರಾಕೋಸ್‌ನಲ್ಲಿ ಬಡಕುಟುಂಬದಲ್ಲಿ ಜನಿಸಿದರು. ಪೀಲೆ ಮೂರು ಬಾರಿ ವಿಶ್ವಕಪ್ ಗೆದ್ದ ಏಕೈಕ ಆಟಗಾರನಾಗಿ ಉಳಿದಿದ್ದಾರೆ. […]

ಎಫ್‌ಐಎಚ್ ನೇಷನ್ಸ್ ಕಪ್‌ ಮಹಿಳಾ ಹಾಕಿ ಪಂದ್ಯಾವಳಿ: ಕಪ್ ಗೆದ್ದು ಬೀಗಿದ ಭಾರತೀಯ ಮಹಿಳಾ ತಂಡ

ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆದ ಉದ್ಘಾಟನಾ ಎಫ್‌ಐಎಚ್ ನೇಷನ್ಸ್ ಕಪ್‌ನಲ್ಲಿ ಕ್ಯಾಪ್ಟನ್ ಸವಿತಾ ಪುನಿಯಾ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ಫೈನಲ್‌ನಲ್ಲಿ ಸ್ಪೇನ್ ಅನ್ನು 1-0 ಗೋಲುಗಳಿಂದ ಸೋಲಿಸಿದೆ. ಭಾರತದ ಗುರ್ಜಿತ್ ಕೌರ್ ಗೆಲುವಿನ ಗೋಲು ದಾಖಲಿಸಿದ್ದಾರೆ. ಉದ್ಘಾಟನಾ ಎಫ್‌ಐಎಚ್ ನೇಷನ್ಸ್ ಕಪ್ ಸ್ಪೇನ್‌ನ ವೇಲೆನ್ಸಿಯಾದಲ್ಲಿ ಡಿ.11ರಿಂದ17 ರವರೆಗೆ ನಡೆಯಿತು. ಕೋವಿಡ್-19 ಸಂಬಂಧಿತ ಸಮಸ್ಯೆಗಳಿಂದಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ತಂಡ ಪಂದ್ಯದಿಂದ ಹೊರಗುಳಿದ ಬಳಿಕ ಬದಲಿ ತಂಡಗಳಾಗಿ ಭಾರತ ಮತ್ತು ಸ್ಪೇನ್ ನ ಮಹಿಳಾ ಹಾಕಿ ತಂಡಗಳು […]

ಅಂಧರ ಟಿ20 ವಿಶ್ವಕಪ್‌ ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಭಾರತ: ಮೂರನೇ ಬಾರಿಯೂ ಕಪ್ ನಮ್ದೇ

ಬೆಂಗಳೂರು: ಶನಿವಾರ ನಡೆದ ಅಂಧರ ಟಿ20 ವಿಶ್ವಕಪ್‌ನ ಅಂತಿಮ ಹಣಾಹಣಿಯಲ್ಲಿ ಭಾರತ ಬಾಂಗ್ಲಾದೇಶವನ್ನು ಸೋಲಿಸಿ ಈ ಬಾರಿಯೂ ಕಪ್ ನಮ್ದೇ ಎಂದು ಬೀಗಿದೆ. ಭಾರತವು ಪಂದ್ಯಾವಳಿಯಲ್ಲಿ ತಮ್ಮ ಮೂರನೇ ಪ್ರಶಸ್ತಿಯನ್ನು ದಾಖಲಿಸಿದೆ. ಈ ಪಂದ್ಯದಲ್ಲಿ ಭಾರತ 120 ರನ್‌ಗಳ ಬೃಹತ್ ಅಂತರದಿಂದ ಎದುರಾಳಿಗಳನ್ನು ಸೋಲಿಸಿದೆ. ಆರಂಭದಿಂದಲೂ ಆತಿಥೇಯ ತಂಡವು ತಮ್ಮ ನೆರೆಯ ಬಾಂಗ್ಲಾದೇಶದ ವಿರುದ್ಧ ಫೈನಲ್‌ಗೆ ಹೋಗುವ ನೆಚ್ಚಿನ ತಂಡವಾಗಿತ್ತು ಮತ್ತು ಬೆಂಗಳೂರಿನ ಮೈದಾನದಲ್ಲಿ ಇತಿಹಾಸವನ್ನು ಸೃಷ್ಟಿಸಿ ಅದ್ಭುತ ವಿಜಯವನ್ನು ಪೂರ್ಣಗೊಳಿಸಿತು. #TeamIndia beat Bangladesh by […]

ಮಹಿಳಾ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತದ ರೋಮಾಂಚಕ ಕದನ: ಸೂಪರ್ ಓವರ್ ನ ಅದ್ಭುತ ಪ್ರದರ್ಶನದಿಂದ ಪಂದ್ಯ ಭಾರತದ ತೆಕ್ಕೆಗೆ

ಮುಂಬೈ: ಇಲ್ಲಿನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಡುವೆ ಟಿ20 ಪಂದ್ಯ ನಡೆದಿದ್ದು, ಇದು ಅತ್ಯುತ್ತಮ ಟಿ20 ಪಂದ್ಯ ಎಂದು ಬಣ್ಣಿಸಲಾಗುತ್ತಿದೆ. ಐದು ಪಂದ್ಯಗಳ ಸರಣಿಯ ಎರಡನೇ ಮಹಿಳಾ ಟಿ20 ಪಂದ್ಯದಲ್ಲಿ 30,000 ಕ್ಕೂ ಹೆಚ್ಚು ಪ್ರೇಕ್ಷಕರ ಸಮ್ಮುಖದಲ್ಲಿ ಆಡಿದ ಈ ಆಟವು ಟೈನಲ್ಲಿ ಕೊನೆಗೊಂಡಿತ್ತು. ಇದಾದ ಬಳಿಕ ಸೂಪರ್ ಓವರ್ ಎಸೆಯಲಾಯಿತು. ಟೀಮ್ ಇಂಡಿಯಾದ ಮಹಿಳಾ ಘಟಕವು ಮೊದಲ ಬಾರಿಗೆ ಸೂಪರ್ ಓವರ್ ಆಡುತ್ತಿತ್ತು […]