ಮಹಿಳಾ ವಿಶ್ವಕಪ್ ಟಿ20: ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ

ಐಸಿಸಿ ಮಹಿಳಾ ವಿಶ್ವಕಪ್ ಟಿ20 ಟೂರ್ನಿ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಹೋರಾಟ ನಡೆಸಲಿದೆ. ವಿಶ್ವಕಪ್ ಟಿ20 ಟೂರ್ನಿ ಸೆಮಿಫೈನಲ್ ಪಂದ್ಯಕ್ಕೆ ಮಳೆ ವಿಪರೀತ ಅಡ್ಡಿಯಾಗಿದ್ದು, ಅಂಕಪಟ್ಟಿ ಆಧಾರದಲ್ಲಿ ಇಂಗ್ಲೆಂಡ್ ಹಿಂದಿಕ್ಕಿದ ಭಾರತ ವನಿತೆಯರು ಫೈನಲ್ ಪ್ರವೇಶಿಸಿದ್ದರು. ಹಾಗೇಯೆ 2ನೇ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾವನ್ನು ಸೋಲಿಸಿ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿದೆ. ಮಾ.8 ರಂದು ನಡೆಯಲಿರುವ ಫೈನಲ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

ಐಪಿಎಲ್ 2020: ಆರ್ ಸಿಬಿ ಹೊಸ ಲೋಗೋ ಬಿಡುಗಡೆ

ಐಪಿಎಲ್ 2020 ಆವೃತ್ತಿ ಮಾರ್ಚ್ 29 ರಿಂದ ಪ್ರಾರಂಭವಾಗುತ್ತಿದ್ದು. ಇದಕ್ಕೆ ಮುನ್ನ ಆರ್. ಸಿ.ಬಿ. ತನ್ನ ಹೊಸ ಲೋಗೋವನ್ನು ಬಿಡುಗಡೆಗೊಳಿಸಿದೆ. ಈ ಬಗ್ಗೆ ಆರ್ ಸಿಬಿಯ ಅಧ್ಯಕ್ಷ ಸಂಜೀವ್ ಚುರಿವಾಲ ಮಾತನಾಡಿದ್ದು, ನಮ್ಮ ಲೋಗೋವಿನಲ್ಲಿ ತಂಡದ ಆಕ್ರಮಣಕಾರಿ ಕ್ರೀಡಾ ಮನೋಭಾವ, ಕ್ರೀಡಾಭಿಮನಿಗಳನ್ನು ನಿರಂತರವಾಗಿ ರಂಜಿಸುವ ಅಂಶಗಳು ಕಾಣಸಿಗುತ್ತವೆ ಎಂದು ಹೇಳಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭವಾಗಿ 12 ವರ್ಷ ಕಳೆದರು, ಇದುವರೆಗೂ ಆರ್‌ಸಿಬಿ ಪ್ರಶಸ್ತಿ ಗೆಲ್ಲುವಲ್ಲಿ ಸಾಧ್ಯವಾಗಲಿಲ್ಲ. ಶುಕ್ರವಾರ ಆರ್‌ಸಿಬಿ ತನ್ನ ಹೊಸ ಲಾಂಛನವನ್ನು ಅನಾವರಣಗೊಳಿಸಿದ್ದು, ತನ್ನ […]