ಮಧುರೈ ಪ್ರವಾಸಿ ರೈಲಿನಲ್ಲಿ ಬೆಂಕಿ ಅವಘಡ: ಸಾವಿನ ಸಂಖ್ಯೆ 9ಕ್ಕೆ ಏರಿಕೆ

ಮಧುರೈ (ತಮಿಳುನಾಡು): ಉತ್ತರ ಪ್ರದೇಶ ರಾಜ್ಯದ ಲಖನೌದಿಂದ ರಾಮೇಶ್ವರಂಗೆ ಬರುತ್ತಿದ್ದ ಪ್ರವಾಸಿ ರೈಲಿನ ಖಾಸಗಿ ಕೋಚ್​​ಗೆ, ಮಧುರೈ ಸಮೀಪ ಬೆಂಕಿ ತಗುಲಿದೆ.ಈ ಅಗ್ನಿ ಅವಘಡದ ವೇಳೆ, ರೈಲಿನಲ್ಲಿ ಪ್ರಯಾಣಿಸುತ್ತಿದ್ದ 9 ಜನರು ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದುರ್ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಉತ್ತರ ಪ್ರದೇಶದ ಲಖಿಪುರದಿಂದ ಬಂದಿದ್ದ ಪ್ರವಾಸಿ ರೈಲಿನಲ್ಲಿ ಮಧುರೈ ಸಮೀಪ ಬೆಂಕಿ ತಗುಲಿದ್ದು, ರೈಲಿನಲ್ಲಿ ಪ್ರಯಾಣಿಸುತ್ತಿದ್ದ 9 ಜನರು ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದಾರೆ. ಉತ್ತರ […]

ಉತ್ತರಾಖಂಡದಲ್ಲಿ ಭೂಕಂಪ : ಮತ್ತೆ ನಡುಗಿದ ಭೂಮಿ

ಭೂಕಂಪವು ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಉತ್ತರಾಖಂಡ ಯಾವಾಗಲೂ ಭೂಕಂಪಗಳಿಗೆ ತುತ್ತಾಗುತ್ತಲೇ ಇರುತ್ತದೆ. ಈಗ ಚಮೋಲಿಯಲ್ಲಿ ಭೂಮಿ ಕಂಪಿಸಿದ್ದು, ಜನರು ಭಯಭೀತಗೊಂಡಿದ್ದಾರೆ. ಚಮೋಲಿ, ಉತ್ತರಾಖಂಡ: ಚಮೋಲಿಯಲ್ಲಿ ಭೂಕಂಪದ ಅನುಭವವಾಗಿದೆ. ಭೂಕಂಪನ ಹಿನ್ನೆಲೆ ಜನರು ಭಯಭೀತರಾಗಿ ಮನೆಯಿಂದ ಹೊರಬಂದಿದ್ದಾರೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆಯು 2.8 ರಷ್ಟಿದೆ ಎಂದು ತಿಳಿದು ಬಂದಿದೆ. ಆದರೆ, ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮತ್ತೊಂದೆಡೆ ಇಂದು ಮತ್ತೆ ಬೆಳಗ್ಗೆ […]

ವಯನಾಡಿನಲ್ಲಿ ಕಂದಕಕ್ಕೆ ಬಿದ್ದ ಜೀಪ್ ಹಿನ್ನೆಲೆ : 9 ಮಂದಿ ಮಹಿಳಾ ಕಾರ್ಮಿಕರು ಸಾವು

ವಯನಾಡು (ಕೇರಳ): ಕೇರಳದ ವಯನಾಡು ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಜೀಪ್ ಅಪಘಾತದಲ್ಲಿ 9 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.ಚಹಾ ತೋಟದ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಜೀಪ್ ಕಂದಕಕ್ಕೆ ಬಿದ್ದು 9 ಜನರು ಮೃತಪಟ್ಟ ಘಟನೆ ಕೇರಳದ ವಯನಾಡು ಜಿಲ್ಲೆಯಲ್ಲಿ ಇಂದು ನಡೆದಿದೆ. ಅಪಘಾತಕ್ಕೀಡಾದ ಜೀಪ್ ಚಹಾ ತೋಟದ ಕಾರ್ಮಿಕರನ್ನು ಹೊತ್ತೊಯ್ಯುತ್ತಿತ್ತು. ಒಟ್ಟು 12 ಜನ ಮಹಿಳೆಯರು ಜೀಪ್ನಲ್ಲಿದ್ದರು. ಇವರು ಚಹಾ ತೋಟದ ಕೆಲಸ ಮುಗಿಸಿ ತಮ್ಮ ಮನೆಗಳಿಗೆ ಮರಳುತ್ತಿದ್ದರು. ಮಧ್ಯಾಹ್ನ 3:30ರ ಸುಮಾರಿಗೆ ಮಾರ್ಗ ಮಧ್ಯೆ 30 ಅಡಿ […]

ರೋಹಿಣಿ ಸಿಂಧೂರಿ ಮಾನಹಾನಿ ಪ್ರಕರಣ: ಪ್ರಕರಣ ರದ್ದು ಕೋರಿ ರೂಪಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ತನ್ನ ವಿರುದ್ದ ಮಿಥ್ಯಾರೋಪ ಮಾಡಿರುವ ಕಾರಣ ಐಎಎಸ್​​ ಅಧಿಕಾರಿ ರೋಹಿಣಿ ಸಿಂಧೂರಿ ದಾಖಲು ಮಾಡಿದ್ದ ಮಾನಹಾನಿ ಕೇಸ್​​​ ವಿಚಾರದಲ್ಲಿ ಐಪಿಎಸ್​ ಅಧಿಕಾರಿ ಡಿ. ರೂಪಾ‌ ಮೌದ್ಗಿಲ್ ಗೆ ಹಿನ್ನಡೆಯಾಗಿದೆ. ಪ್ರಕರಣ ರದ್ದು ಕೋರಿ ರೂಪಾ ಹೈಕೋರ್ಟ್​​ಗೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. 2023 ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಮಾಡಿದ್ದ ಮಾನಹಾನಿ ಪೋಸ್ಟ್​ಗಳನ್ನು ಹಂಚಿಕೊಂಡಿದ್ದ ಡಿ ರೂಪಾ ಅವರ ವಿರುದ್ಧ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮಾನನಷ್ಟ ಪ್ರಕರಣ ದಾಖಲು […]

ತೃತೀಯಲಿಂಗಿಗೆ ಮೊದಲ ಬಾರಿಗೆತೆಲಂಗಾಣದಲ್ಲಿ ಲಭಿಸಿದ ಪಿಜಿ ವೈದ್ಯಕೀಯ ಸೀಟು

ಹೈದರಾಬಾದ್:ತೆಲಂಗಾಣದ ತೃತೀಯಲಿಂಗಿ, 29 ವರ್ಷದ ಡಾ.ರುತ್ಪಾಲ್ ಜಾನ್ ತುಂಬಾ ಕಷ್ಟಪಟ್ಟು ಅಧ್ಯಯನ ಮಾಡಿದ್ದರಿಂದ ಮೊದಲ ಬಾರಿಗೆ ಸ್ನಾತಕೋತ್ತರ ಪದವಿಯ ವೈದ್ಯಕೀಯ ಸೀಟು ಲಭಿಸಿದೆ. ಖಮ್ಮಂ ನಿವಾಸಿ 29 ವರ್ಷದ ಡಾ.ರುತ್ಪಾಲ್ ಜಾನ್ ತುಂಬಾ ಕಷ್ಟಪಟ್ಟು ಅಧ್ಯಯನ ಮಾಡಿದರು. ಕಠಿಣ ಪರಿಶ್ರಮದಿಂದ ಎಂಬಿಬಿಎಸ್ ಮುಗಿಸಿ ಸದ್ಯ ಹೈದರಾಬಾದ್​ನ ಉಸ್ಮಾನಿಯಾ ಮೆಡಿಕಲ್ ಕಾಲೇಜಿನ ಎಆರ್​ಟಿ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ವಿವಿಧ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಹೊಂದಿರುವ ಬಡ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ.ವೈದ್ಯಕೀಯ ಶಿಕ್ಷಣದಲ್ಲಿ ಮೊದಲ ಬಾರಿಗೆ ತೃತೀಯಲಿಂಗಿಯೊಬ್ಬರು ಪಿಜಿ […]