ರಾಜ್ಯದಲ್ಲಿ ಮತ್ತೆ ವರುಣನ ಪ್ರವೇಶ: ಮೂರು ನಾಲ್ಕು ದಿನ ಮಳೆ ಸಾಧ್ಯತೆ

ಬೆಂಗಳೂರು: ರಾಜಧಾನಿ ಸೇರಿ ಹದಿನಾಲ್ಕು ಜಿಲ್ಲೆಗಳಲ್ಲಿ ಇನ್ನು ಕೆಲವು ದಿನ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯು ನೀಡಿದೆ. ಮುಂದಿನ ಮೂರು ದಿನ ಕಾಲ ಬೆಂಗಳೂರು ಸೇರಿದಂತೆ ಹದಿನಾಲ್ಕು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಯಲ್ಲೋ ಅಲರ್ಟ್‌ ಘೋಷಿಸಿದೆ. ಕರ್ನಾಟಕದ ಹಲವೆಡೆ ಮುಂದಿನ ನಾಲ್ಕು ದಿನಗಳ ಕಾಲ ಗಂಟೆಗೆ 30 ರಿಂದ 40 ಕಿ.ಮಿ ವೇಗದಲ್ಲಿ ಗಾಳಿ ಬೀಸಲಿದೆ. ಕರಾವಳಿ ಭಾಗದಲ್ಲಿ ಇದು ಇನ್ನೂ ಹೆಚ್ಚಿದ್ದು, 40 ರಿಂದ […]

ಪಶ್ಚಿಮ ಬಂಗಾಳದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಹಿನ್ನೆಲೆ : 6 ಮಂದಿ ದಾರುಣ ಸಾವು

ಕೋಲ್ಕತ್ತಾ (ಪಶ್ಚಿಮ ಬಂಗಾಳ) : ಪಶ್ಚಿಮ ಬಂಗಾಳದ ಪಟಾಕಿ ತಯಾರಿಸುವ ಕಾರ್ಖಾನೆಯಲ್ಲಿ ದೊಡ್ಡ ಪ್ರಮಾಣದ ಸ್ಫೋಟ ಸಂಭವಿಸಿದೆ ಮರ, ಪಕ್ಕದ ಮನೆ ಮೇಲೆಲ್ಲ ದೇಹದ ತುಂಡುಗಳು: ಕಾರ್ಖಾನೆಯ ಸಮೀಪದ ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಮೃತದೇಹಗಳು ಪತ್ತೆಯಾಗಿವೆ. ಅಲ್ಲದೇ, ಭೀಕರ ಸ್ಫೋಟದ ನಂತರ ಪಕ್ಕದ ಮನೆಗಳು ಮತ್ತು ಮರಗಳ ಮೇಲೂ ಕೆಲ ದೇಹದ ತುಂಡುಗಳು ಕಂಡುಬಂದಿದ್ದು, ಸ್ಫೋಟದ ತೀವ್ರತೆಯು ಸ್ಥಳೀಯರಲ್ಲಿ ಭಾರಿ ಆತಂಕ ಉಂಟುಮಾಡಿದೆ. ಉತ್ತರ 24 ಪರಗಣ ಜಿಲ್ಲೆಗೆ ಸೇರಿದ ದತ್ತಪುಕುರ್​ದಲ್ಲಿ ಪಟಾಕಿ ತಯಾರಿಸುವ ಕಾರ್ಖಾನೆಯಲ್ಲಿ ಇಂದು […]

ಆಗಸ್ಟ್ 28ರಂದು ಕೆಕೆಆರ್ಟಿಸಿಯಿಂದ ‘ಕಲ್ಯಾಣ ರಥ’ ಹೈಟೆಕ್ ಸ್ಲೀಪರ್ ಬಸ್ ಸೇವೆಗೆ ಚಾಲನೆ

ಕಲಬುರಗಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (ಕೆಕೆಆರ್‌ಟಿಸಿ) ಹೊಸದಾಗಿ ಹೈಟೆಕ್ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ ಸೇರ್ಪಡೆಯಾಗಿದೆ. ಕಲ್ಯಾಣ ರಥ’ ಎಂಬ ಹೆಸರಿನ ಈ ಐಷಾರಾಮಿ ಬಸ್ ಇದೇ ಆಗಸ್ಟ್ 28 ರಿಂದ ರಸ್ತೆಗೆ ಇಳಿಯಲಿದೆ. ಮೊದಲ ಹಂತದಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು-ಬೆಂಗಳೂರು ನಡುವೆ ಸಂಚಾರ ನಡೆಸಲಿದೆ.‌ ”ಆಗಸ್ಟ್ 28 ರಂದು ಸಿಂಧನೂರಿನಲ್ಲಿ ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಅವರು ನೂತನ ಬಸ್ಗೆ ಚಾಲನೆ ನೀಡಲಿದ್ದಾರೆ. ಸಂಸ್ಥೆಗೆ ಕಲ್ಯಾಣ ರಥ […]

2024ರ ವಿಧಾನ ಪರಿಷತ್ ಚುನಾವಣೆಗೆ ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ

ಬೆಂಗಳೂರು: ಲೋಕಸಭಾ ಚುನಾವಣೆ ಬಳಿಕ ನಡೆಯುವ ವಿಧಾನ ಪರಿಷತ್​ನ 7 ಸ್ಥಾನಗಳ ಚುನಾವಣೆಗೆ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿ ಬಿಜೆಪಿ ಚುನಾವಣಾ ಸಿದ್ಧತಾ ಕಾರ್ಯವನ್ನು ಆರಂಭಿಸಿದೆ.ಭಾ ಚುನಾವಣೆಯಲ್ಲಿ ಸೋತವರಿಗೂ ಜವಾಬ್ದಾರಿ ನೀಡಲಾಗಿದ್ದು, ಸಂಘಟನೆಗೆ ಬಳಸಿಕೊಳ್ಳಲು ಪಕ್ಷ ಮುಂದಾಗಿದೆ. ಬಿಜೆಪಿ 2024ರ ಜೂನ್ ತಿಂಗಳಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಮಾಜಿ ಸಚಿವ ಬಿ ಶ್ರೀರಾಮುಲು, ನೈರುತ್ಯ ಪದವೀಧರ ಕ್ಷೇತ್ರಕ್ಕೆ ಸಿ ಟಿ ರವಿ, ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಆರ್ […]

ಸಿಎಂ ಸಿದ್ದರಾಮಯ್ಯ ಮೂರು ದಿನಗಳ ಕಾಲ ಮೈಸೂರು ಪ್ರವಾಸ

ಮೈಸೂರು: ಆಗಸ್ಟ್ 27ರ ಬೆಳಗ್ಗೆ 8 ಗಂಟೆಗೆ ಸ್ಥಳೀಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಆಗಸ್ಟ್ 28ರ ಬೆಳಗ್ಗೆ 11ಕ್ಕೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿರುವ ಕೆಡಿಪಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 27 ರಿಂದ 30 ರ ವರೆಗೆ ಜಿಲ್ಲೆಯಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಸಿದ್ದಾರ್ಥ ನಗರದ ಕಣ್ಣಿನ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ರಾತ್ರಿ 7 ಗಂಟೆಗೆ ಹೋಟೆಲ್ ಜೆಪಿ ಪ್ಯಾಲೇಸ್​ನಲ್ಲಿ ಗಂಗೋತ್ರಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆ.29ರಂದು […]