ಸೂರತ್‌ನ ಆಲ್‌ಪಾಡ್‌ ಕಡಲತೀರದಲ್ಲಿ 20 ಅಡಿ ಉದ್ದದ ಬೃಹದಾಕಾರದ ತಿಮಿಂಗಲ​ ಪತ್ತೆ

ಸೂರತ್ (ಗುಜರಾತ್): ಸೂರತ್‌ನ ಆಲ್‌ಪಾಡ್‌ ಕಡಲತೀರದಲ್ಲಿ 20 ಅಡಿ ಉದ್ದದ ಬೃಹದಾಕಾರದ ತಿಮಿಂಗಲ​ ಪತ್ತೆಯಾಗಿದೆ. ತಾಲೂಕಿನ ಆಲ್‌ಪಾಡ್‌ ಸಮೀಪದ ಕಡಲತೀರದಲ್ಲಿ ಭಾರೀ ಗಾತ್ರದ ತಿಮಿಂಗಲ ಪತ್ತೆಯಾಗಿದ್ದು , ಆಲ್‌ಪಾಡ್‌ ಕಡಲತೀರದ ಗ್ರಾಮವಾಗಿದ್ದು ಬೃಹದಾಕಾರದ ಮೀನುಗಳಿವೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು. ಆದರೆ, ಎಂದೂ ನೋಡಿರಲಿಲ್ಲ. ಅರಬ್ಬೀ ಸಮುದ್ರದಿಂದ ದಡಕ್ಕೆ ಹೊರಬಿದ್ದ ಈ ಬೃಹತ್ ಗಾತ್ರದ ಈ ಮೀನು ಕಂಡು ಆಶ್ಚರ್ಯಚಕಿತರಾದರು. ಅಲ್ಲದೇ ಅನುಮಾನ ನಿಜವಾಗಿದ್ದಕ್ಕೆ ಕೆಲವರು ಆ ಮೀನಿನ ಜೊತೆಗೆ ಫೋಟೋ ಹಾಗೂ ವಿಡಿಯೋ ಮಾಡಿಕೊಂಡರು. ಅದರ ಫೋಟೋಗಳು […]

ಕೆಎಸ್​ಆರ್​ಟಿಸಿ ಬಸ್-ಕಾರು ನಡುವೆ ಭೀಕರ ರಸ್ತೆ ಅಪಘಾತ ರಾಮನಗರದಲ್ಲಿ 6 ಮಂದಿ ಸಾವು

  ರಾಮನಗರ: ಕೆಎಸ್​ಆರ್​ಟಿಸಿ ಬಸ್ ಮತ್ತು ಕ್ವಾಲಿಸ್ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಸಾತನೂರು ಕೆಮ್ಮಾಳೆ ಗೇಟ್​ಬಳಿ ಇಂದು ನಡೆದಿದೆ.ಮಹದೇಶ್ವರ ಬೆಟ್ಟದಿಂದ ವಾಪಸ್ ಆಗ್ತಿದ್ದ ಕಾರು ಬೆಂಗಳೂರಿನಿಂದ ಮಳವಳ್ಳಿ ಕಡೆ ಸಂಚರಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಕಾರು ಸಂಪೂರ್ಣ ಜಖಂ ಆಗಿದೆ. ಕೆಎಸ್​ಆರ್​ಟಿಸಿ ಬಸ್ ಮತ್ತು ಕಾರಿನ ನಡುವೆ ರಾಮನಗರದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಬಸ್‌ನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ಸಾತನೂರು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ […]

ದಾವಣಗೆರೆ: 40 ಅಡಿ ಎತ್ತರದ ಗೋಡೆ ಹಾರಿ ಜೈಲಿನಿಂದ ಪರಾರಿಯಾದ ಆರೋಪಿ; 24 ಗಂಟೆಗಳಲ್ಲಿ ಮರು ಬಂಧಿಸಿದ ಪೊಲೀಸರು!

ದಾವಣಗೆರೆ: ಕೈದಿಯೊಬ್ಬ 40 ಅಡಿ ಎತ್ತರದ ಗೋಡೆ ಹಾರಿ ಜೈಲಿನಿಂದ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಕಾರಾಗೃಹದ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ದೃಶ್ಯ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿಯನ್ನು ವಸಂತ್ (23) ಎಂದು ಗುರುತಿಸಲಾಗಿದ್ದು, ಅತ್ಯಾಚಾರದ ಆರೋಪದ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಬಂಧಿಸಲಾಗಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ, ಆತನನ್ನು ಜೈಲಿನಲ್ಲಿ ಇರಿಸಲಾಗಿತ್ತು. ಆಗಸ್ಟ್ 25ರಂದು ಉಪ- ಜೈಲಿನ 40 ಅಡಿ ಎತ್ತರದ ಗೋಡೆಯಿಂದ ವಸಂತ್ ಜಿಗಿದಿದ್ದಾನೆ. […]

ಸತ್ಯ ಪರಿಶೀಲನಾ ಘಟಕವನ್ನು ಸ್ಥಾಪಿಸುವ ಕರ್ನಾಟಕ ಸರ್ಕಾರದ ನಿರ್ಧಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ ಎಡಿಟರ್ಸ್ ಗಿಲ್ಡ್

ನವದೆಹಲಿ: ಸಾಮಾಜಿಕ ಮಾಧ್ಯಮದ ಪ್ಲಾಟ್‌ಫಾರ್ಮ್‌ಗಳಲ್ಲಿ “ನಕಲಿ ಸುದ್ದಿ” ಗಳ ಮೇಲೆ ನಿಗಾ ಇಡಲು ಸತ್ಯ ಪರಿಶೀಲನಾ (Fact-Check) ಘಟಕವನ್ನು ಸ್ಥಾಪಿಸುವ ಕರ್ನಾಟಕ ಸರ್ಕಾರದ ನಿರ್ಧಾರದ ಬಗ್ಗೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಭಾನುವಾರ ಕಳವಳ ವ್ಯಕ್ತಪಡಿಸಿದೆ. ಅಂತಹ ವಿಷಯವನ್ನು ಪರಿಶೀಲಿಸುವ ಪ್ರಯತ್ನಗಳು ಸರ್ಕಾರದ ಏಕಸ್ವಾಮ್ಯದಲ್ಲಿಲ್ಲದ ಸ್ವತಂತ್ರ ಸಂಸ್ಥೆಗಳಿಂದ ಆಗಿರಬೇಕು ಎಂದು ಗಿಲ್ಡ್ ಒತ್ತಾಯಿಸಿದೆ. ಏಕೆಂದರೆ ಅವುಗಳು ಭಿನ್ನಾಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕುವ ಸಾಧನಗಳಾಗುತ್ತವೆ ಎಂದು ಅದು ಹೇಳಿದೆ. ಅಂತಹ ಯಾವುದೇ ಮೇಲ್ವಿಚಾರಣಾ ಚೌಕಟ್ಟುಗಳು ಪೂರ್ವ ಸೂಚನೆ ನೀಡುವುದು, ಮೇಲ್ಮನವಿ […]

NEP ಗೆ ತಿಲಾಂಜಲಿ: ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಸಂಘದಿಂದ ವಿರೋಧ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ತೆಗೆದುಹಾಕುವುದಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದಾರೆ. ಈ ಘೋಷಣೆಗೆ ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ಇದೀಗ ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಸಂಘದಿಂದ ವಿರೋಧ ವ್ಯಕ್ತವಾಗಿದೆ. ಸರಕಾರ ಈ ನೀತಿಯನ್ನು ಕೈಬಿಡುವ ಬದಲು ಬದಲಾವಣೆ ಮಾಡಬೇಕು ಎಂದು ಸಂಘ ಒತ್ತಾಯಿಸಿದೆ. ಖಾಸಗಿ ಶಾಲೆಗಳ ಸಂಘದ ಪ್ರಕಾರ, ಇದು ವಿದ್ಯಾರ್ಥಿಗಳ ದೃಷ್ಠಿಯಿಂದ ‘ಆರೋಗ್ಯಕರ ಬೆಳವಣಿಗೆಯಲ್ಲ’ ಮತ್ತು ಸರ್ಕಾರವು ಈಗಾಗಲೇ ಜಾರಿಗೆ ಬಂದಿರುವಂತೆ ಎನ್‌ಇಪಿಯನ್ನು ಮುಂದುವರಿಸಬೇಕು […]