200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆ ಅಕ್ಟೋಬರ್​ 6, 7ಕ್ಕೆ ಬೃಹತ್ ಉದ್ಯೋಗ ಮೇಳ: ಪ್ರಸಾದ್ ಶೆಟ್ಟಿ

ಕಾರವಾರ (ಉತ್ತರ ಕನ್ನಡ): ”ಆಳ್ವಾಸ್ ಶಿಕ್ಷಣ ಪತಿಷ್ಠಾನದ ವತಿಯಿಂದ ಮೂಡಬಿದಿರೆಯ ವಿದ್ಯಾಗಿರಿ ಕಾಲೇಜು ಆವರಣದಲ್ಲಿ ಅಕ್ಟೋಬರ್ 6 ಮತ್ತು 7 ರಂದು `ಆಳ್ವಾಸ್ ಪ್ರಗತಿ-2023′ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ” ಎಂದು ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಹೇಳಿದರು. ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಮಾತನಾಡಿ ಅಕ್ಟೋಬರ್​ 6 ಹಾಗೂ 7ಕ್ಕೆ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಈ ಮೇಳದಲ್ಲಿ […]

ಕಾಂದಿವಿಲಿ ಕನ್ನಡ ಸಂಘ ಮಹಿಳಾ ವಿಭಾಗದ ವತಿಯಿಂದ ವಾರ್ಷಿಕ ಭಜನಾ ಕಾರ್ಯಕ್ರಮ

ಮುಂಬಯಿ: ಮುಂಬಯಿ ಪಶ್ಚಿಮದ ಉಪನಗರದ ಹಿರಿಯ ಕನ್ನಡ ಸಂಸ್ಥೆಗಳಲ್ಲೊಂದಾದ ಕಾಂದಿವಿಲಿ ಕನ್ನಡ ಸಂಘ ದಹಾಣುಕರ್ ವಾಡಿ ಕಾಂದಿವಿಲಿ ಇದರ ಮಹಿಳಾ ವಿಭಾಗದ ಸದಸ್ಯರ ವತಿಯಿಂದ ಗಣೇಶ ಚತುರ್ಥಿಯ ಅಂಗವಾಗಿ ವಾರ್ಷಿಕ ಭಜನಾ ಕಾರ್ಯಕ್ರಮವು ಸೆ. 26ರಂದು ಕಾಂದಿವಿಲಿ ಪಶ್ಚಿಮದ ಪೊಯ್ಸರ್ ಜಿಮ್ಕಾನದ ಸಭಾಗೃಹದಲ್ಲಿ ಭಜನೆ ಭಕ್ತಿ ಗಾಯನ ಭಜನಾ ಕುಣಿತ ಇನ್ನಿತರ ಧಾರ್ಮಿಕ ವೈವಿಧ್ಯ ಕಾರ್ಯಕ್ರಮದೊಂದಿಗೆ ಜರಗಿತು. ಕಾರ್ಯಕ್ರಮವನ್ನು ಸಂಘದ ಉಪಾಧ್ಯಕ್ಷ ಪ್ರೇಮ್ ನಾಥ್ ಪಿ ಕೋಟ್ಯಾನ್ ಪದಾಧಿಕಾರಿಗಳು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಭಿತಾ ಜಿ ಪೂಜಾರಿ […]

ಗಂಗಾವತಿಯಲ್ಲಿ ಆದಿ ಮಾನವ ಕಾಲಕ್ಕೆ ಸೇರಿದ್ದ 2 ಸಾವಿರ ವರ್ಷ ಹಿಂದಿನ ವಾಸದ ಮತ್ತೊಂದು ನೆಲೆ ಪತ್ತೆ

ಗಂಗಾವತಿ : ಇಲ್ಲಿನ ಹಿರೇಬೆಣಕಲ್​ನಲ್ಲಿ ಸುಮಾರು ಎರಡು ಸಾವಿರ ವರ್ಷದ ಆದಿ ಮಾನವ ವಾಸದ ನೆಲೆಗಳು ಪತ್ತೆಯಾದ ಬೆನ್ನಲ್ಲೇ ಇದೀಗ ತಾಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅದೇ ಕಾಲಮಾನಕ್ಕೆ ಸೇರಿದ್ದಿರಬಹುದು ಎಂದು ಊಹಿಸಲಾದ ಆದಿ ಮಾನವರ ವಾಸದ ಮತ್ತೊಂದು ನೆಲೆ ಪತ್ತೆಯಾಗಿದೆ. ಗಂಗಾವತಿಯ ಹೆಚ್.ಆರ್.ಜಿ ನಗರದ ಸಮೀಪ ಇರುವ ಬೆಟ್ಟದಲ್ಲಿ ಆದಿ ಮಾನವರ ಕಾಲಮಾನಕ್ಕೆ ಸೇರಿದ್ದು ಎನ್ನಲಾದ ಮಾನವನ ನೆಲೆ ಪತ್ತೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ತಾಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇತಿಹಾಸಕಾರರು ಅಥವಾ ಸಂಶೋಧಕರು […]

ಚಿತ್ರನಟ ಅನಿರುದ್ದ ಜಟ್ಕರ್ ಇವರಿಗೆ ವಿಶ್ವಕರ್ಮ ಸೇವಾ ರತ್ನ ಪ್ರಶಸ್ತಿ

ಬೆಂಗಳೂರು: ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನ(ರಿ) ವತಿಯಿಂದ ರಾಜ್ಯ ಮಟ್ಟದ ಬೃಹತ್ ವಿರಾಟ್ ವಿಶ್ವಕರ್ಮ ಮಹೋತ್ಸವ ಹಾಗೂ ಪ್ರಶಸ್ತಿ ಪದಾನ ಸಮಾರಂಭವು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಸೆ.೩೦ ರಂದು ಜರುಗಿತು. ಈ ಸಂದರ್ಭದಲ್ಲಿ ಚಲನಚಿತ್ರ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ೨೦೨೩ ನೇ ಸಾಲಿನ ‘ವಿಶ್ವ ಕರ್ಮ ಸೇವಾ ರತ್ನ’ ಪ್ರಶಸ್ತಿಯನ್ನು ಬಹುಮುಖ ಪ್ರತಿಭೆಯ ಚಿತ್ರನಟ ಅನಿರುದ್ದ ಜಟ್ಕರ್ ಇವರಿಗೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಹಾಗೂ ವಿಶ್ವಕ್ರಮ […]

ಮುಂಬೈ ಶ್ರೀ ಶ್ರೀ ರಮಾನಂದ ಗುರೂಜಿ ಭೇಟಿ

ದೇವಿ ಅನುಗ್ರಹಿತ ಭಕ್ತನಾಗಿ ತನ್ನ ಸೂಕ್ತ ಮಾರ್ಗದರ್ಶನದಿಂದ ಸಂಕಷ್ಟ ನಿವಾರಿಸಿ ಭಕ್ತ ಜನರು ಮಾತನಾಡುವ ಶಕ್ತಿ ಎನಿಸಿದ ಶ್ರೀ ಗುರುಜಿಯವರ ಸಂದರ್ಶನ ಬಯಸುವ ಭಕ್ತಾದಿಗಳು ಆಪ್ತ ಕಾರ್ಯದರ್ಶಿ ಶ್ರೀಮತಿ ಕುಸುಮ ನಾಗರಾಜ್ ಇವರನ್ನು ಮೊಬೈಲ್ ಸಂಖ್ಯೆ 9342749650, 7738387979 ಸಂಪರ್ಕಿಸಬಹುದು ಮುಂಗಡ ಹೆಸರು ನೋಂದಾಯಿಸಿಕೊಳ್ಳಬಹುದು. ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಅಕ್ಟೋಬರ್ ಸೋಮವಾರ ತಾರೀಕು 2 ರಿಂದ ತಾರೀಕು ನಾಲ್ಕರ […]