ಗಿನ್ನಿಸ್ ದಾಖಲೆ ಬರೆದ ಗರ್ಭಿಣಿ :ಸತತ 26 ಗಂಟೆಗಳ ಕಾಲ ಸ್ಯಾಕ್ಸೋಫೋನ್ ನುಡಿಸಿ ದಾಖಲೆ

ಹೊಸಕೋಟೆ (ಬೆಂಗಳೂರು): 7 ತಿಂಗಳ ಗರ್ಭಿಣಿ ಸತತ 26 ಗಂಟೆ ಸ್ಯಾಕ್ಸೋಫೋನ್ ನುಡಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿ ವಿಶೇಷ ಮನ್ನಣೆ ತನ್ನದಾಗಿಸಿಕೊಂಡಿದ್ದಾರೆ.ಗರ್ಭಿಣಿಯೊಬ್ಬರು ಸತತ 26 ಗಂಟೆಗಳ ಕಾಲ ಸ್ಯಾಕ್ಸೋಫೋನ್ ನುಡಿಸಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪದ ಆವಲಹಳ್ಳಿ ನಿವಾಸಿ ಸುಬ್ಬಲಕ್ಷ್ಮೀ ಈ ಸಾಧಕಿ. ಕಳೆದ ಪೆಬ್ರವರಿಯಲ್ಲಿ ಇವರು ಆವಲಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 26 ಗಂಟೆ 23 ನಿಮಿಷ ಸ್ಯಾಕ್ಸೊಫೋನ್ ನುಡಿಸಿದ್ದಾರೆ. ಇಷ್ಟು ಸಮಯ ನಿರಂತರವಾಗಿ ಸ್ಯಾಕ್ಸೊಪೋನ್ ನುಡಿಸಿದ ಮೊದಲ ಮಹಿಳೆ ಅನ್ನೋ […]
ನ್ಯೂಸ್ ಪೇಪರ್ನಲ್ಲೇ 12 ಅಡಿ ಗಣೇಶನನ್ನು ಪ್ರತಿಷ್ಠಾಪಿಸಿ ಪರಿಸರ ಪ್ರೇಮ ಮೆರೆದ ಸಿದ್ದಗಂಗಾ ಶಾಲೆಯ ವಿದ್ಯಾರ್ಥಿಗಳು

ದಾವಣಗೆರೆ : ಸಿದ್ದಗಂಗಾ ಶಾಲೆಯ ನಿರ್ದೇಶಕ ಡಾ ಜಯಂತ್ ಅವರು ಪರಿಸರ ಸ್ನೇಹಿ ಗಣಪತಿ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ್ದಾರೆ. ದಾವಣಗೆರೆ ನಗರದ ಸಿದ್ದಗಂಗಾ ಶಾಲೆಯ ಮಕ್ಕಳು ನ್ಯೂಸ್ ಪೇಪರ್ನಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಪಿಒಪಿ ಗಣೇಶನ ಮೂರ್ತಿಯ ಹಾವಳಿಯಲ್ಲಿ ಪರಿಸರ ಸ್ನೇಹಿ ಗಣೇಶಗಳ ನಿರ್ಮಾಣ ಕಡಿಮೆಯಾಗುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಪರಿಸರ ಸ್ನೇಹಿ ಗಣೇಶಗಳಿಗೆ ಒತ್ತು ನೀಡಿ ಎಂದು ಕರೆ ನೀಡಿದ ಬೆನ್ನಲ್ಲೇ ನಗರದ ಸಿದ್ದಗಂಗಾ ಶಾಲೆಯ ಮಕ್ಕಳು ಅನುಪಯುಕ್ತ ನ್ಯೂಸ್ […]
ಇ-ಎಫ್ಐಆರ್ಗೆ ಸಿಎಂ ಸಿದ್ದರಾಮಯ್ಯ ಚಾಲನೆ : ರಾಜ್ಯ ಪೊಲೀಸ್ ಇಲಾಖೆಯಿಂದ ವಿನೂತನ ಪ್ರಯತ್ನ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆ ಇದೇ ಮೊದಲ ಬಾರಿಗೆ ಇ-ಎಫ್‌ಐಆರ್ ವ್ಯವಸ್ಥೆಯನ್ನು ಪರಿಚಯಿಸಿದೆ. ಕಾಗದರಹಿತ ಹಾಗೂ ಪರಿಸರಸ್ನೇಹಿ ನೀತಿಗೆ ಒತ್ತು ನೀಡಲು ಇದೇ ಮೊದಲ ಬಾರಿಗೆ ಇ-ಎಫ್‌ಐಆರ್ ಸೌಲಭ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ಕೊಟ್ಟರು. ಇ-ಎಫ್‌ಐಅರ್ ದಾಖಲಿಸುವುದು ಹೇಗೆ?: ದಿನೇ ದಿನೇ ಪೊಲೀಸ್ ಇಲಾಖೆ ಸ್ಮಾರ್ಟ್ ಆಗುತ್ತಿದೆ. ಇ-ಎಫ್‌ಐಆರ್ ವ್ಯವಸ್ಥೆಯಿಂದ ಸಾರ್ವಜನಿಕರು ಸುಖಾಸುಮ್ಮನೆ ಪೊಲೀಸ್ ಠಾಣೆಗೆ ಅಲೆಯುವುದು ತಪ್ಪಲಿದೆ. ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ಜಾಲತಾಣ ಕರ್ನಾಟಕ ಪೊಲೀಸ್ ವೆಬ್ಸೈಟ್ಗೆ ಹೋಗಿ ಅಲ್ಲಿ ಸಿಟಿಜನ್ ಡೆಸ್ಕ್ ಮೇಲೆ […]
ಚೈತ್ರಾ ಬೆಂಬಲಕ್ಕೆ ಯಾರೂ ನಿಂತಿಲ್ಲ; ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಶೋಭಾ ಕರಂದ್ಲಾಜೆ

ಬೆಂಗಳೂರು: ಚೈತ್ರಾ ಕುಂದಾಪುರ ಬಹುಕೋಟಿ ವಂಚನೆ ಪ್ರಕರಣದಲ್ಲಿ ಪಕ್ಷದ ಯಾರೂ ಕೂಡಾ ಚೈತ್ರಾ ಬೆಂಬಲಕ್ಕೆ ನಿಂತಿಲ್ಲ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಆಗಲೇಬೇಕು. ನಾವು ಯಾರೂ ಕೂಡಾ ವರನ್ನು ರಕ್ಷಿಸುತ್ತಿಲ್ಲ ಅಥವಾ ಯಾರಿಗೂ ಶಿಫಾರಸು ಮಾಡುವ ಕೆಲಸ ಮಾಡುತ್ತಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮಲ್ಲಿ ಯಾರಿಗೂ ಚೈತ್ರಾ ಜೊತೆ ವೈಯಕ್ತಿಕ ಅಥವಾ ನೇರವಾದ ಯಾವುದೇ ಸಂಬಂಧ ಇಲ್ಲ, ಈ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ. ಕಾನೂನಿನ ಪ್ರಕಾರ ತನಿಖೆ […]
ನಿಪಾ ವೈರಸ್ ಪ್ರಕರಣ: ಕೋಝಿಕ್ಕೋಡ್ ನಲ್ಲಿ ಮೊಬೈಲ್ ಲ್ಯಾಬ್ ಸ್ಥಾಪನೆ; ಗಡಿ ಭಾಗದಲ್ಲಿಅಲರ್ಟ್ ಘೋಷಣೆ

ಕೋಝಿಕ್ಕೋಡ್: ಕೇರಳದಲ್ಲಿ ನಿಪಾ ವೈರಸ್ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಗುರುವಾರ ರಾಜ್ಯಾದ್ಯಂತ ತನ್ನ ಅಧಿಕಾರಿಗಳಿಗೆ ನಿಪಾ ವೈರಸ್ (NiV) ಕುರಿತು ಸಲಹೆಯನ್ನು ನೀಡಿದೆ. ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಐದು ಪಾಸಿಟಿವ್ ಪ್ರಕರಣಗಳು ಮತ್ತು ಎರಡು ಸಾವು ವರದಿಯಾಗಿದೆ. ಇದರೊಂದಿಗೆ ಕರ್ನಾಟಕ ಕೇರಳ ಗಡಿ ಜಿಲ್ಲೆಯಾದ ದಕ್ಷಿಣ ಕನ್ನಡ ಮತ್ತು ದೇಶಾದ್ಯಂತ ವೈರಸ್ ಬಗ್ಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕೋಝಿಕ್ಕೋಡ್ ನಲ್ಲಿ ಮೊಬೈಲ್ ಲ್ಯಾಬ್ ಸೌಲಭ್ಯ ಸ್ಥಾಪಿಸಲಾಗಿದೆ. ಇದರಿಂದ ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸದೆಯೇ […]