ಮಾರ್ಗದರ್ಶಿ ಚಿಟ್​ ಫಂಡ್ ನೂತನ ಶಾಖೆ​ ಆರಂಭ : ಹಾವೇರಿ

ಹಾವೇರಿ: ರಾಜ್ಯದಲ್ಲಿ ಇದು 23ನೇ ಶಾಖೆಯಾಗಿದ್ದು, ದೇಶಾದ್ಯಂತ 110ನೇ ಶಾಖೆಯಾಗಿದೆ. ಮಾರ್ಗದರ್ಶಿ ಚಿಟ್ಸ್ (ಕರ್ನಾಟಕ) ಪ್ರೈವೇಟ್​ ಲಿಮಿಟೆಡ್​ ನಿರ್ದೇಶಕ ಪಿ ಲಕ್ಷಣರಾವ್, ಈ ಶಾಖೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಚಂದಾದಾರರು ಭಾಗವಹಿಸಿದ್ದರು. ಕರ್ನಾಟಕದಲ್ಲಿ ಮಾರ್ಗದರ್ಶಿ ಚಿಟ್ಸ್​​​​​ನ ಮತ್ತೊಂದು ಶಾಖೆ ಉದ್ಘಾಟನೆಗೊಂಡಿದೆ. ಇನ್ನು, ಈ ಬಗ್ಗೆ ಮಾತನಾಡಿದ ಮಾರ್ಗದರ್ಶಿ ಚಿಟ್ಸ್ (ಕರ್ನಾಟಕ) ಪ್ರೈವೇಟ್​ ಲಿಮಿಟೆಡ್​ ನಿರ್ದೇಶಕ ಪಿ ಲಕ್ಷಣರಾವ್, ಇಂದು ಮಾರ್ಗದರ್ಶಿ ಚಿಟ್ಸ್ ಹಾವೇರಿಯಲ್ಲಿ ತನ್ನ ಹೊಸ ಶಾಖೆಯನ್ನು ಉದ್ಘಾಟಿಸಿದೆ ಎಂದು ಹೇಳಲು ನನಗೆ […]

ಖಡ್ಗಕ್ಕಿಂತ ಹರಿತದ ಲೇಖನಿಯಲ್ಲ, ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದ 20 ಅಡಿ ಉದ್ದದ ಲೇಖನಿ!!

ಸಾಗರ: ಸಾಗರದ ಆವಿನಹಳ್ಳಿಯ ಗಣೇಶ್ ಹಾರ್ಡ್​ವೇರ್ ಮತ್ತು ಜೈಗಣೇಶ್ ವುಡ್​ವರ್ಕ್ ಮಾಲೀಕ, ಕುಶಲಕರ್ಮಿ ಕೃಷ್ಣಮೂರ್ತಿ ಆಚಾರ್ ಅವರು ತಯಾರಿಸಿರುವ ಈ ಪೆನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಪ್ರವೇಶಗಿಟ್ಟಿಸಿದೆ. ಹತ್ತು ವರ್ಷಗಳ ಹಿಂದೆ ತಯಾರಿಸಿರುವ ಈ ಪೆನ್ನು 20 ಅಡಿ ಉದ್ದವಿದೆ. ಈ ಲೇಖನಿ ಭಾರತದಲ್ಲೇ ದಾಖಲೆ ಬರೆದಿದೆ. ಅರ್ಥಾತ್, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ತಯಾರಾದ ಈ 20 ಅಡಿ ಉದ್ದದ ಲೇಖನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಸ್ಥಾನ ಸಿಕ್ಕಿದೆ. ನವದೆಹಲಿಯಲ್ಲಿ […]

ನಿಂತಿದ್ದ 2 ಖಾಸಗಿ ಬಸ್​ಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲು :ಕಲಬುರಗಿ

ಕಲಬುರಗಿ: ಅಕ್ಕಪಕ್ಕದಲ್ಲಿ ನಿಂತಿದ್ದ ಎರಡು ಬಸ್​ಗಳು ಬೆಂಕಿಯ ಕೆನ್ನಾಲೆಗೆಯಿಂದ ಸಂಪೂರ್ಣ ಸುಟ್ಟು ಕರಕಲಾಗಿವೆ. ಹೀಗಾಗಿ ದಟ್ಟವಾದ ಹೊಗೆ ಆವರಿಸಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.ಖಾಸಗಿ ಕಂಪನಿಗೆ ಸೇರಿದ ಎರಡು ಸ್ಲೀಪರ್ ಬಸ್​ಗಳಿಗೆ ಬೆಂಕಿ ತಗುಲಿ ಧಗಧಗಿಸಿ ಸುಟ್ಟು ಕರಗಲಾದ ಘಟನೆ ಕಲಬುರಗಿ ನಗರದ ಹಾಗರಗಾ ರಸ್ತೆಯ ಮಹೆಫಿಲ್​ ಎ ಖಾಸ್ ಡಾಬಾದ ಬಳಿ ಶನಿವಾರ ನಡೆದಿದೆ.ಬೆಂಕಿಗೆ ಧಗಧಗನೆ […]

ಸಿಎಂ ಸಿದ್ದರಾಮಯ್ಯ: ನಾಡಹಬ್ಬದ ಮಹತ್ವ ಕಡಿಮೆಯಾಗಬಾರದೆಂದು ಸಾಂಪ್ರದಾಯಿಕ ದಸರಾ ಆಚರಣೆ

ಮೈಸೂರು: ಇಂದು ದಸರಾ ಮಹೋತ್ಸವಕ್ಕೆ ವಿದ್ಯುಕ್ತ​ ಚಾಲನೆ ನೀಡಲಾಗಿದೆ. ಬಳಿಕ ಸಿಎಂ ಸಿದ್ದರಾಮಯ್ಯ ಈ ಬಾರಿಯ ಸಾಂಪ್ರದಾಯಿಕ ದಸರಾ ಆಚರಣೆ ಕುರಿತು ಮಾತನಾಡಿದರು. ಬರಗಾಲದ ಹಿನ್ನೆಲೆಯಲ್ಲಿ ಈ ಬಾರಿ ಅದ್ಧೂರಿ ದಸರಾ ಆಚರಿಸುತ್ತಿಲ್ಲ. ಆದ್ರೆ ದಸರಾ ಮಹತ್ವಕ್ಕೆ ಯಾವುದೇ ಕುಂದು ಉಂಟಾಗದಂತೆ ಸಾಂಪ್ರದಾಯಿಕವಾಗಿ ನಾಡಹಬ್ಬವನ್ನು ಸರ್ಕಾರ ಆಚರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮುಂದುವರೆದು, ನಾವು ದಸರಾ ಹಬ್ಬವನ್ನು ನವರಾತ್ರಿ ಹಬ್ಬ ಎಂದು ಕರೆಯುತ್ತೇವೆ. 10ನೆಯ ದಿನ ಜಂಬೂ ಸವಾರಿ ನಡೆಯುತ್ತದೆ. ದಸರಾ ಹಬ್ಬ ವಿಜಯನಗರ ಸಾಮ್ರಾಜ್ಯದ […]

5 ವರ್ಷಗಳ ಬಳಿಕ ತಮಿಳುನಾಡಿಗೆ ಆಗಮಿಸಿದ ಸೋನಿಯಾ ಗಾಂಧಿ: ಡಿಎಂಕೆ ಸಮಾವೇಶ

ಚೆನ್ನೈ (ತಮಿಳುನಾಡು): ಶುಕ್ರವಾರ ಚೆನ್ನೈಗೆ ಆಗಮಿಸಿದ್ದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಚೆನ್ನೈ ವಿಮಾನ ನಿಲ್ದಾಣ ಸ್ವಾಗತಿಸಿದರು.ಮಹಿಳಾ ಹಕ್ಕುಗಳ ಸಮಾವೇಶಕ್ಕಾಗಿ ತಮಿಳುನಾಡಿಗೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಆಗಮಿಸಿದ್ದು ಸಿಎಂ ಸ್ಟಾಲಿನ್​ ಪುಸ್ತಕ ನೀಡಿ ಸ್ವಾಗತಿಸಿದರು. ಮಾಜಿ ಮುಖ್ಯಮಂತ್ರಿ ದಿವಂಗತ ಟಿ.ಎನ್.ಕರುಣಾನಿಧಿ ಅವರ ಶತಮಾನೋತ್ಸವದ ನಿಮಿತ್ತ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಮಹಿಳಾ ತಂಡದ ವತಿಯಿಂದ ಇಂದು ನಂದನಂ ವೈಎಂಸಿಎ ಮೈದಾನದಲ್ಲಿ ‘ಮಹಿಳಾ ಹಕ್ಕುಗಳ ಸಮಾವೇಶ’ […]