ತೆಲಂಗಾಣದ ಮಾಜಿ ಸಿಎಂ ಆಸ್ಪತ್ರೆಗೆ ದಾಖಲು
ಹೈದರಾಬಾದ್: ಬಿಆರ್‌ಎಸ್ ನಾಯಕ ಹಾಗೂ ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಕಲ್ವಕುಂಟ್ಲ ಚಂದ್ರಶೇಖರ್ ರಾವ್ ಅವರನ್ನು ಗುರುವಾರ ತಡರಾತ್ರಿ ಸೋಮಾಜಿಗುಡದಲ್ಲಿರುವ ಯಶೋದಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಿದ್ದಿದ್ದರಿಂದ ಅವರ ಸೊಂಟದ ಮೂಳೆ ಮುರಿತವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡುವ ಸಾಧ್ಯತೆಗಳಿವೆ. ವೈದ್ಯಕೀಯ ಪರೀಕ್ಷೆಗಳ ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕಾ ಬೇಡವೇ ಎಂಬ ಬಗ್ಗೆ ಡಾಕ್ಟರ್ಗಳು ನಿರ್ಧರಿಸಲಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆ ಎರ್ರವೆಲ್ಲಿಯ ತಮ್ಮ […]
ಪ್ರವಾಹ ಪರಿಸ್ಥಿತಿ ಸುಧಾರಿಸಿದ ಬೆನ್ನಲ್ಲೇ ತಮಿಳುನಾಡಿಗೆ ಭೂಕಂಪನದ ಬಿಸಿ : ಕರ್ನಾಟಕದಲ್ಲಿ ನಡುಗಿದ ಭೂಮಿ
ಚೆಂಗಲ್ಪಟ್ಟು (ತಮಿಳುನಾಡು): ಇತ್ತೀಚೆಗೆ ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ ವಾಯುಭಾರ ಕುಸಿತದ ಹಿನ್ನೆಲೆ ತಮಿಳುನಾಡಿನಲ್ಲಿ ಮಿಚೌಂಗ್ ಚಂಡಮಾರುತ ಅಬ್ಬರಿಸಿತ್ತು. ಹೌದು ಇಂದು ಬೆಳಗ್ಗೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಸುಮಾರು 10 ಕಿ.ಮೀ ಪ್ರದೇಶದಲ್ಲಿ ಇಂದು ಬೆಳಗ್ಗೆ 07: 39ರ ಸುಮಾರಿಗೆ 3.2 ತೀವ್ರತೆಯ ಭೂಕಂಪ ಸಂಭವಿಸಿದೆ.ತಮಿಳುನಾಡಿನ ಹಲವೆಡೆ ಭಾರಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಗಿತ್ತು.ಕರ್ನಾಟಕ ಮತ್ತು ತಮಿಳುನಾಡಿನ ಕೆಲವೆಡೆ ಭೂಕಂಪನ ಸಂಭವಿಸಿದೆ. ಅದರಲ್ಲೂ, ಚೆನ್ನೈನಂತಹ ಮಹಾನಗರದಲ್ಲಿ ಪ್ರವಾಹ […]
ಉತ್ತರ ಕನ್ನಡದಲ್ಲಿ ವಿನೂತನ ಕ್ರಮ ಜಾರಿ : ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಕ್ಯೂಆರ್ ಕೋಡ್
ಕಾರವಾರ(ಉತ್ತರ ಕನ್ನಡ): ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಲೋಕಸ್ಪಂದನ ಕ್ಯೂಆರ್ ಕೋಡ್ ಆಧಾರಿತ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಯ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸಾರ್ವಜನಿಕರು ತಮ್ಮ ಪ್ರತಿಕ್ರಿಯೆ, ಸಲಹೆಗಳನ್ನು ಮುಕ್ತವಾಗಿ ನೀಡಬಹುದು. ಎಲ್ಲಾ ಪೊಲೀಸ್ ಠಾಣೆಗಳ ಪ್ರವೇಶ ದ್ವಾರದಲ್ಲಿ ಕ್ಯೂಆರ್ ಕೋಡ್ ಪ್ರದರ್ಶಿಸಲಾಗಿದ್ದು, ಠಾಣೆಗೆ ಭೇಟಿ ನೀಡುವವರು ಪೊಲೀಸರ ಸೇವೆಯ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಬಹುದು. ಈ ಕ್ರಮವು ಪೊಲೀಸರಿಗೆ ಉತ್ತಮ ಸೇವೆ ನೀಡಲು ಮತ್ತು ಸಿಬ್ಬಂದಿಯ ದಕ್ಷತೆ ಸುಧಾರಿಸುವುದರೊಂದಿಗೆ ಪಾರದರ್ಶಕತೆಯನ್ನು ತರಲು ಸಹಾಯಕವಾಗಲಿದೆ. […]
ಭಾರತಿ ವಿಷ್ಣುವರ್ಧನ್ ಅವರಿಗೆ ಚೊಚ್ಚಲ ಕರ್ನಾಟಕ ನಂದಿ ಜೀವಮಾನ ಸಾಧನೆ ಪ್ರಶಸ್ತಿ
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ನಂದಿ ಚಲನಚಿತ್ರ ಪ್ರಶಸ್ತಿ ಪ್ರಾರಂಭವಾಗಿದ್ದು ಪ್ರಶಸಿ ಪ್ರದಾನ ಸಮಾರಂಭವು ಒರಿಯನ್ ಮಾಲ್‌ನಲ್ಲಿ ಬುಧವಾರದಂದು ನಡೆಯಿತು. ಕನ್ನಡದ್ದೇ ಆದ ಸ್ವಂತ ಪ್ರಶಸ್ತಿ ನೀಡುವ ವೇದಿಕೆ ಇದಾಗಿದ್ದು, ಈ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಬೆನ್ನು ತಟ್ಟುವ ಪ್ರಯತ್ನದ ಭಾಗವಾಗಿ ನಂದಿ ಪ್ರಶಸ್ತಿ ನೀಡುವ ಉದ್ದೇಶ ಹೊಂದಿದೆ. ಕರ್ನಾಟಕ ನಂದಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಹಿರಿಯ ನಟಿ, ಪದ್ಮಶ್ರೀ ಪುರಸ್ಕೃತೆ ಭಾರತಿ ವಿಷ್ಣುವರ್ಧನ್ ಅವರಿಗೆ ನೀಡಲಾಯಿತು. ಭಾರತಿ ಅವರ ಪರವಾಗಿ ಪ್ರಶಸ್ತಿಯನ್ನು ಅನಿರುದ್ದ […]
3.5 ತೀವ್ರತೆಯ ಭೂಕಂಪ ದಾಖಲು : ಆಸ್ಸಾಂ ಗುವಾಹಟಿ
ಗುವಾಹಟಿ (ಅಸ್ಸೋಂ): ಗುರುವಾರ ಬೆಳಗ್ಗೆ ಅಸ್ಸೋಂನ ಗುವಾಹಟಿಯಲ್ಲಿ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.ಆದರೆ, ಭೂಕಂಪದಿಂದ ಯಾವುದೇ ಪ್ರಾಣಹಾನಿ ಮತ್ತು ಆಸ್ತಿ ಹಾನಿಯಾಗಿರುವ ಕುರಿತು ಇನ್ನೂ ವರದಿಯಾಗಿಲ್ಲ.ಇಂದು (ಗುರುವಾರ) ಬೆಳಗ್ಗೆ 5.42ರ ಸುಮಾರಿಗೆ ಅಸ್ಸೋಂನ ಗುವಾಹಟಿಯಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಅದೇ ಜೂನ್ ತಿಂಗಳಲ್ಲಿ ಅಸ್ಸೋಂನಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿದ ಘಟನೆ ನಡೆದಿತ್ತು. ತೇಜ್ಪುರದ ಪಶ್ಚಿಮದಿಂದ 39 […]