ಕಾಸರಗೋಡು: ನಾಳೆ (ಆ.6) ಶಾಲಾ-ಕಾಲೇಜುಗಳಿಗೆ ರಜೆ; ರೆಡ್‌ ಅಲರ್ಟ್‌ ಘೋಷಣೆ

ಕಾಸರಗೋಡು: ಕೇಂದ್ರ ಹವಾಮಾನ ಇಲಾಖೆ ಆ.6 ರಂದು ಬುಧವಾರ ರೆಡ್‌ ಅಲರ್ಟ್‌ ಘೋಷಿಸಿದ ಹಿನ್ನೆಲೆಯಲ್ಲಿ ಮುಂಜಾಗ್ರತೆ ಅಂಗವಾಗಿ ಕಾಸರಗೋಡು ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಇಂಬುಶೇಖರ್‌ ರಜೆ ಪ್ರಕಟಿಸಿದ್ದಾರೆ.

‘ಕರಿಯ-2’ ಚಿತ್ರದ ನಟ ಸಂತೋಷ್ ಬಾಲರಾಜ್ ನಿಧನ.

ಬೆಂಗಳೂರು: ಚಂದನವನದ ಯುವ ನಟ ಸಂತೋಷ್ ಬಾಲರಾಜ್ (34) ನಿಧನ ಹೊಂದಿದ್ದಾರೆ. ಮಂಗಳವಾರ (ಆ.5) ಖಾಸಗಿ ಆಸ್ಪತ್ರೆಯಲ್ಲಿ ಸಂತೋಷ್‌ 5 (Santhosh Balaraj) ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಬೆಳಗ್ಗೆ 9.45ರ ಸುಮಾರಿಗೆ ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ. ‘ಕರಿಯ’ ಸಿನಿಮಾ ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರನಾಗಿದ್ದ ಅವರು ಕಳೆದ ಕೆಲ ಸಮಯದಿಂದ ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದರು. ಜಾಂಡೀಸ್ ಮೈಗೆಲ್ಲ ಹರಡಿದ ಕಾರಣ ಅವರ ಪರಿಸ್ಥಿತಿ ಗಂಭೀರ ಆಗಿತ್ತು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ […]

“ಸ್ವರ್ಗದಲ್ಲಿ ನಾನು ಖುಷಿಯಾಗಿದ್ದೇನೆ, ಅಳಬೇಡಿ” ಡೆತ್ ನೋಟ್ ಬರೆದಿಟ್ಟು 7ನೇ ಕ್ಲಾಸ್ ವಿದ್ಯಾರ್ಥಿ ಆತ್ಮಹತ್ಯೆ.!

ಆತ್ಮಹತ್ಯೆಗೆ ಶರಣಾದ ಬಾಲಕ 7ನೇ ತರಗತಿ ವಿದ್ಯಾರ್ಥಿ ಗಾಂಧಾರ್(13). ಮೃತದೇಹವನ್ನ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಬೆಂಗಳೂರಿನ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಂಧಾರ್​ನ ತಂದೆ ಮ್ಯೂಸಿಕ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಸವಿತಾ ಖ್ಯಾತ ಜಾನಪದ ಗಾಯಕಿಯಾಗಿದ್ದಾರೆ. ಸವಿತಾ ಅವರು ಕಳೆದ ಶುಕ್ರವಾರ ಜಾನಪದ ಕಾರ್ಯಕ್ರಮದ ಹಿನ್ನಲೆ ಆಸ್ಟ್ರೇಲಿಯಾಗೆ ಹೋಗಿದ್ದರು. ಇದೀಗ ತಾಯಿ ವಾಪಸ್​​ ಆಗಬೇಕಿದೆ. ಇನ್ನೂ ತಾಯಿ ಬೆಂಗಳೂರಿಗೆ ಬರುವ ತನಕ ಮರಣೋತ್ತರ ಪರೀಕ್ಷೆ ನಡೆಸದೇ ಇರುವಂತೆ ತೀರ್ಮಾನ ಕೈಗೊಳ್ಳಲಾಗಿದೆ. […]

ಭಾರತದ ಮೇಲೆ ಟ್ರಂಪ್ ಶೇ.25 ಸುಂಕ; ವಿವಿಧ ದೇಶಗಳಿಗೆ ವಿಧಿಸಿದ ಸುಂಕಗಳ ಪಟ್ಟಿ ಹೀಗಿದೆ.!

ಸುಮಾರು 70ಕ್ಕೂ ಹೆಚ್ಚು ದೇಶಗಳ ಮೇಲೆ ಶೇ.10 ರಿಂದ ಶೇ.41 ರವರೆಗಿನ ಪಾರಸ್ಪರಿಕ ತೆರಿಗೆ (ರೆಸಿಪ್ರೋಕಲ್ ಟ್ಯಾಕ್ಸ್) ಗಳನ್ನು ವಿಧಿಸುವ ಹೊಸ ಕಾರ್ಯಕಾರಿ ಆದೇಶಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ (ಜುಲೈ 31) ಸಹಿ ಹಾಕಿದರು. ಇದರಲ್ಲಿ ಭಾರತೀಯ ಆಮದುಗಳು 25% ಸುಂಕವನ್ನು ಎದುರಿಸಬೇಕಾಗುತ್ತದೆ. ಅಕ್ರಮ ಮಾದಕವಸ್ತು ಬಿಕ್ಕಟ್ಟಿನ ಮೇಲೆ ಕ್ರಮ ಕೈಗೊಳ್ಳಲು ಕೆನಡಾ ಸಂಪೂರ್ಣ ವಿಫಲವಾಗಿದೆ ಮತ್ತು ಯುನೈಟೆಡ್ ಸ್ಟೇಟ್ಸ್ ವಿರುದ್ಧ ಪ್ರತೀಕಾರವಾಗಿ ಅಲ್ಲಿನ ಆಡಳಿತವು ನಡೆದುಕೊಳ್ಳುತ್ತಿರುವುದರಿಂದ ಅದಕ್ಕೆ ಪ್ರತಿಯಾಗಿ ಕೆನಡಾದ ಮೇಲಿನ ಸುಂಕವನ್ನು […]

ಧರ್ಮಸ್ಥಳ ಪ್ರಕರಣ: ಮಂಗಳೂರಿನಲ್ಲಿ ಎಸ್‌ಐಟಿ ಕಚೇರಿ ಕಾರ್ಯಾರಂಭ: ಮಾಹಿತಿ ನೀಡುವವರಿಗೆ ಸಹಾಯವಾಣಿ

ಮಂಗಳೂರು: ರಾಷ್ಟ್ರಾದ್ಯಂತ ಸುದ್ದಿಯಲ್ಲಿರುವ ಧರ್ಮಸ್ಥಳದಲ್ಲಿ ಹೆಣ ಹೂಳಲಾಗಿದೆ ಎನ್ನಲಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ ಐಟಿ ತಂಡ  ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 39/2025ಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರದಲ್ಲಿ ಕಚೇರಿ ಆರಂಭಿಸಿದೆ. ಈ ಪ್ರಕರಣದ ಬಗ್ಗೆ ಎಸ್‌ಐಟಿಯನ್ನು ಸಂಪರ್ಕಿಸಲು ಅಥವಾ ಮಾಹಿತಿ ನೀಡಲು ಸಹಾಯವಾಣಿಯನ್ನೂ ಆರಂಭಿಸಲಾಗಿದೆ. ಎಸ್‌ಐಟಿ ಕಚೇರಿ ವಿಳಾಸ: ನಿರೀಕ್ಷಣಾ ಮಂದಿರ, ಮಲ್ಲಿಕಟ್ಟೆ, ಕದ್ರಿ, ಮಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆ (ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ). ದೂರವಾಣಿ ಸಂಖ್ಯೆ: 0824–2005301 […]