ಕಡೆಕಾರು ರಂಜಿತ ಕೊಲೆ ಪ್ರಕರಣ: ಆರೋಪಿಗೆ ಜೀವಿತಾವಧಿ ಜೈಲು ಶಿಕ್ಷೆ

ಉಡುಪಿ: ಕಳೆದ ಏಳು ವರ್ಷಗಳ ಹಿಂದೆ ಕಡೆಕಾರು ಗ್ರಾಮದ ಪಟೇಲ್ ತೋಟ ಎಂಬಲ್ಲಿ ನಡೆದ ರಂಜಿತ (19) ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಇಂದು ಜೀವಿತಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಪಟೇಲ್ ತೋಟದ ನಿವಾಸಿ ಯೋಗೀಶ್ (32) ಜೀವಿತಾವಧಿ ಶಿಕ್ಷೆಗೆ ಗುರಿಯಾದ ಆರೋಪಿ. ಘಟನೆಯ ವಿವರ: ಆರೋಪಿ ಯೋಗೀಶ್ ತನ್ನ ಮನೆಯ ಹತ್ತಿರದ ನಿವಾಸಿಯಾಗಿದ್ದ ಸುಮತಿ ಎಂಬುವವರ ಮಗಳು 19 ವರ್ಷ ಪ್ರಾಯದ ರಂಜಿತಾಳನ್ನು ದಾರಿ ಮಧ್ಯೆ […]

ಊರಿಗೆ ಮರಳುತ್ತಿದ್ದ ಉಡುಪಿ ಶಿರ್ವಾದ ಮಹಿಳೆ ಕುವೈಟ್ ನಲ್ಲಿ ಬಂಧನ

ಉಡುಪಿ: ತಾಯ್ನಾಡಿಗೆ ಮರಳುತ್ತಿದ್ದ ಉಡುಪಿ ಶಿರ್ವ ಮೂಲದ ಗಿರಿಜಾ(63) ಎಂಬವರನ್ನು ಕುವೈಟ್ ಸಿಐಡಿ ಪೊಲೀಸರು ವಿಮಾನ ನಿಲ್ದಾಣದಲ್ಲಿ ಸೋಮವಾರ ವಶಕ್ಕೆ ಪಡೆದಿದ್ದಾರೆ. ಗಿರಿಜಾ ಅವರು ಕಳೆದ 28 ವರ್ಷಗಳಿಂದ ಕುವೈಟ್ ನಲ್ಲಿ ಮನೆಗೆಲಸ ಮಾಡುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಎರಡ್ಮೂರು ತಿಂಗಳಿನಿಂದ ಕೆಲಸ ವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೆ ಅವರು ಅನಾರೋಗ್ಯಕ್ಕೂ ತುತ್ತಾಗಿದ್ದರು. ಇದನ್ನು ತಿಳಿದ ಅವರ ಪುತ್ರಿ‌ ಊರಿಗೆ ಗಿರಿಜಾಗೆ ತಿಳಿಸಿದ್ದರು. ಅದರಂತೆ ಊರಿಗೆ ಬರಲು ನಿರ್ಧರಿಸಿದ ಗಿರಿಜಾ ಅವರು, ಸೆ.13ರಂದು ಇಂಡಿಗೋ ವಿಮಾನದ ಟಿಕೆಟ್‌ […]

ಡ್ರಗ್ಸ್ ಪ್ರಕರಣ: ನಟಿ ರಾಗಿಣಿ ಸಹಿತ ಐವರು ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ನಂಟಿ ಆರೋಪದಡಿ ಬಂಧಿಸಲಾಗಿರುವ ನಟಿ ರಾಗಿಣಿ ದ್ವಿವೇದಿ ಸಹಿತ ಐವರು ಆರೋಪಿಗಳಿಗೆ ನಗರದ 1ನೇ ಎಸಿಎಂಎಂ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ನಡಿ ಸಂಜನಾಗೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಡ್ರಗ್ಸ್ ಪ್ರಕರಣ ಸಂಬಂಧ ಆರೋಪಿಗಳನ್ನು ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಅದರ ಅವಧಿ ಅಂತ್ಯಗೊಂಡಿದ್ದರಿಂದ ಇಂದು ಆರೋಪಿಗಳನ್ನು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಆರೋಪಿಗಳಾದ ರಾಗಿಣಿ, ಪ್ರಶಾಂತ್ […]

ಧಾರವಾಡ ಜಿಪಂ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣ: ಸಿಬಿಐನಿಂದ ಕಾಂಗ್ರೆಸ್ ಮುಖಂಡನ ಸಹೋದರನಿಗೆ ನೋಟಿಸ್

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ತನಿಖೆ ನಡೆಸುತ್ತಿರುವ ಸಿಬಿಐ ಇದೀಗ ವಿಚಾರಣೆಗೆ ಹಾಜರಾಗುವಂತೆ ಕೋರಿ ಕಾಂಗ್ರೆಸ್ ಮುಖಂಡನ ಸಹೋದರನಿಗೆ ನೋಟಿಸ್ ಜಾರಿ ಮಾಡಿದೆ. ಧಾರವಾಡದ ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಅವರ ಸಹೋದರ ವಿಜಯ್ ಅವರಿಗೆ ಸಿಬಿಐ ನೋಟಿಸ್ ನೀಡಿದ್ದು, ಅದರಂತೆ ನೋಟಿಸ್ ಪಡೆದಿರುವ ವಿಜಯ್, ನಗರದಲ್ಲಿರುವ ಸಿಬಿಐ ಕಚೇರಿಗೆ ವಿಚಾರಣೆಗಾಗಿ ಸೋಮವಾರ ಬೆಳಿಗ್ಗೆ ಹಾಜರಾಗಿದ್ದಾರೆ. ಸಿಬಿಐ ಅಧಿಕಾರಿಗಳು ವಿಜಯ್ ವಿಚಾರಣೆ ನಡೆಸುತ್ತಿದ್ದಾರೆ. ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿರುವ […]

ಸ್ಟಾರ್ ನಟ ಕಮ್ ನಿರ್ದೇಶಕನೊಂದಿಗೆ ನಟಿ ಸಂಜನಾಗೆ ನಂಟು: ಸಿಸಿಬಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು: ಡ್ರಗ್ಸ್ ದಂಧೆಯ ನಂಟಿನ ಆರೋಪದಡಿ ಸಿಸಿಬಿಯಿಂದ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಗಲ್ರಾನಿಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ, ಬಹುಭಾಷಾ ನಟನೊಂದಿಗೆ ನಂಟು ಇತ್ತು ಎಂಬ ವಿಚಾರ ಈಗ ಸಿಸಿಬಿ ತನಿಖೆಯಿಂದ ಹೊರಬಿದ್ದಿದೆ. ಪೊಲೀಸರು ಸಿದ್ಧಪಡಿಸಿರುವ ಬಂಧಿತ ನಟಿಯರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಲಿಸ್ಟ್ ನಲ್ಲಿ ಈ ಸ್ಟಾರ್ ನಿರ್ದೇಶಕನ ಹೆಸರಿದೆ. ಈ ಸ್ಟಾರ್ ನಿರ್ದೇಶಕ ಸಂಜನಾಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆಕೆಗೆ ಹೆಚ್ಚು ಆಪ್ತನಾಗಿದ್ದ. ಅಲ್ಲದೆ, ಆಕೆಗೆ ಸ್ಯಾಂಡಲ್ ವುಡ್ ನಲ್ಲಿ ಗಾಢ್ ಫಾದರ್ ನಂತಿದ್ದ. […]