ಎಸೆಸ್ಸೆಲ್ಸಿ ಫಲಿತಾಂಶ: ಒಬ್ಬ ವಿದ್ಯಾರ್ಥಿ ಹೊರತು ಪಡಿಸಿ ಎಲ್ಲರೂ ಪಾಸ್

ಬೆಂಗಳೂರು: ಕೋವಿಡ್ ಕಾರಣದಿಂದ ಈ ಸಲ ವಿಶೇಷವಾಗಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಕಳೆದ ಮೂರು ವಾರಗಳ ಹಿಂದೆ ನಡೆದ ಸರಳ ಮಾದರಿಯ ಪರೀಕ್ಷೆ ಫಲಿತಾಂಶವನ್ನು ಇಂದು ನೂತನ ಶಿಕ್ಷಣ ಸಚಿವರಾಗಿರುವ ಬಿಸಿ ನಾಗೇಶ್ ಪ್ರಕಟಿಸಿದರು. ಕೋವಿಡ್ ಸಮಯದಲ್ಲಿ ಪರೀಕ್ಷೆ ಬರೆದ ಎಲ್ಲರನ್ನೂ ಪಾಸ್ ಮಾಡುವುದಾಗಿ ಮೊದಲೇ ಈ ಹಿಂದಿನ ಶಿಕ್ಷಣ ಸಚಿವರು ಭರವಸೆ ನೀಡಿದ್ದ ಅವರು, ಅದರಂತೆ, ಒಬ್ಬ ವಿದ್ಯಾರ್ಥಿ ಹೊರತು ಪಡಿಸಿ ಎಲ್ಲರನ್ನು ಪಾಸ್ ಮಾಡಲಾಗಿದೆ ಎಂದರು. ಶೇ. 99.9 ಪಾಸ್ ಆಗಿದ್ದಾರೆ. […]
ಶಾಲಾರಂಭ ಸ್ವಲ್ಪ ತಡವಾಗಬಹುದು, ಸುಳಿವು ನೀಡಿದ ಶಿಕ್ಷಣ ಸಚಿವ

ತುಮಕೂರು: 9,10,11,12ನೇ ಭೌತಿಕ ತರಗತಿಗಳ ಆರಂಭ ತಡವಾಗಬಹುದು ಎಂಬ ಸುಳಿವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ಸುರೇಶ್ ಅವರು ನೀಡಿದ್ದಾರೆ. ಆಗಸ್ಟ್ 23 ರಿಂದ 9-12ನೇ ತರಗತಿಗಳ ಭೌತಿಕ ಆರಂಭ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಇದು ತಾತ್ಕಾಲಿಕ ದಿನಾಂಕವಾಗಿದ್ದು, ಸಿದ್ಧತೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ನಿಖರವಾದ ವೇಳಾಪಟ್ಟಿಯನ್ನು ಸಿದ್ಧಪಡಿಸಿ ತಿಳಿಸಲಾಗುತ್ತದೆ ಎಂದು ಹೇಳಿದ್ದಾರೆ. ಕೋವಿಡ್ ಹಾಗೂ ಪ್ರವಾಹ ಪರಿಸ್ಥಿತಿ ನಿಭಾಯಿಸುವುದರಲ್ಲಿ ನಾನು ಕಾರ್ಯನಿರತನಾಗಿದ್ದೆ. ಶೀಘ್ರದಲ್ಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. […]
ಕಾರ್ಗಿಲ್ ಯುದ್ಧದ ಆ ರೋಮಾಂಚಕ ಕ್ಷಣಗಳನ್ನು ಬಿಚ್ಚಿಡುತ್ತಾರೆ ಉಡುಪಿ ಜಿಲ್ಲೆಯ ಈ ಹೆಮ್ಮೆಯ ಯೋಧ

ಭಾರತೀಯ ಸೈನ್ಯದ ಬಗ್ಗೆ ಕೇಳುವಾಗ ರೊಮಾಂಚನ, ಕೌತುಕಗಳು ಮೂಡುತ್ತದೆ. ಕಾಶ್ಮೀರ ಕಣಿವೆಯಲ್ಲಿ ಪ್ರತಿದಾಳಿ ನಡೆಸಲು ಸಜ್ಜಾಗುವ ಭಾರತೀಯ ಪಡೆಯ ಬಗ್ಗೆ ಕೇಳುವಾಗಲೆ ಮೈ ಜುಮ್ಮೆನ್ನುತ್ತದೆ ಅಲ್ವಾ? ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಯೋಧರೊಬ್ಬರ ಸಾಹಸ ಯಶೋಗಾಥೆ ಗೆ ಇಂದಿನ ಈ ಕಾರ್ಗಿಲ್ ವಿಜಯ್ ದಿನ ಸಾಕ್ಷಿಯಾಗಿದೆ. ಅವರ ಹೆಸರು ರವೀಂದ್ರ ಕಾಮತ್. ಎಸ್ ಅನಂತ ಕಾಮತ್ ಮತ್ತು ಶ್ರೀಮತಿ ಪದ್ಮಾವತಿ ಕಾಮತ್ ಅವರ ಮಗನಾಗಿ ಜನಿಸಿದ ರವೀಂದ್ರ ಕಾಮತ್ ಶಿಕ್ಷಣ ಮುಗಿಸಿದ ಬಳಿಕ 1996 […]
ವಿದ್ಯಾರ್ಥಿಗಳೇ ದ್ವಿತೀಯ ಪಿಯುಸಿ ಫಲಿತಾಂಶ ತೃಪ್ತಿಕರ ಅನ್ನಿಸಿಲ್ಲವೇ: ಹಾಗಿದ್ರೆ ಬೇಗ ಅರ್ಜಿ ಸಲ್ಲಿಸಿ

ಬೆಂಗಳೂರು: ಎಸ್ಎಸ್ಎಲ್’ಸಿ ಮತ್ತು ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ ಪ್ರಕಟಿಸಿರುವ ದ್ವಿತೀಯ ಪಿಯುಸಿ ಫಲಿತಾಂಶ ತೃಪ್ತಿಕರವಾಗಿಲ್ಲದಿದ್ದಲ್ಲಿ ವಿದ್ಯಾರ್ಥಿಗಳು ಜು.30ರೊಳಗೆ ಅರ್ಜಿ ಸಲ್ಲಿಸಹುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಶಾಲೆಯ ಪ್ರಾಂಶುಪಾಲರನ್ನು ಭೇಟಿಯಾಗಿ ಅರ್ಜಿ ಸಲ್ಲಿಸಬರಹುದು. ಫಲಿತಾಂಶ ರದ್ದುಪಡಿಸಿಕೊಂಡ ವಿದ್ಯಾರ್ಥಿಗಳಿಗೆ ಆಗಸ್ಟ್ ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಸಲ್ಲಿಕೆಯಾದ ಅರ್ಜಿಗಳನ್ನು ಪ್ರಾಂಶುಪಾಲರು ಸ್ಟೂಟೆಂಟ್ಸ್ ಅಜಿವ್ಮೆಂಟ್ ಟ್ರ್ಯಾಕಿಂಗ್ ಪೋರ್ಟಲ್ ನಲ್ಲಿ ದಾಖಲಿಸಲು ಜು.30 ಕೊನೆಯ ದಿನವಾಗಿದೆ. ಜು.31ರೊಳಗೆ ಅರ್ಜಿಗಳನ್ನು […]
ಪದವಿ ಕಾಲೇಜು ಆರಂಭಕ್ಕೆ ಸದ್ಯಕ್ಕಿಲ್ಲ ಹಸಿರು ನಿಶಾನೆ!

ಬೆಂಗಳೂರು: ರಾಜ್ಯದಲ್ಲಿ ಪದವಿ ಕಾಲೇಜುಗಳ ತರಗತಿಗಳ ಆರಂಭದ ಬಗ್ಗೆ ಸದ್ಯ ಯಾವುದೇ ತೀರ್ಮಾನ ವಾಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸದ್ಯಕ್ಕೆ ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದು ಮಾತ್ರ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದರು. ಅದರ ಹೊರತಾಗಿ ಕಾಲೇಜುಗಳನ್ನು ಆರಂಭಿಸುವುದಲ್ಲ. ಕೊರೋನ ಇನ್ನೂ ಪೂರ್ಣವಾಗಿ ನಿವಾರಣೆ ಆಗದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ ಎಂದರು. ಇನ್ನು ರಾಜ್ಯದಲ್ಲಿ ಶೇ 65.14ರಷ್ಟು ಕಾಲೇಜು ವಿದ್ಯಾರ್ಥಿ, […]