“ಕರ್ನಾಟಕ ಉದ್ಯೋಗ ನೀತಿ 2022-25”: ಉದ್ಯೋಗಾವಕಾಶ ಹೆಚ್ಚಳಕ್ಕಾಗಿ ರಾಜ್ಯ ಸಚಿವ ಸಂಪುಟದ ಅನುಮೋದನೆ

ಬೆಂಗಳೂರು: ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ “ಕರ್ನಾಟಕ ಉದ್ಯೋಗ ನೀತಿ 2022-25” ಅನ್ನು ಅನುಮೋದಿಸಿದೆ ಮತ್ತು ಹೆಚ್ಚಿನ ಉದ್ಯೋಗಗಳನ್ನು ಒದಗಿಸಲು ರಾಜ್ಯದಲ್ಲಿ ಹೊಸ ಘಟಕಗಳನ್ನು ವಿಸ್ತರಿಸಲು ಅಥವಾ ಸ್ಥಾಪಿಸಲು ಕೈಗಾರಿಕೆಗಳಿಗೆ ಸೂಚನೆ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವತ್ತ ಅವರು ಗಮನಹರಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಸಭೆಯ ನಂತರ ಕಾನೂನು ಮತ್ತು […]

ನೆಹರು-ಗಾಂಧಿ ಹೆಸರಲ್ಲಿ 3-4 ತಲೆಮಾರುಗಳಿಗಾಗುವಷ್ಟು ಹಣ ಸಂಪಾದನೆ ಮಾಡಿದ್ದೇವೆ: ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್

ಬೆಂಗಳೂರು: ಪಂಡಿತ್ ನೆಹರು, ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಹೆಸರಿನಲ್ಲಿ ನಾವು 3-4 ತಲೆಮಾರುಗಳಿಗಾಗುವಷ್ಟು ಸಂಪಾದಿಸಿದ್ದೇವೆ. ಈಗ ತ್ಯಾಗ ಮಾಡುವ ಸಮಯ ಬಂದಿದೆ. ಆ ಸಾಲವನ್ನು ತೀರಿಸಲು ನಾವು ಸಿದ್ಧರಿಲ್ಲದಿದ್ದರೆ, ನಾವು ತಿನ್ನುವ ಆಹಾರದಲ್ಲಿ ಹುಳುಗಳು ಬೀಳುತ್ತವೆ ಎಂದು ನಾನು ಹೆದರುತ್ತೇನೆ ಎಂದು ಸೋನಿಯಾ ಗಾಂಧಿ ವಿರುದ್ಧದ ಇಡಿ ಪ್ರಕರಣವನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಕಾಂಗ್ರೆಸ್ ಶಾಸಕ ಕೆ.ಆರ್. ರಮೇಶ್ ಕುಮಾರ್ ಹೇಳಿದ್ದಾರೆ. ಗುರುವಾರದಂದು ಸೋನಿಯಾ ಗಾಂಧಿ ಇಡಿ ಮುಂದೆ ಹಾಜರಾಗಿದ್ದಾರೆ. ಸೋನಿಯಾ ಗಾಂಧಿ […]

ಸಿ.ಬಿ.ಎಸ್.ಸಿ ಫಲಿತಾಂಶ: ಬೆಂಗಳೂರಿಗೆ ಎರಡನೇ ಸ್ಥಾನ, 100% ಫಲಿತಾಂಶ ದಾಖಲಿಸಿದ ಮಂಗಳಮುಖಿ ವಿದ್ಯಾರ್ಥಿಗಳು

ಬೆಂಗಳೂರು ಪ್ರದೇಶವು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿ.ಬಿ.ಎಸ್.ಸಿ) XII ತರಗತಿಯ ಫಲಿತಾಂಶಗಳಲ್ಲಿ 98.16% ರಷ್ಟು ಪ್ರಾದೇಶಿಕವಾರು ಉತ್ತೀರ್ಣತೆಯೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಸಿ.ಬಿ.ಎಸ್.ಸಿ ಬೋರ್ಡ್ ಶುಕ್ರವಾರ 12 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದ್ದು ಒಟ್ಟಾರೆ ಶೇಕಡಾ 92.71 ತೇರ್ಗಡೆ ಫಲಿತಾಂಶ ಬಂದಿದೆ. ತಿರುವನಂತಪುರ ಪ್ರದೇಶವು 98.83% ಫಲಿತಾಂಶದೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 97.79% ಫಲಿತಾಂಶದೊಂದಿಗೆ ಬೆಂಗಳೂರು ಪ್ರದೇಶವು ಎರಡನೇ ಸ್ಥಾನದಲ್ಲಿದ್ದರೆ, ಚೆನ್ನೈ ಪ್ರದೇಶವು ಮೂರನೇ ಸ್ಥಾನದಲ್ಲಿದೆ. ಶೇ.94.54ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರೆ, ಶೇ.91.25ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. […]

ಮರಿಗಾಗಿ ಕ್ಷೇತ್ರ ತ್ಯಜಿಸಿದ ರಾಜಾಹುಲಿ: ಪುತ್ರ ವಿಜಯೇಂದ್ರನಿಗಾಗಿ ಶಿಕಾರಿಪುರ ಬಿಟ್ಟುಕೊಟ್ಟ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ

ಶಿವಮೊಗ್ಗ: ಯಡಿಯೂರಪ್ಪನವರ ಚುನಾವಣಾ ಕ್ಷೇತ್ರವಾದ ಶಿಕಾರಿಪುರವನ್ನು ತನ್ನ ಮಗ ಬಿ.ವೈ ವಿಜಯೇಂದ್ರನಿಗಾಗಿ ಬಿಟ್ಟು ಕೊಟ್ಟಿದ್ದಾರೆ ಎಂದು ವರದಿಯಾಗಿದೆ. ಇನ್ನು ಮುಂದೆ ಈ ಕ್ಷೇತ್ರದಿಂದ ಬಿ.ವೈ ವಿಜಯೇಂದ್ರ ಅಖಾಡಕ್ಕಿಳಿಯಲಿದ್ದಾರೆ. ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ವೈ ಈ ಘೋಷಣೆ ಮಾಡಿದ್ದಾರೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಹಳೆ ಮೈಸೂರು ಭಾಗದಲ್ಲಿ ಬೆಂಬಲವಿದ್ದರೂ,  ತಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವಾದ್ದರಿಂದ ಕ್ಷೇತವನ್ನು ಬಿಟ್ಟುಕೊಟ್ಟಿದ್ದೇನೆ ಎಂದಿದ್ದಾರೆ. ಮಗನನ್ನು ತನಗಿಂತಲೂ ಹೆಚ್ಚಿನ ಅಂತರದಲ್ಲಿ ಗೆಲ್ಲಿಸುವಂತೆ ಬಿ.ಎಸ್.ವೈ ಮನವಿ ಮಾಡಿದ್ದಾರೆ. […]

ಸೂಕ್ತ ಕಾರಣವಿಲ್ಲದೆ ವಾಹನ ತಪಾಸಣೆ ನಡೆಸುವಂತಿಲ್ಲ: ಆದೇಶ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯವೆಂದ ಡಿಜಿಪಿ ಪ್ರವೀಣ್ ಸೂದ್

ಬೆಂಗಳೂರು: ದಾಖಲೆಗಳ ಪರಿಶೀಲನೆಗಾಗಿ ವಾಹನಗಳನ್ನು ಸುಖಾಸುಮ್ಮನೆ ತಡೆದು ನಿಲ್ಲಿಸದಂತೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತೊಮ್ಮೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಈ ಆದೇಶ ಅನ್ವಯ. ಡ್ರಿಂಕ್ ಆ್ಯಂಡ್ ಡ್ರೈವ್ ಮತ್ತು ಕಣ್ಣಿಗೆ ಕಾಣುವಂತಹ ಸಂಚಾರ ನಿಯಮ ಉಲ್ಲಂಘನೆ, ಅಪರಾಧ ಕಂಡುಬಂದ ಹೊರತಾಗಿ ಕೇವಲ ದಾಖಲೆಗಳ ಪರಿಶೀಲನೆಗಾಗಿ ಅನಗತ್ಯವಾಗಿ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸುವಂತಿಲ್ಲ. ಈ ಸೂಚನೆಗಳನ್ನು ಕೆಳ ಹಂತಕ್ಕೆ ತಲುಪಿಸಿ ಮತ್ತು ಅದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಿ  ಎಂದು ಸೂದ್ ಎಚ್ಚರಿಸಿದ್ದಾರೆ. […]