ಮುಂಬೈ ಮಂಗಳೂರು ಎರಡನೇ ದೈನಂದಿನ ವಿಮಾನ ಹಾರಾಟ ಆರಂಭಿಸಿದ ಏರ್ ಇಂಡಿಯಾ

ಮಂಗಳೂರು: ಏರ್​ ಇಂಡಿಯಾದ ಎರಡನೇ ಮುಂಬೈ ಮಂಗಳೂರು ದೈನಂದಿನ ವಿಮಾನ ಹಾರಾಟ ಆರಂಭವಾಗಿದೆ. ಏರ್ ಇಂಡಿಯಾ ವಿಮಾನ‌ಯಾನ ಸಂಸ್ಥೆಯು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಎರಡನೇ ದೈನಂದಿನ ವಿಮಾನ ಯಾನವನ್ನು ಆರಂಭಿಸಿದೆ. ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ ಜೂನ್ 10ರಿಂದ ಏರ್ ಇಂಡಿಯಾ ತನ್ನ ಎರಡನೇ ದೈನಂದಿನ ವಿಮಾನಯಾನ ಸೇವೆಯನ್ನು ಆರಂಭಿಸಿದೆ. ಮೇ 22 ರಂದು ಇಂಡಿಗೊ ಮುಂಬೈ-ಮಂಗಳೂರು ವಲಯದಲ್ಲಿ ಮೂರನೇ ದೈನಂದಿನ ವಿಮಾನವನ್ನು ಪ್ರಾರಂಭಿಸಿದ ನಂತರ ಈ ವಿಮಾನ ಸಂಚಾರ ಆರಂಭವಾಗಿದೆ. ಇದರೊಂದಿಗೆ, ಎರಡು […]

ಬೆಂಗಳೂರಿನ ಸ್ಟಾರ್ಟ್ ಕಂಪನಿಯಿಂದ ಅಭಿವೃದ್ದಿಪಡಿಸಲಾದ ಭಾರತದ ಮೊದಲ ಸಂಪೂರ್ಣ ಅಟೋನಾಮಸ್ ಕಾರು zPod

ಬೆಂಗಳೂರು: ಭಾರತದ ಪ್ರರ್ಥಮ ಅಟೋನಾಮಸ್ ಕಾರು ಎನ್ನುವ ಹೆಗ್ಗಳಿಕೆಗೆ ಪಾತ್ರವಾದ zPod ಅನ್ನು 2021 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ಮೈನಸ್ ಝೀರೋ ಸ್ಟಾರ್ಟ್ ಅಪ್ ಕಂಪನಿ ಅಭಿವೃದ್ಧಿಪಡಿಸಿದ್ದು, ಇದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಕೇಂದ್ರೀಕರಿಸಿದೆ. ತೆರೆದ ಬದಿಗಳೊಂದಿಗೆ ಕಾಂಪ್ಯಾಕ್ಟ್, ಕೋನೀಯ ಯಂತ್ರದೊಂದಿಗೆ ಸಂಪೂರ್ಣ ಸ್ವಾಯತ್ತ ವಿದ್ಯುತ್ ವಾಹನವನ್ನು ಯೂಟ್ಯೂಬ್‌ನಲ್ಲಿ ಮೈನಸ್ ಝೀರೋ ಲೈವ್‌ಸ್ಟ್ರೀಮ್ ಮಾಡಿದ ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು. ಸೊಸೈಟಿ ಆಫ್ ಆಟೋಮೋಟಿವ್ ಇಂಜಿನಿಯರ್ಸ್ ವ್ಯಾಖ್ಯಾನಿಸಿದಂತೆ ಸ್ಟೀರಿಂಗ್ ಚಕ್ರವನ್ನು ಹೊಂದಿರದ zPod 5 ನೇ ಹಂತದ ಸ್ವಾಯತ್ತತೆಯನ್ನು ನೀಡಲು […]

ಕೆ. ಆರ್.ಎಸ್ ನೀರಿನ ಮಟ್ಟ 80 ಅಡಿಗೆ ಕುಸಿತದ ಪರಿಣಾಮ ಶತಮಾನದ ಲಕ್ಷ್ಮೀ ನಾರಾಯಣಸ್ವಾಮಿ ದೇಗುಲ ಗೋಚರ

ಮಂಡ್ಯ:ಮಂಡ್ಯ ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ಏಪ್ರಿಲ್ 20 ರಂದು 90 ಅಡಿಗೆ ಕುಸಿದಿತ್ತು. ಇದೀಗ ಮತ್ತಷ್ಟು ಕುಸಿತ ಕಂಡಿದೆ. ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 80 ಅಡಿಗೆ ಕುಸಿದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಮುಂಗಾರು ಪೂರ್ವ ಅಕಾಲಿಕ ಮಳೆ ಕೊರತೆಯಿಂದ ಈ ಬಾರಿ ಜಲಾಶಯದ ನೀರಿನ ಮಟ್ಟದಲ್ಲಿ 22 ಅಡಿಗಳಷ್ಟು ಕಡಿಮೆ ನೀರು ಸಂಗ್ರಹವಾಗಿರುವುದು ಕಂಡುಬಂದಿದೆ. ಹಿನ್ನೀರಿನಲ್ಲಿ ಮುಳುಗಡೆ ಆಗಿದ್ದ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ದೇವಸ್ಥಾನ ಗೋಚರಿಸಿದೆ. ಜನರಲ್ಲಿ ಬರದ […]

ಸರ್ಕಾರದಿಂದ ಎಣ್ಣೆ ಪ್ರಿಯರಿಗೆ ಶಾಕ್​ ಶೇ. 20ರಷ್ಟು ಮದ್ಯದ ಬೆಲೆ ದಿಢೀರ್​ ಏರಿಕೆ

ಬೆಂಗಳೂರು: ರಾಜ್ಯದ ಜನರಿಗೆ ಐದು ಗ್ಯಾರಂಟಿ ಸಿಗುವ ಸಂತಸ ಒಂದೆಡೆಯಾದರೆ, ಮತ್ತೊಂದೆಡೆ ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಮೂಲಕ ಸರ್ಕಾರ ಶಾಕ್ ನೀಡಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಉಚಿತ ಐದು ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿರುವುದು ಒಂದೆಡೆ ಜನರಿಗೆ ಸಂತಸ ತಂದಿದೆ.   ಆದರೆ, ಇನ್ನೊಂದೆಡೆ ಉಚಿತ ನೆಪದಲ್ಲಿ ವಿದ್ಯುತ್ ಬೆಲೆ ಏರಿಕೆಯಾಗಿದೆ. ಜೊತೆಗೆ ಮದ್ಯ ಪ್ರಿಯರಿಗೂ ಶಾಕ್ ನೀಡಲಾಗಿದೆ. ಆದಾಯ ಸಂಗ್ರಹಿಸಲು ಸರ್ಕಾರ ಶೇ. 20 ರಷ್ಟು ಮದ್ಯದ ಬೆಲೆ ಏರಿಕೆ ಮಾಡಿದೆ. ನಿನ್ನೆಯಿಂದಲೇ […]

ಶಾಸಕ ಹರೀಶ್ ಪೂಂಜಾ ವಿರುದ್ದ ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪ ಸಂಬಂಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ತಮ್ಮ ವಿರುದ್ಧದ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಬಿಜೆಪಿ ಶಾಸಕ ಹರೀಶ್​ ಪೂಂಜಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ […]