ಇದೇ ಮೊದಲ ಬಾರಿಗೆ ತೆಲುಗಿನಲ್ಲೇ ತೆಲಂಗಾಣ ಹೈಕೋರ್ಟ್ ತೀರ್ಪು

ಹೈದರಾಬಾದ್ (ತೆಲಂಗಾಣ): ಹಿರಿಯ ನ್ಯಾಯಮೂರ್ತಿ ಪಿ.ನವೀನ್ ರಾವ್ ಮತ್ತು ನ್ಯಾಯಮೂರ್ತಿ ನಾಗೇಶ್ ಭೀಮಪಾಕ ಅವರನ್ನೊಳಗೊಂಡ ಪೀಠವು ಆಸ್ತಿ ವಿವಾದದ ಪ್ರಕರಣದಲ್ಲಿ ಮಂಗಳವಾರ ತೆಲುಗಿನಲ್ಲಿ 44 ಪುಟಗಳ ತೀರ್ಪು ಪ್ರಕಟಿಸಿದೆನ್ಯಾಯಾಂಗದ ತೀರ್ಪುಗಳು ಪ್ರಾದೇಶಿಕ ಭಾಷೆಗಳಲ್ಲೂ ಪ್ರಕಟವಾಗಬೇಕೆಂಬ ಬಲವಾದ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಇದರ ನಡುವೆ ಇದೇ ಮೊದಲ ಬಾರಿಗೆ ತೆಲಂಗಾಣ ಹೈಕೋರ್ಟ್ ತೆಲುಗಿನಲ್ಲೇ ತೀರ್ಪು ನೀಡುವ ಮೂಲಕ ಇತಿಹಾಸ ಸೃಷ್ಟಿಸಿದೆ. ಸ್ಥಳೀಯ ಭಾಷೆಗಳ ಪ್ರಾಮುಖ್ಯತೆಯನ್ನು ಗಮನಿಸಿ ಇತ್ತೀಚೆಗೆ ನ್ಯಾಯಾಲಯಗಳು ಮಾತೃಭಾಷೆಯತ್ತ ಒಲವು ತೋರಲು ಪ್ರಾರಂಭಿಸಿವೆ. ಸುಪ್ರೀಂ […]
ಕೆಜಿಎಫ್ ಹಾಡು ಹಕ್ಕುಸ್ವಾಮ್ಯ ಚ್ಯುತಿ ಆರೋಪ: ಕಾಂಗ್ರೆಸ್ ನಾಯಕರ ಮೇಲಿನ ಎಫ್ಐಆರ್ ವಜಾಗೊಳಿಸಲು ಕರ್ನಾಟಕ ಹೈಕೋರ್ಟ್ ನಕಾರ

ಬೆಂಗಳೂರು: ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ಕೆಜಿಎಫ್ ಅಧ್ಯಾಯ 2 ರ ಸಂಗೀತದ “ಅನಧಿಕೃತ” ಬಳಕೆ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರೀನಟೆ ವಿರುದ್ಧದ ಎಫ್ಐಆರ್ ಅನ್ನು ವಜಾಗೊಳಿಸಲು ಕರ್ನಾಟಕ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ನವೆಂಬರ್ 2022 ರಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ಕೆಜಿಎಫ್ ಅಧ್ಯಾಯ 2 ರ ಸಂಗೀತವನ್ನು ಅನಧಿಕೃತವಾಗಿ ಬಳಸಲಾಗಿದೆ ಎಂದು ಎಂ.ಆರ್.ಟಿ ಸಂಗೀತ ಕಂಪನಿ ನೀಡಿದ ದೂರಿನ […]
ಮಂಡ್ಯದ ಮೈಶುಗರ್ ಕಾರ್ಖಾನೆಯಿಂದ 40 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಾಕಿ

ಮಂಡ್ಯ :ಇತ್ತೀಚೆಗಷ್ಟೇ ಪುನರಾರಂಭಗೊಂಡ ಮಂಡ್ಯದ ಮೈಶುಗರ್ ಕಾರ್ಖಾನೆ ಕೋಟಿ ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ ಮಂಡ್ಯ ಮೈಶುಗರ್ ಕಾರ್ಖಾನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸದೇ ಇರುವುದರಿಂದ ವಿದ್ಯುತ್ ಬಾಕಿ ಮೊತ್ತ ಪಾವತಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ರಾಜ್ಯಾದ್ಯಂತ ವಿದ್ಯುತ್ ದರ ಏರಿಕೆಯಾಗಿದ್ದು ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯದ ಏಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆಯಾಗಿರುವ ಮೈಶುಗರ್ 2000ನೇ ಇಸವಿಯಿಂದಲೂ ಕರೆಂಟ್ ಬಿಲ್ ಕಟ್ಟದೇ 40 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ. ಕಾರ್ಖಾನೆಯ […]
ಜೀನ್ಸ್, ಟಿ ಶರ್ಟ್ ನಿಷೇಧ : ನೌಕರರಿಗೆ ಆದೇಶಿಸಿದ ಬಿಹಾರ ಶಿಕ್ಷಣ ಇಲಾಖೆ

ಪಾಟ್ನಾ (ಬಿಹಾರ): ಈ ಸಂಬಂಧ ಶಿಕ್ಷಣ ಇಲಾಖೆಯ ಆಡಳಿತದ ವಿಭಾಗದ ನಿರ್ದೇಶಕ ಸುಬೋಧ್ ಕುಮಾರ್ ಚೌಧರಿ ಬುಧವಾರ ಆದೇಶ ಹೊರಡಿಸಿದ್ದಾರೆ. ಕರ್ತವ್ಯದ ಸಂಸ್ಕೃತಿಗೆ ವಿರುದ್ಧವಾಗಿರುವ ಕಾರಣ ಕಚೇರಿಯಲ್ಲಿ ಜೀನ್ಸ್ ಮತ್ತು ಟಿ-ಶರ್ಟ್‌ಗಳಂತಹ ಕ್ಯಾಶುಯಲ್ ಬಟ್ಟೆಗಳನ್ನು ಧರಿಸದಂತೆ ಬಿಹಾರ ರಾಜ್ಯ ಶಿಕ್ಷಣ ಇಲಾಖೆಯ ಉದ್ಯೋಗಿಗಳಿಗೆ ಸೂಚಿಸಿದೆ. ಬಿಹಾರದ ಶಿಕ್ಷಣ ಇಲಾಖೆಯಲ್ಲಿ ಡ್ರೆಸ್ ಕೋಡ್ ನಿಯಮ ಜಾರಿ ಮಾಡಲಾಗಿದೆ. ಕಚೇರಿಗಳಿಗೆ ಜೀನ್ಸ್ ಮತ್ತು ಟಿ-ಶರ್ಟ್ ಧರಿಸಬರುವಂತಿಲ್ಲ ಎಂದು ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ನೌಕರರು ಕಚೇರಿಯ ಕರ್ತವ್ಯದ ಸಂದರ್ಭದಲ್ಲಿ ಫಾರ್ಮಲ್ […]
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ: ಮೈಸೂರು ಜಿಲ್ಲೆಯಲ್ಲಿ 19 ಬೆಳೆಗಳಿಗೆ ರೈತರು ಮಾಡಿಸಬಹುದು ಬೆಳೆ ವಿಮೆ

ಮೈಸೂರು: 2023 -24ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ – ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಕರ್ನಾಟಕ ಸರ್ಕಾರದ ವತಿಯಿಂದ ಜಾರಿಗೊಳಿಸುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ ಇದಕ್ಕೆ ನಾಳೆ ಅಂತಿಮ ದಿನವಾಗಿದೆ. ಜಿಲ್ಲೆಗೆ ಅಧಿಸೂಚನೆ ಮಾಡಿರುವ ಬೆಳೆಗಳ ವಿಮಾ, ವಿಮಾ ಕಂತು ಮತ್ತು ಅಂತಿಮ ನೊಂದಣಿ ದಿನಾಂಕದ ವಿವರ: ಎಳ್ಳಿನ ಬೆಳೆಗೆ (ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 11,635.13 ರೂ.ಗಳಿದ್ದು ವಿಮಾ ಕಂತು 232.70 ರೂ., ಸೂರ್ಯಕಾಂತಿ ಬೆಳೆಗೆ(ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ […]