ಸುಳ್ಳು ದೂರು ನೀಡಿರುವವರಿಗೆ ಜೈಲು ಶಿಕ್ಷೆ ವಿಧಿಸುವ ಅಧಿಕಾರ ಲೋಕಾಯುಕ್ತರಿಗಿದೆ: ಕೆ.ಎನ್. ಫಣೀಂದ್ರ ಹೇಳಿಕೆ

ಮೈಸೂರು: ಕೆಲವರು ಅನಾವಶ್ಯಕವಾಗಿ ಸುಳ್ಳು ದೂರುಗಳನ್ನು ದಾಖಲಿಸುವವರಿದ್ದಾರೆ. ಇಂದು ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಮಾತನಾಡಿದರು. ಆ ರೀತಿ ಸುಳ್ಳು ದೂರು ನೀಡುವವರಿಗೆ ಜೈಲು ಶಿಕ್ಷೆ ವಿಧಿಸಿ, ಕ್ರಮ ಕೈಗೊಳ್ಳುವ ಅಧಿಕಾರ ಲೋಕಾಯುಕ್ತರಿಗೆ ಇದೆ ಎಂದು ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ತಿಳಿಸಿದರು. ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ […]
ಕಾರವಾರದ ಜಲಂತರ್ಗಾಮಿ ನಿರೋಧಕ ನೌಕೆಗೆ ‘ಅಂಜುದೀವ್’ ದ್ವೀಪದ ಹೆಸರಿಟ್ಟ ನೌಕಾಪಡೆ

ಕಾರವಾರ: ಭಾರತೀಯ ನೌಕಾಪಡೆಗೆ ಹೊಸದಾಗಿ ನಿಯೋಜನೆಗೊಂಡಿರುವ ಜಲಾಂತರ್ಗಾಮಿ ನಿರೋಧಕ ನೌಕೆಗೆ ಕಾರವಾರ ಸಮೀಪದ ಐತಿಹಾಸಿಕ ಅಂಜುದೀವ್ ದ್ವೀಪದ ಹೆಸರಿಡಲಾಗಿದೆ. ಭಾರತೀಯ ನೌಕಾ ಸೇನೆಗೆ ಸೇರ್ಪಡೆಯಾಗುವ ನೌಕೆಗಳಿಗೆ ದೇಶದ ಪ್ರಮುಖ ಊರುಗಳ, ದ್ವೀಪಗಳ ಹೆಸರಿಡುವ ವಾಡಿಕೆ ಇದೆ. ಅಂತೆಯೇ ಭಾರತೀಯ ನೌಕಾಪಡೆಗೆ ಹೊಸದಾಗಿ ಸೇರ್ಪಡೆಯಾದ ಜಲಾಂತರ್ಗಾಮಿ ನಿರೋಧಕ ನೌಕೆಗೆ ಅಂಜುದೀವ್ ದ್ವೀಪದ ಹೆಸರಿಡಲಾಗಿದೆ. ಕೊಲ್ಕತ್ತಾ ಗಾರ್ಡನ್ ರಿಚ್ ಶಿಪ್‌ಬಿಲ್ಡ್ ಅಂಡ್ ಎಂಜಿನಿಯರ್ಸ್ ಎಂಬ ಕಂಪನಿಯಲ್ಲಿ ಹೆಚ್ಚಾಗಿ ದೇಸಿ ತಂತ್ರಜ್ಞಾನ ಹಾಗೂ ಉಪಕರಣ ಬಳಸಿ ನಿರ್ಮಾಣ ಮಾಡಲಾದ ನೌಕೆಯನ್ನು ಇತ್ತೀಚೆಗೆ […]
ಜಿ 20- ಕೃಷಿ ಮಂತ್ರಿಗಳ ಸಮ್ಮೇಳನದಲ್ಲಿ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಭಾಗಿ

ಹೈದರಾಬಾದ್: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಯವರು ಹೈದರಾಬಾದಿನಲ್ಲಿ ನಡೆಯುತ್ತಿರುವ ಜಿ 20- ಕೃಷಿ ಮಂತ್ರಿಗಳ ಸಮ್ಮೇಳನದಲ್ಲಿ ಭಾಗವಹಿಸಿದರು. ಭಾರತದ ಸಾರಥ್ಯದಲ್ಲಿ ವಸುದೈವ ಕುಟುಂಬಕಂ ಎಂಬ ಧ್ಯೇಯ ವಾಕ್ಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಿ20 ಶೃಂಗ ಸಭೆಯು ಭಾರತದಲ್ಲಿ ನಡೆಯುತ್ತಿದೆ. 3 ದಿನಗಳ ಕಾಲದ ಸಭೆಯಲ್ಲಿ ಜಿ20 ರಾಷ್ಟ್ರಗಳ ಕೃಷಿ ಸಚಿವರು ಹಾಗೂ ಕೃಷಿ ಕ್ಷೇತ್ರದ ಪರಿಣಿತರು ಮತ್ತು ವಿವಿಧ ರಾಷ್ಟ್ರಗಳ 200 ರಕ್ಕೂ ಅಧಿಕ […]
ಹೆಚ್.ಡಿ. ಕುಮಾರಸ್ವಾಮಿ, ಸಂಬಂಧಿಕರಿಂದ ಒತ್ತುವರಿ ಜಮೀನು ವಶಕ್ಕೆ ಪಡೆದ ವರದಿ ಸಲ್ಲಿಕೆಗೆ ಕಾಲಾವಕಾಶ ನೀಡಿದ ಸರ್ಕಾರ

ಬೆಂಗಳೂರು :ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಇತರರಿಂದ ಒತ್ತುವರಿಯಾಗಿದ್ದ ಸರ್ಕಾರಿ ಜಮೀನು ವಶಕ್ಕೆ ಪಡೆಯುವ ಸಂಬಂಧ ವರದಿ ಸಲ್ಲಿಸಲು ಹೈಕೋರ್ಟ್ ಸರ್ಕಾರಕ್ಕೆ ನಿಗದಿತ ಕಾಲಾವಕಾಶ ನೀಡಿದೆ. ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಕುಮಾರಸ್ವಾಮಿ ಕುಟುಂಬಸ್ಥರಿಂದ ಕಬಳಿಕೆಯಾಗಿದ್ದ ಒತ್ತುವರಿ ಜಮೀನು ವಶಕ್ಕೆ ಪಡೆಯಲು ಸೂಚಿಸಿದ್ದ ಹೈಕೋರ್ಟ್ ಆದೇಶ ಜಾರಿಗೊಳಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯವು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ನೇತೃತ್ವದ ವಿಭಾಗೀಯ ಪೀಠ […]
ಅಧಿಕಾರಿಗಳಿಗೆ 3 ತಿಂಗಳಲ್ಲಿ ಬೆಂಗಳೂರನ್ನು ಟ್ರಾಫಿಕ್ ಮುಕ್ತ ಸಿಟಿ ಮಾಡಿಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಗಡುವು

ಟ್ರಾಫಿಕ್ ಮುಕ್ತ ಸಿಟಿ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ಬೆಂಗಳೂರು : ಬೆಂಗಳೂರು ನಗರ ಸಂಚಾರ ದಟ್ಟಣೆಯಿಂದ ವಿಶ್ವಮಟ್ಟದಲ್ಲಿ ಅಪಖ್ಯಾತಿಗೆ ಒಳಗಾಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸುಧಾರಣೆಗೆ ಇದೇ ಮೊದಲ ಬಾರಿಗೆ ಡ್ರೋನ್ ಕ್ಯಾಮರಾ ಬಳಸಲಾಗುತ್ತಿದೆ. ಇನ್ನೊಂದೆಡೆ, ಗೃಹ ಸಚಿವ ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಗಡುವು ವಿಧಿಸಿದ್ದಾರೆ. ಹೀಗಾಗಿ ನಗರ ಸಂಚಾರ ದಟ್ಟಣೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಟ್ರಾಫಿಕ್‌ಮುಕ್ತ ನಗರ ಮಾಡಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ […]