NEET UG 2023 ಕೌನ್ಸೆಲಿಂಗ್‌ಗಾಗಿ ನೋಂದಣಿ ಪ್ರಕ್ರಿಯೆ ಪ್ರಾರಂಭ: ಅರ್ಜಿ ಸಲ್ಲಿಸುವ ವಿವರಗಳು ಇಲ್ಲಿವೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜುಲೈ 14 ರಂದು ಕರ್ನಾಟಕ NEET UG 2023 ಕೌನ್ಸೆಲಿಂಗ್‌ಗಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. UG ಕೌನ್ಸೆಲಿಂಗ್‌ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ಸೈಟ್ kea.kar.nic.in ಮೂಲಕ ಮಾಡಬಹುದು. ವೇಳಾಪಟ್ಟಿಯ ಪ್ರಕಾರ, ನೋಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 21. ನೋಂದಣಿ ಶುಲ್ಕವನ್ನು ಪಾವತಿಸಲು ಜುಲೈ 22 ಕೊನೆಯ ದಿನಾಂಕವಾಗಿದೆ. ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಮಾತ್ರ ಕನ್ನಡ ಭಾಷಾ ಪರೀಕ್ಷೆ ಜುಲೈ 25 […]
ಹಾಸನ: ಚಿರತೆಯೊಂದಿಗೆ ಸೆಣಸಿ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕಟ್ಟಿ ಅರಣ್ಯ ಇಲಾಖೆಗೆ ಒಪ್ಪಿಸಿದ ಮಗಧೀರ!!

ಹಾಸನ: ಜಿಲ್ಲೆಯ ವ್ಯಕ್ತಿಯೊಬ್ಬರು 9 ತಿಂಗಳ ಚಿರತೆ ಮರಿಯನ್ನು ತನ್ನ ದ್ವಿಚಕ್ರ ವಾಹನದ ಹಿಂಬದಿಗೆ ಕಟ್ಟಿಕೊಂಡು ಹೋಗುತ್ತಿರುವ ದೃಶ್ಯವೊಂದು ಕಂಡುಬಂದಿದೆ. ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರವಾಹನದಲ್ಲಿ ಚಿರತೆಯೊಂದನ್ನು ಕಟ್ಟಿಹಾಕಿ ಸವಾರಿ ಮಾಡುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಹಾಸನ ಜಿಲ್ಲೆಯ ಬಾಗಿವಾಳು ಗ್ರಾಮದ ವೇಣುಗೋಪಾಲ್ ಅಲಿಯಾಸ್ ಮುತ್ತು ಎಂದು ಗುರುತಿಸಲಾಗಿರುವ ಈ ಸವಾರ ತಾನು ಚಿರತೆಯನ್ನು ಅರಣ್ಯ ಇಲಾಖೆಗೆ ಕರೆದೊಯ್ಯುತ್ತಿದುದಾಗಿ ತಿಳಿಸಿದ್ದಾರೆ. ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಬಾಗೀವಾಳು ಗ್ರಾಮಕ್ಕೆ ನುಗ್ಗಿದ ಚಿರತೆ ಜಮೀನಿಗೆ ಹೋಗುತ್ತಿದ್ದ ಯುವಕನ ಮೇಲೆ […]
ದಸರಾಕ್ಕೂ ಮುಂಚೆ ಚಾಮುಂಡಿ ಬೆಟ್ಟ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಬೇಕು ಎಂದ ನ್ಯಾಯಮೂರ್ತಿ ಸುಭಾಷ್ ಬಿ ಅಡಿ

ಮೈಸೂರು: ಆಂಧ್ರಪ್ರದೇಶಕ್ಕೆ ತಿರುಪತಿ ಹೇಗೆ ಪ್ರಮುಖ, ಅದೇ ರೀತಿ ಕರ್ನಾಟಕಕ್ಕೆ ಚಾಮುಂಡಿಬೆಟ್ಟ ಅಷ್ಟೇ ಪ್ರಮುಖ. ಪರಿಸರವನ್ನು ಸಂರಕ್ಷಿಸುವಲ್ಲಿ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಚಾಮುಂಡಿ ಬೆಟ್ಟಕ್ಕೆ ಎಂಟ್ರಿಯಾಗುವ ಪ್ರದೇಶದಲ್ಲಿಯೇ ಪ್ಲಾಸ್ಟಿಕ್ ಕೊಂಡೊಯ್ಯದಂತೆ ಪರಿಶೀಲಿಸಬೇಕು. ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ಗಳ ಬಳಕೆ ನಿಷೇಧಿಸಿ, 20 ಲೀಟರ್ ಕ್ಯಾನ್ ನೀರನ್ನು ಪೇಪರ್ ಕಪ್ನಲ್ಲಿ ಬಳಸಬೇಕು ಎಂದು ಸೂಚಿಸಿದರು. ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ಎಲ್ಲ ಅಗತ್ಯವಾದ ಕ್ರಮಗಳನ್ನು ಕೈಗೊಂಡು, ದಸರಾ ಪ್ರಾರಂಭಕ್ಕೂ ಮುಂಚೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ […]
ಶಕ್ತಿ ಯೋಜನೆಯಿಂದ ವ್ಯಾಪಾರ ತತ್ತರ: ಖಾಸಗಿ ವಾಹನಗಳ ಮಾಲೀಕರ ಒಕ್ಕೂಟದಿಂದ ಪರಿಹಾರಕ್ಕೆ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ತಮ್ಮ ವ್ಯಾಪಾರಕ್ಕೆ ಶೇ 50ರಷ್ಟು ಹೊಡೆತ ಬಿದ್ದಿದೆ ಎಂದು ಆರೋಪಿಸಿರುವ ಕರ್ನಾಟಕ ಖಾಸಗಿ ವಾಹನಗಳ ಮಾಲೀಕರ ಒಕ್ಕೂಟವು ಸಾರಿಗೆ ನಿಗಮಗಳಿಗೆ ನೀಡಿದಂತೆ ತಮಗೂ ಪರಿಹಾರ ನೀಡದಿದ್ದಲ್ಲಿ ಜುಲೈ 28 ರಂದು ರಾಜ್ಯಾದ್ಯಂತ ಮುಷ್ಕರ ನಡೆಸುವುದಾಗಿ ಬೆದರಿಕೆ ಹಾಕಿದೆ. ಗುರುವಾರದಂದು ಮಾಧ್ಯಮಗಳೊಂದಿಗೆ ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ, ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡಿರುವುದು ನಮ್ಮ ವ್ಯಾಪಾರವನ್ನು ಹಾಳು ಮಾಡಿದೆ. ನಮ್ಮ ವ್ಯಾಪಾರವು ಸುಮಾರು […]
ಕೋಲಾರ: 2,000 ಬಾಕ್ಸ್ ಟೊಮೇಟೋ ಮಾರಾಟ ಮಾಡಿ 38 ಲಕ್ಷ ರೂ ಗಳಿಸಿದ ರೈತ ಕುಟುಂಬ!!

ಕೋಲಾರ: ದೇಶಾದ್ಯಂತ ಟೊಮೇಟೊ ಬೆಲೆ ಗಗನಕ್ಕೇರುತ್ತಿರುವ ನಡುವೆಯೇ ರಾಜ್ಯದ ಕೋಲಾರ ಜಿಲ್ಲೆಯ ರೈತರ ಕುಟುಂಬವೊಂದು ಟೊಮೇಟೋ ಬೆಳೆದು ಜಾಕ್ ಪಾಟ್ ಹೊಡೆದಿದೆ. ಈ ಕುಟುಂಬವು 2,000 ಬಾಕ್ಸ್ ಟೊಮೇಟೋಗಳನ್ನು 38 ಲಕ್ಷ ರೂ ಗಳಿಗೆ ಮಾರಾಟ ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ. ವರದಿಯ ಪ್ರಕಾರ, ಕೋಲಾರ ಜಿಲ್ಲೆಯ ಬೇತಮಂಗಲ ಗ್ರಾಮದ ಪ್ರಭಾಕರ ಗುಪ್ತಾ ಮತ್ತು ಅವರ ಸಹೋದರರು ತಮ್ಮ 40 ಎಕರೆ ಜಮೀನಿನಲ್ಲಿ ಟೊಮೇಟೋ ಬೆಳೆದಿದ್ದಾರೆ. ಪ್ರತಿ ಕೆಜಿ ಟೊಮೇಟೊ ಬಾಕ್ಸ್ ಅನ್ನು […]