ಬೊರಿವಲಿ: ಮಹಿಷಮರ್ಧಿನಿ ದೇವಸ್ಥಾನದಲ್ಲಿ ಅಜೆಕಾರು ಕಲಾಭಿಮಾನಿ ಬಳಗದಿಂದ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ

ಬೊರಿವಲಿ: ದೈವ ಸಂಭೂತ ಕಲೆ ಯಕ್ಷಗಾನ ತಾಳಮದ್ದಲೆಗಳು ದೇವಸ್ಥಾನದಲ್ಲಿ ಜರುಗಿದರೆ ಅದರ ಪ್ರಾಮುಖ್ಯತೆಯಿಂದ ಹೆಚ್ಚುತ್ತದೆ. ಯಕ್ಷಗಾನ ಕರಾವಳಿ ಸಂಸ್ಕೃತಿ ಪರಂಪರೆ ಇಂತಹ ಕಾರ್ಯಕ್ರಮಗಳು ದೇವಸ್ಥಾನದಂತಹ ಪುಣ್ಯ ಸ್ಥಳಗಳಲ್ಲಿ ಜರುಗುವುದರಿಂದ ಕಲಾವಿದರಿಗೆ ಕಲಾಮಾತೆಯ ಅನುಗ್ರಹವೂ ದೊರೆಯುವುದು. ಉತ್ತಮ ಕಥಾ ಪ್ರಸಂಗಗಳೊಂದಿಗೆ ಊರಿನ ವೈವಿಧ್ಯ ನುರಿತ ಕಲಾವಿದರನ್ನು ಮಹಾನಗರದ ಯಕ್ಷಗಾನ ಕಲಾಭಿಮಾನಿಗಳಿಗೆ ಪರಿಚಯಿಸುವ ಅಜೇಕಾರು ಕಲಾಭಿಮಾನಿ ಬಳಗದ ಸಂಯೋಜಕರಾದ ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ಕಾರ್ಯ ಸಾಧನೆ ಪ್ರಶಂಸನೀಯ ಎಂದು ಮಹಿಷಮರ್ಧಿನಿ ದೇವಸ್ಥಾನ ಜಯರಾಜ್ ನಗರ ಬೊರಿವಿಲಿ ಇದರ ಆಡಳಿತ ಮೋಕ್ತೆಸರ […]

26 ಪಕ್ಷಗಳ ಮೈತ್ರಿಕೂಟದ ಹೆಸರು INDIA ಎಂದು ಘೋಷಣೆ: ಈ ಬಾರಿಯ ಲೋಕಸಭೆ ಚುನಾವಣೆ NDA v/s INDIA ನಡುವೆ

ಬೆಂಗಳೂರು: ಮಂಗಳವಾರ ರಾಜ್ಯ ರಾಜಧಾನಿಯಲ್ಲಿ ನಡೆದ ಪ್ರತಿಪಕ್ಷಗಳ ನಾಲ್ಕು ಗಂಟೆಗಳ ಸುದೀರ್ಘ ಸಭೆಯ ಕೊನೆಯಲ್ಲಿ, 26 ಪಕ್ಷಗಳು ತಮ್ಮ ಮೈತ್ರಿಕೂಟದ ಹೆಸರನ್ನು INDIA ಎಂದು ಘೋಷಿಸಿಕೊಂಡವು. INDIA- Indian National Developmental, Inclusive Alliance (ಭಾರತೀಯ ರಾಷ್ಟ್ರೀಯ ಅಭಿವೃದ್ಧಿ, ಅಂತರ್ಗತ ಮೈತ್ರಿ). ಪ್ರತಿಪಕ್ಷಗಳು 2024 ರ ಚುನಾವಣಾ ಸ್ಪರ್ಧೆಯನ್ನು ಬಿಜೆಪಿ ಮತ್ತು ದೇಶದ ಉಳಿದ ಭಾಗಗಳ ನಡುವಿನ ಹೋರಾಟ ಎಂದು ರೂಪಿಸಿದ್ದು, ಮಂಗಳವಾರ ಬೆಳಗ್ಗೆ ಮುಖಂಡರು ಸಭೆಗೆ ಕುಳಿತುಕೊಳ್ಳುವ ಮುನ್ನವೇ ಹೆಸರನ್ನು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ. […]

ಹಿಂದಿನಿಂದ ಕಾರಿಗೆ ಡಿಕ್ಕಿ ಹೊಡೆದು ಹಾಗೆಯೇ ಎಳೆದೊಯ್ದ ಟಿಪ್ಪರ್

ಉಡುಪಿ: ಸ್ಯಾಂಟ್ರೋ ಕಾರನ್ನು ಕನ್ನಂಗಾರ್ ಬೈಪಾಸ್ ಬಳಿ ಟಿಪ್ಪರ್ ಹಿಂದಿನಿಂದ ಢಿಕ್ಕಿ ಹೊಡೆದು ಗಮನಿಸದೆ ಹೆಜಮಾಡಿಯ ಟೋಲ್ ಗೇಟ್ ವರೆಗೂ ಎಳೆದುಕೊಂಡು ಹೋಗಿರುವ ಪ್ರಸಂಗ ವರದಿಯಾಗಿದೆ. ಟಿಪ್ಪರ್ ಬೆಳ್ಮಣಿನಿಂದ ಬೈಕಂಪಾಡಿಗೆ ಸಾಗುತ್ತಿತ್ತು .ಕಾರು ಅಪಘಾತಕ್ಕೊಳಗಾದ ನಂತರ ಕಾರು ಸಿಲುಕಿಕೊಂಡದ್ದು ಗೊತ್ತಿಲ್ಲದ ಟಿಪ್ಪರ್ ಚಾಲಕ ಟಿಪ್ಪರನ್ನು ಚಲಾಯಿಸಿದ್ದಾನೆ. ಬೇರೊಂದು ಕಾರಿನವರು ಓವರ್ ಟೆಕ್ ಮಾಡಿ ನಿಲ್ಲಿಸಲು ಸೂಚಿಸಿದರೂ ಟಿಪ್ಪರನ್ನು ಚಲಾಯಿಸುತ್ತಲೇ ಇರುವ ದೃಶ್ಯ ವೈರಲ್ ಆಗಿದೆ. ಬೇರೆ ಕಾರಿನವರು ಹೇಳಿದ ಬಳಿಕ ಟಿಪ್ಪರ್ ಚಾಲಕ ಹೆಜಮಾಡಿಯಲ್ಲಿ ನಿಲ್ಲಿಸಿದ್ದಾನೆ. ಪಡುಬಿದ್ರಿ […]

ಲಡಾಖ್‌ನಲ್ಲಿ ಭಾನುವಾರ ಬೌದ್ಧ ಸನ್ಯಾಸಿಗಳ ಬೃಹತ್‌ ಶಾಂತಿ ನಡಿಗೆ; ಪ್ರಧಾನಿ ಮೋದಿ ಕರೆಗೆ ಶ್ಲಾಘನೆ

ಲಡಾಖ್: ಭಾರತದಲ್ಲಿ ಬೌದ್ಧ ಕ್ಷೇತ್ರಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ತೆಗೆದುಕೊಂಡ ಪ್ರಮುಖ ಕ್ರಮಗಳಿಗೆ ಬೌದ್ಧ ಸನ್ಯಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಬೌದ್ಧ ಸನ್ಯಾಸಿಗಳು ಭಾನುವಾರ ಲಡಾಖ್‌ನಲ್ಲಿ ಶಾಂತಿ ನಡಿಗೆಯಲ್ಲಿ ನಡೆಸಿದರು. ವಿಶ್ವ ಶಾಂತಿ ಮತ್ತು ಭಾರತದಲ್ಲಿ ಬೌದ್ಧ ಸ್ಥಳಗಳ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಯನ್ನು ಅವರು ಶ್ಲಾಘಿಸಿದರು. ಮಹಾಬೋಧಿ ಅಂತಾರಾಷ್ಟ್ರೀಯ ಧ್ಯಾನ ಕೇಂದ್ರದ (ಎಂಐಎಂಸಿ) ಸಂಸ್ಥಾಪಕ ಮತ್ತು ಅಧ್ಯಕ್ಷ ಭಿಕ್ಕು ಸಂಘಸೇನ ಶಾಂತಿ ಮೆರವಣಿಗೆ ಉದ್ದೇಶಿಸಿ ಮಾತನಾಡಿ, “ಇಡೀ ಜಗತ್ತು ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಶಾಂತಿ, […]

ಜುಲೈ 19 ರಿಂದ ಗೃಹ ಲಕ್ಷ್ಮಿ ಯೋಜನೆಯ ನೋಂದಣಿ ಪ್ರಾರಂಭ: ನೋಂದಾಯಿಸುವ ಮಾಹಿತಿ ಇಲ್ಲಿದೆ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯ ನೋಂದಣಿ ಜುಲೈ 19 ರಂದು ಪ್ರಾರಂಭವಾಗಲಿದೆ. ನೋಂದಣಿ ಉಚಿತವಾಗಿದ್ದು ಅರ್ಜಿ ಸಲ್ಲಿಸಲು ಯಾವುದೇ ಗಡುವು ಇಲ್ಲ. ಪಡಿತರ ಚೀಟಿಯಲ್ಲಿ (ಬಿಪಿಎಲ್, ಎಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳು) ನಮೂದಿಸಿರುವಂತೆ ಕುಟುಂಬದ ಮಹಿಳೆಯು ಅರ್ಹ ಫಲಾನುಭವಿಯಾಗುತ್ತಾರೆ. ಆದಾಗ್ಯೂ, ಮಹಿಳೆ ಅಥವಾ ಆಕೆಯ ಪತಿ ತೆರಿಗೆದಾರರಾಗಿರಬಾರದು (ಆದಾಯ ತೆರಿಗೆ ಅಥವಾ ಜಿಎಸ್ಟಿ ಪಾವತಿದಾರರು). ಈ ಯೋಜನೆಯ ಮೂಲಕ 1.28 ಕೋಟಿ ಕುಟುಂಬಗಳು ಪ್ರಯೋಜನ ಪಡೆಯಲಿವೆ. ಫಲಾನುಭವಿಯು ಪಡಿತರ ಚೀಟಿ […]