ಮಳೆಯಿಂದಾಗಿ ಜೋಗ ಜಲಪಾತಕ್ಕೆ ಜೀವಕಳೆ : ಪ್ರವಾಸಿಗರಿಗೆ ರಾಜಾ, ರಾಣಿ, ರೋರರ್, ರಾಕೆಟ್ ಮೋಡಿ

ಶಿವಮೊಗ್ಗ :ಇನ್ನು ಜಗತ್ ಪ್ರಸಿದ್ಧ ಜೋಗ ಜಲಪಾತಕ್ಕೆ ಮಳೆಯಿಂದ ಜೀವಕಳೆ ಬಂದಂತೆ ಆಗಿದೆ. ಜಿಲ್ಲೆಯಲ್ಲಿ ಮುಂಗಾರು ತಡವಾದರು ಸಹ ಸಣ್ಣದಾಗಿ ಪ್ರಾರಂಭಗೊಂಡಿದೆ. ಆದರೆ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಮಳೆ ಬಾರದೆ ಇದ್ದರೂ ಸಹ ವರುಣನ ಆಗಮನ ಮಲೆನಾಡ ರೈತರಿಗೆ ತುಸು ನೆಮ್ಮದಿ ತರಿಸಿದೆ. ಮುಂಗಾರು ಸುಮಾರು 40 ದಿನ ತಡವಾದರೂ ಜೋಗದಲ್ಲಿ ಶರಾವತಿ ಬಳಕುತ್ತಾ ಮೇಲಿಂದ ಧುಮ್ಮಿಕ್ಕುತ್ತಿದ್ದಾಳೆ. ರಾಜಾ, ರಾಣಿ, ರೋರರ್, ರಾಕೆಟ್ ಎಂಬ ನಾಲ್ಕು ಕವಲುಗಳಲ್ಲಿ 960 ಅಡಿ ಎತ್ತರದಿಂದ ಶರಾವತಿ ನದಿ ಕೆಳಕ್ಕೆ ಬಿದ್ದು ಮುಂದೆ […]

ಕಬಿನಿ ಬತ್ತಿದ ಕಾರಣ ಹಿನ್ನೀರಿನಲ್ಲಿ ಐತಿಹಾಸಿಕ ಪುರಾತನ ದೇವಾಲಯದ ಕುರುಹುಗಳ ಗೋಚರ

ಮೈಸೂರು : ಇದಕ್ಕೆ ನಿದರ್ಶನ ಎಂಬಂತೆ 10 ವರ್ಷಗಳ ನಂತರ ಮೈಸೂರು ಜಿಲ್ಲೆಯ ಬೀಚನಹಳ್ಳಿ ಸಮೀಪದಲ್ಲಿರುವ, ಕಬಿನಿ ಡ್ಯಾಂನಲ್ಲಿ ನೀರು ಸಂಪೂರ್ಣ ಕಡಿಮೆ ಆಗಿದ್ದು, ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ, ಐತಿಹಾಸಿಕ, ಪುರಾಣ ಪ್ರಸಿದ್ಧ ದೇವಾಲಯಗಳ ಕುರುಹುಗಳು ಪತ್ತೆಯಾಗಿವೆ.10 ವರ್ಷಗಳ ಕಬಿನಿಯ ಒಡಲು ಬರಿದಾಗುತ್ತಿದ್ದು, ಐತಿಹಾಸಿಕ ಪುರಾತನ ದೇವಾಲಯದ ಕುರುಹುಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು. ಬಹುತೇಕ ಜಲಾಶಯಗಳು 10 ವರ್ಷಗಳ ನಂತರ ಖಾಲಿಯಾಗಿವೆ. ಮತ್ತೊಂದೆಡೆ ಜಲಾಶಯಗಳ ಹಿನ್ನೀರಿನಲ್ಲಿ ಇರುವ ದೇವಾಲಯಗಳು ಈಗ ಗೋಚರಿಸುತ್ತಿವೆ‌. ಈ ಭಾಗದಲ್ಲಿದ್ದ ಪ್ರಾಚೀನ […]

ವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಕೆ

ಬೆಂಗಳೂರು: ವಿಧಾನ ಮಂಡಲದ ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿ ನಿರ್ಗಮಿಸಿದ ನಂತರ ಸದನವು ವಂದೇ ಮಾತರಂ ಗೀತೆ ನಡೆಸುವುದರೊಂದಿಗೆ ಸದನ ಮತ್ತೆ ಸಮಾವೇಶಗೊಂಡ ವೇಳೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರು, ಅಗಲಿದ ಗಣ್ಯರಿಗೆ ಸಂತಾಪ ಸೂಚನಾ ನಿರ್ಣಯ ಮಂಡಿಸಿದರು. ಮಾಜಿ ಶಾಸಕ, ಮಾಜಿ ಉಪಾಧ್ಯಕ್ಷ ಅಂಜನಾಮೂರ್ತಿ, ಮಾಜಿ ಸಂಸದ ಆರ್. ಧ್ರುವನಾರಾಯಣ, ಮಾಜಿ ಸಚಿವ ಡಿ.ಬಿ. ಇನಾಂದಾರ್, ಮಾಜಿ ಶಾಸಕ ಯು.ಆರ್. ಸಭಾಪತಿ, ಡಾ. ಕೆ. ಭುಜಂಗಶೆಟ್ಟಿ ಸೇರಿದಂತೆ ಇತ್ತೀಚೆಗೆ ಅಗಲಿದ ಎಂಟು ಮಂದಿ […]

ದಕ್ಷಿಣ ಕನ್ನಡದಲ್ಲಿ ವರ್ಷಕ್ಕೆ ಟನ್ ಗಟ್ಟಲೆ ಇಳುವರಿ ಪಡೆದು ವಿದೇಶಿ ಹಣ್ಣಗಳನ್ನು ಬೆಳೆಯುವ ಬೆಳೆಗಾರ

ಮಂಗಳೂರು : ಮೂಲತಃ ಬೆಂಗಳೂರಿನ ಪೀಣ್ಯ ನಿವಾಸಿಯಾಗಿರುವ ಲಕ್ಷ್ಮಣ್ ಹನ್ನೆರಡು ವರ್ಷಗಳ ಹಿಂದೆ ಕೃಷಿ ಮಾಡಲೆಂದೇ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದಾರೆ. ಮನಸು ಮಾಡಿದರೆ, ಬೆಂಗಳೂರಿನಲ್ಲಿ ಉದ್ಯಮ ನಡೆಸಿ ಹೆಚ್ಚು ಹಣ ಸಂಪಾದಿಸಬಹುದಿತ್ತು. ಆದರೆ, ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಕೃಷಿ ಮಾಡಿದರೆ ಹೇಗೆ ಎಂದುಕೊಂಡು ಬೆಳ್ತಂಗಡಿ ತಾಲೂಕಿನ ನೇತ್ರಾವತಿ ನದಿ ತಟದಲ್ಲಿರುವ ತೆಕ್ಕಾರು ಎನ್ನುವ ಹಳ್ಳಿಯಲ್ಲಿ ಸುಮಾರು 40 ಎಕರೆ ಜಾಗವನ್ನು ಖರೀದಿಸಿ ಕೃಷಿಯ ಕಸಿಗೆ ಇಳಿದಿದ್ದರು. ವಿದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಹಣ್ಣನ್ನು ಕರ್ನಾಟಕದಲ್ಲಿ ತಿನ್ನುವ […]

ಮಂಗಳೂರಿನ ಪಂಪ್‌ವೆಲ್‌ ಫ್ಲೈಓವರ್‌ ಅಂಡರ್‌ಪಾಸ್‌ ತೀವ್ರ ಮಳೆಯಿಂದ ಜಲಾವೃತ

ಮಂಗಳೂರು ನಗರದ ಹಲವೆಡೆ ಮಳೆ ನೀರಿನ ಕಾರಣ ಜನಜೀವನ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ ಪಂಪ್‌ವೆಲ್‌ ಫ್ಲೈಓವರ್‌ನ ಅಂಡರ್‌ ಪಾಸ್‌ ಜಲಾವೃತವಾಗಿ ಟಾಟಾ ಸುಮೋ ನೀರಿನಲ್ಲಿ ಸಿಲುಕಿದೆ ಕಳೆದ ಕೆಲ ದಿನಗಳಿಂದ ಮಂಗಳೂರಲ್ಲಿ ಸುರಿಯುತ್ತಿರುವ ಮಳೆ ತೀವ್ರಗೊಂಡಿದೆ. ಪಂಪ್ ವೆಲ್ ಫ್ಲೈಓವರ್ ನ ಅಂಡರ್ ಪಾಸ್ ಸಹಿತ ಸುತ್ತಮುತ್ತಲಿನ ಜಾಗಗಳಲ್ಲೆಲ್ಲಾ ಸೋಮವಾರ ನೀರು ತುಂಬಿ ವಾಹನ ಸವಾರರು ಪರದಾಡಬೇಕಾಯಿತು. ಕರ್ನಾಟಕದ ಕರಾವಳಿ ಭಾಗದಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು,ಪರಿಣಾಮ ಈ ರೀತಿಯಾಗಿದೆ