ಹೆಬ್ರಿ ತಾಲೂಕಿನಲ್ಲಿ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟ ಬಾಲಕಿ

ಕೃತಿಕಾ(3) ಮೃತ ಬಾಲಕಿ ಮಂಗಳವಾರ ರಾತ್ರಿ ಅಜ್ಜಿ ಮಂಜುಳಾ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಕತ್ತಲಲ್ಲಿ ರಸ್ತೆ ಪಕ್ಕದಲ್ಲಿರುವ ಹೊಂಡಕ್ಕೆ ಬಾಲಕಿ ಬಿದ್ದು ಬಾಲಕಿ ಸಾವನ್ನಪ್ಪಿದ್ದಾಳೆ. ಅಜ್ಜಿ ಜೊತೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಾಲಕಿ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಹೆಬ್ರಿ ತಾಲೂಕಿನ ನಾಲ್ಕೂರು ಗ್ರಾಮದ ಕಕ್ಕೆ ಅರಮನೆ ಜೆಡ್ಡು ಸಮೀಪ ನಡೆದಿದೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಕಾಸರಗೋಡು: ಸೌಟು ಹಿಡಿಯುವ ಕೈಗಳು ಬಸ್ ಸ್ಟೀರಿಂಗ್ ಕೂಡಾ ಹಿಡಿಯಬಹುದೆಂದು ತೋರಿದ ದಿಟ್ಟ ನಾರಿ ದೀಪಾ!!

ಕಾಸರಗೋಡು: ಶ್ರೀಕೃಷ್ಣ ಬಸ್ಸಿನ ಸ್ಟೀರಿಂಗ್ ಹಿಡಿದು ಯಾವುದೇ ಪುರುಷರಿಗೆ ಕಮ್ಮಿ ಇಲ್ಲದಂತೆ ಬಸ್ ಚಲಾಯಿಸುತ್ತಾರೆ ಆಡುಕಾತುವಾಯಲ್ ಮೂಲದ ಎನ್ ದೀಪಾ ಎಂಬ ದಿಟ್ಟ ನಾರಿ. ಮಹಿಳೆಯರು ಭಾರೀ ವಾಹನಗಳನ್ನು ಚಲಾಯಿಸಲು ಸಾಧ್ಯವಿಲ್ಲ ಎನ್ನುವ ಪೂರ್ವಾಗ್ರಹವನ್ನು ತೊಡೆದು ಹಾಕಿದ್ದಾರೆ 36 ವರ್ಷ ವಯಸ್ಸಿನ ದೀಪಾ. ಏರುತಗ್ಗಿನ ಗುಡ್ಡಗಾಡಿನ ವಕ್ರ ರಸ್ತೆಗಳಲ್ಲಿ ಪ್ರಯಾಣಿಕರಿಂದ ತುಂಬಿದ ಬಸ್ ಅನ್ನು ಸಲೀಸಾಗಿ ಓಡಿಸುವ ದೀಪಾ ತನ್ನ ಬಹುಕಾಲದ ಕನಸನ್ನು ನನಸಾಗಿಸಿದ್ದಾರೆ. ಇವರ ಕನಸಿಗೆ ಇಂಬು ನೀಡಿದವರು ಬಸ್ ಮಾಲಕ ನಿಶಾಂತ್. ಅನುಭವಿ ಮತ್ತು […]

ಜಲಪಾತಗಳ ವೀಕ್ಷಣೆಗೆ ವಿಶೇಷ ಬಸ್: ಶಕ್ತಿ ಯೋಜನೆಗಿಲ್ಲ ಅವಕಾಶ..

ಹುಬ್ಬಳ್ಳಿ: ಇತ್ತೀಚೆಗೆ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಪಾತಗಳ ವೀಕ್ಷಣೆಗಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಾರಾಂತ್ಯ ಹಾಗೂ ಸಾರ್ವಜನಿಕ ರಜಾ ದಿನಗಳಂದು ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.ಸಾರ್ವಜನಿಕರ ಬೇಡಿಕೆಯ ಮೇರೆಗೆ ಜಲಪಾತಗಳ ವೀಕ್ಷಣೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಾರಾಂತ್ಯ ಹಾಗೂ ರಜೆ ದಿನಗಳಂದು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ. ಪ್ರತಿ ಭಾನುವಾರ, 2ನೇ ಮತ್ತು 4ನೇ ಶನಿವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಈ ಬಸ್ಗಳ ಸೇವೆ […]

ಸಂಭಾವನೆ ಪಡೆಯದೆ ‘ನಂದಿನಿ’ ರಾಯಭಾರಿಯಾಗಿ ಶಿವಣ್ಣ.. 

ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ಕರ್ನಾಟಕ ಹಾಲು ಮಹಾಮಂಡಳಿಯ ನಂದಿನಿ ಬ್ರ್ಯಾಂಡ್ಗೆ ಇನ್ಮುಂದೆ ಡಾ. ಶಿವರಾಜ್ಕುಮಾರ್ ರಾಯಭಾರಿ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಲು ಹ್ಯಾಟ್ರಿಕ್‌ ಹೀರೋ ಶಿವರಾಜ್ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ. ನಂದಿನಿ ಉತ್ಪನ್ನಗಳ ಬ್ರ್ಯಾಂಡ್‌ ಅಂಬಾಸಿಡರ್ ಆಗಿ ಕನ್ನಡ ಚಿತ್ರರಂಗದ ಹ್ಯಾಟ್ರಿಕ್‌ ಹೀರೋ ಶಿವರಾಜ್ಕುಮಾರ್‌ ಅವರನ್ನು ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆ, ಕೆಎಂಎಫ್‌ ಅಧ್ಯಕ್ಷ ಎಸ್ ಭೀಮಾನಾಯ್ಕ ಅವರು ಡಾ.ಶಿವರಾಜ್‌ಕುಮಾರ್‌ ಅವರನ್ನು ಭೇಟಿ ಮಾಡಿ, ಹೂಗುಚ್ಛ ನೀಡಿ ಅಭಿನಂದಿಸಿದ್ದಾರೆ. ಹ್ಯಾಟ್ರಿಕ್‌ ಹೀರೋ ಶಿವ ರಾಜ್ಕುಮಾರ್‌ […]

ದುನಿಯಾ ವಿಜಯ್‌! -ಧರ್ಮಸ್ಥಳ ಬಗ್ಗೆ ವಿವಾದಿತ ಹೇಳಿಕೆ

ಸೌಜನ್ಯ ಕೊಲೆ ಪ್ರಕರಣ: ನ್ಯಾಯ ಸಿಗುವವರೆಗೂ ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಕೂಡದು ಅನ್ನಿಸುತ್ತಿದೆ- ನಟ ದುನಿಯಾ ವಿಜಯ ದುನಿಯಾ ವಿಜಯ್ ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು, ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ.ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಸೌಜನ್ಯ ಕೊಲೆ ಪ್ರಕರಣದ ನ್ಯಾಯ ಸಿಗುವವರೆಗೂ […]