ರಾಜ್ಯ ಸರ್ಕಾರದಿಂದ ಮಳೆ ಹಾನಿ ಪರಿಹಾರ ಪಾವತಿಗೆ ಆದೇಶ

ಬೆಂಗಳೂರು: ಪ್ರವಾಹದಿಂದ ರಾಜ್ಯದ ಹಲವೆಡೆ ಜನ, ಜಾನುವಾರುಗಳ ಸಾವು, ಮನೆ, ಬೆಳೆ ಹಾಗೂ ಸಾರ್ವಜನಿಕ ಮೂಲ ಸೌಕರ್ಯಗಳು ಹಾನಿಯಾಗಿತ್ತು. ಈ ಕುರಿತು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದರು. 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉಂಟಾದ ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ, ದುರಸ್ತಿ ಕಾರ್ಯಕ್ಕೆ ಹೆಚ್ಚಿನ ಪರಿಹಾರ ಪಾವತಿಸಲು ಸರ್ಕಾರ ಮಂಜೂರಾತಿ ನೀಡಿದೆ.ರಾಜ್ಯದಲ್ಲಿ ಈ ಬಾರಿ ಪ್ರವಾಹದಿಂದ ಮನೆ, ಬೆಳೆ ಹಾನಿಯಾದಂತಹ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ಪರಿಷ್ಕೃತ […]
ವಾಶ್ ರೂಂ ನಲ್ಲಿ ವೀಡಿಯೋ ಪ್ರಕರಣ: ರಾಜ್ಯಪಾಲರನ್ನು ಭೇಟಿಯಾಗಿ ವಿಶೇಷ ತನಿಖೆಗೆ ಮನವಿ ಸಲ್ಲಿಸಿದ ಕರಾವಳಿ ಶಾಸಕರು

ಬೆಂಗಳೂರು: ಇಲ್ಲಿನ ಪ್ಯಾರಾ ಮೆಡಿಕಲ್ ಕಾಲೇಜಿನ ವಾಶ್ ರೂಂನಲ್ಲಿ ನಡೆದ ವಿಡಿಯೋ ಚಿತ್ರೀಕರಣದ ನಿಷ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನು ವಿಶೇಷ ತನಿಖಾ ತಂಡದ ಸುಪರ್ದಿಗೆ ನೀಡುವಂತೆ ಕರಾವಳಿಯ ಶಾಸಕರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಶುಕ್ರವಾರದಂದು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಉಡುಪಿ ಜಿಲ್ಲೆಯ ಶಾಸಕರುಗಳಾದ ಯಶ್ ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ದ.ಕ ಜಿಲ್ಲೆಯ ಶಾಸಕರುಗಳಾದ ಭರತ್ […]
‘ರಾಜ್ಯ ಸರ್ಕಾರ’ದಿಂದ ಬಿಗ್ ಶಾಕ್: ‘ಫ್ರೀ ವಿದ್ಯುತ್’ ನಿರೀಕ್ಷೆಯಲ್ಲಿದ್ದವರಿಗೆ ಈ ತಿಂಗಳು ಕಟ್ಟಬೇಕು ‘ಬಿಲ್

ಬೆಂಗಳೂರು: ಜುಲೈ.27ರ ಒಳಗಾಗಿ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡವರಿಗೂ ವಿದ್ಯುತ್ ಉಚಿತವಿಲ್ಲದೇ, 100 ರಿಂದ 300ರವರೆಗೆ ವಿದ್ಯುತ್ ಬಿಲ್ ಬಾಕಿ ಕಟ್ಟುವಂತೆ ನೀಡಲಾಗಿದೆ. 200 ಯೂನಿಟ್ ವರೆಗೆ ಉಚಿತ ವಿದ್ಯುತ್. ಅದಕ್ಕಿಂತ ಹೆಚ್ಚು ಬಳಕೆ ಮಾಡಿದವರು ಸಂಪೂರ್ಣ ಬಿಲ್ ಕಟ್ಟಬೇಕು ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದ್ರೇ ಅದಕ್ಕೂ ಕಡಿಮೆ ಬಳಕೆ ಮಾಡಿದವರಿಗೂ ಬಿಲ್ ನೀಡಿ ಶಾಕ್ ನೀಡಲಾಗಿದೆ. ಜುಲೈ.27ರ ಒಳಗಾಗಿ ಗೃಹ ಜ್ಯೋತಿ ಯೋಜನೆಯ ( Gruha Jyoti Scheme ) ಅಡಿಯಲ್ಲಿ ಉಚಿತ ವಿದ್ಯುತ್ […]
‘ಲಾಲ್ ಬಾಗ್ ಪ್ಲವರ್ ಶೋ’ಗೆ ‘ ಮುಖ್ಯಮಂತ್ರಿ ಸಿದ್ಧರಾಮಯ್ಯ’ ಅವರಿಂದ ಚಾಲನೆ

ಬೆಂಗಳೂರು: ಬೆಂಗಳೂರಿನಲ್ಲಿ ಪ್ರಸಿದ್ಧ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ, ಚಾಲನೆ ನೀಡಿದ್ದಾರೆನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನಾ ದಿನ ಆರಂಭಗೊಂಡು ಸುಮಾರು ಒಂದು ವಾರಗಳ ಕಾಲ ನಡೆಯಲಿರುವಂತ ಲಾಲ್ ಬಾಗ್ ಫಲಪುಷ್ಪ ಪ್ರದರ್ಶಕ್ಕೆ, ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿದರು. . ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ, ಎಂ.ಎಲ್ಸಿಗಳಾದ ಗೋವಿಂದರಾಜು, ಟಿಎ ಶರವಣ ಉಪಸ್ಥಿತರಾಗಿದ್ದರು. ಇದೇ ಸಂದರ್ಭದಲ್ಲಿ ಕೆಂಗಲ್ ಹನುಮಂತಯ್ಯ […]
ಗಗನಕ್ಕೇರಿದ ಟೊಮೆಟೊ ಬೆಲೆ: ನಿಂಬೆಗೂ ಭಾರೀ ಡಿಮ್ಯಾಂಡ್
ಹುಬ್ಬಳ್ಳಿ : ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ.ಟೊಮೆಟೊಗೆ ಬಂಗಾರದ ಬೆಲೆ ಬರುತ್ತಿದ್ದಂತೆ ಗ್ರಾಹಕರು ಕೂಡ ಪರ್ಯಾಯ ಮಾರ್ಗ ಕಂಡುಕೊಳ್ಳುತ್ತಿದ್ದಾರೆ.ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಹೀಗಾಗಿ, ಗ್ರಾಹಕರು ಅಡುಗೆಗೆ ಪರ್ಯಾಯ ಮಾರ್ಗವನ್ನು ಕಂಡುಕೊಂಡಿದ್ದಾರೆ. ನಗರದಲ್ಲಿ ಕೆಜಿ ಬೆಂಡೆಕಾಯಿಗೆ 80 ರೂಪಾಯಿ, ಮೆಣಸಿನಕಾಯಿ 100 ರೂಪಾಯಿ, ಬಜ್ಜಿ ಮೆಣಸಿನಕಾಯಿ 60 ರೂಪಾಯಿ, ಶುಂಠಿ(ಕೆಜಿ) 400 ರೂಪಾಯಿ, ಮೂಲಂಗಿ 40 ರೂಪಾಯಿ, ಆಲೂಗಡ್ಡೆ 40 ರೂಪಾಯಿ, ನವಿಲುಕೋಸು 60 ರೂಪಾಯಿ, ಬೀನ್ಸ್ 180 ರೂಪಾಯಿ, ಹಾಗಲಕಾಯಿ […]