ಶೀಘ್ರದಲ್ಲಿಯೇ ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ವಿಲೀನ: ಸಚಿವ ವಿ. ಸೋಮಣ್ಣ

ಚಿತ್ರದುರ್ಗ: ಶೀಘ್ರದಲ್ಲಿಯೇ ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲಾಗುವುದು ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಶನಿವಾರ ಹೇಳಿದ್ದಾರೆ. ಕೇಂದ್ರ ಸಚಿವನಾದ ಕೂಡಲೇ ಈ ವಿಷಯವನ್ನು ಕೈಗೆತ್ತಿಕೊಂಡಿದ್ದು, ಮಂಗಳೂರಿನಲ್ಲಿ ಸಭೆ ನಡೆಸಿದ್ದೆ. ಕೊಂಕಣ ರೈಲ್ವೆಗಳನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವಂತೆ ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದ್ದು, ಈ ನಿಟ್ಟಿನಲ್ಲಿ ಕೆಲಸಗಳಾಗುತ್ತಿವೆ ಎಂದರು. ಕೊಂಕಣ ರೈಲ್ವೆ ನಿಗಮದ ಕಾರ್ಯಾಚರಣೆಗೆ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಕಠಿಣ ಪರಿಶ್ರಮ […]

ಯುಎಇ ಅಥ್ಲೆಟಿಕ್ಸ್‌: ಕರ್ನಾಟಕದ ಕರಿಶ್ಮಾ ಗೆ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ

ದುಬೈ: ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಆಗಿರುವ ಯುಎಇ ಅಥ್ಲೆಟಿಕ್ಸ್‌ ವಿಮೆನ್ಸ್ ಗಾಲಾ ಕೂಟದಲ್ಲಿ ಕರ್ನಾಟಕದ ಕರಿಶ್ಮಾ ಸನಿಲ್ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಭಾನುವಾರ ನಡೆದ ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಕರಿಶ್ಮಾ 53.33 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಾಂಪಿಯನ್ ಎನಿಸಿಕೊಂಡರು. ಉಳಿದಂತೆ ಲಾಂಗ್‌ ಜಂಪ್‌ನಲ್ಲಿ ಭಾರತದ ಆ್ಯನ್ಸಿ ಸೋಜನ್ (6.54 ಮೀ.) ಚಿನ್ನ ಗೆದ್ದರೆ, ಶೈಲಿ ಸಿಂಗ್ (6.48 ಮೀ.) ಬೆಳ್ಳಿ ಪಡೆದರು.

ಭಾರತ- ಪಾಕ್ ನಡುವೆ ಇಂದಿನಿಂದ ಸಂಜೆ 5 ಗಂಟೆಯಿಂದ ಕದನ ವಿರಾಮ ದೃಢಪಡಿಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ

ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮವನ್ನು ಭಾರತ ದೃಢಪಡಿಸಿದೆ. ಸಂಜೆ 5 ಗಂಟೆಯಿಂದ ಕದನ ವಿರಾಮ ಜಾರಿಗೆ ಬರಲಿದೆ. ಎರಡು ದೇಶಗಳ ನಡುವೆ ನೇರವಾಗಿ ಒಪ್ಪಂದಕ್ಕೆ ಬಂದಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿರುವ ಬಗ್ಗೆ ವರದಿಯಾಗಿದೆ. ಇದಕ್ಕೂ ಮೊದಲು ಭಾರತ ಮತ್ತು ಪಾಕಿಸ್ತಾನ ತಕ್ಷಣದ ಕದನ ವಿರಾಮವನ್ನು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್‌ ಮಾಡಿದ್ದರು.

Ind-Pak War: ಭಾರತದ ದಾಳಿಗೆ ರಾತ್ರೋ ರಾತ್ರಿ ಪಾಕಿಸ್ತಾನದ ಮೂರು ಏರ್ ಬೇಸ್ ಉಡಿಸ್- ಮೇ 14ರವರೆಗೆ ಉತ್ತರ ಭಾರತದಲ್ಲಿ ವಿಮಾನಯಾನ ಸಂಪೂರ್ಣ ಸ್ಥಗಿತ

ನವದೆಹಲಿ: ಕಳೆದ 48 ಗಂಟೆಯಲ್ಲಿ ಪಾಕ್ ನಿಂದ ಭಾರತದ 36 ನಗರಗಳು ಟಾರ್ಗೆಟ್ ನಲ್ಲಿದ್ದು 20 ನಗರಗಳ ಮೇಲೆ ಡ್ರೋನ್, ಶೆಲ್ ದಾಳಿ ನಡೆಯುತ್ತಲೇ ಇದೆ. ದಾಳಿಯನ್ನು ಭಾರತೀಯ ಸೇನೆ ತಡೆಯುತ್ತಲೇ ಇದೆ (Ind-Pak War).ಭಾರತೀಯ ಕಾಲಮಾನದಂತೆ ಮದ್ಯರಾತ್ರಿ 2 ಗಂಟೆಗೆ ಪಾಕಿಸ್ತಾನದ ಲಾಹೋರ್ ನ ಸೇನೆಯ ಡಿಎಚ್ಎ ಬಳಿ ಭಾರಿ ಪ್ರಮಾಣದ ಸ್ಪೋಟದ ಸದ್ದಾಗಿದೆ. ಸ್ವಲ್ಪ ಸಮಯದ ನಂತರ ಪಾಕಿಸ್ತಾನದ ವಾಯುಸೇನೆಯ ಏರ್ ಬೇಸ್ ಗಳಾದ ರಾವಲ್ಪಿಂಡಿಯ ನೂರ್ ಖಾನ್ ಏರ್ ಬೇಸ್ ಚಕ್ಲಾಲ, ಪಂಜಾಬ್ […]

ಹೊಸದಿಲ್ಲಿ:’ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಬೆನ್ನಲ್ಲೇ ಕೇಂದ್ರ ಸಚಿವ ಸಂಪುಟ ಸಭೆ ನಡೆಸಿದ ಪ್ರಧಾನಿ ಮೋದಿ,ಇಂದು ಸರ್ವಪಕ್ಷ ಸಭೆಗೆ ಕರೆ

ಹೊಸದಿಲ್ಲಿ: “ಆಪರೇಷನ್‌ ಸಿಂದೂರ’ ನಡೆಸಿ ಪಾಕಿಸ್ಥಾನದ ಮೇಲೆ “ಉಗ್ರ ಪ್ರತೀಕಾರ’ ತೀರಿಸಿ­ಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರ, ಇನ್ನಷ್ಟು ದಾಳಿ ನಡೆಸಲಿದೆಯೇ?ಇಂತಹದೊಂದು ಕುತೂಹಲಕ್ಕೆ ಕಾರಣವಾಗಿರುವುದು ಸ್ವತಃ ಮೋದಿ ನಡೆಸುತ್ತಿರುವ ಸರಣಿ ಸಭೆಗಳು ಹಾಗೂ ಮೋದಿ ಪ್ರಭಾ ವಲಯ ದಲ್ಲಿರುವ ಜನಪ್ರತಿನಿಧಿ ಹಾಗೂ ಮಾಜಿ ಸೇನಾ ಮುಖ್ಯಸ್ಥರ ಹೇಳಿಕೆಗಳು. ಮಂಗಳವಾರ ತಡರಾತ್ರಿಯ ದಾಳಿ ಬೆನ್ನಲ್ಲೇ ಬುಧವಾರ ತಮ್ಮ ಸಂಪುಟ ಸಭೆ ನಡೆಸಿರುವ ಮೋದಿ, ಗುರುವಾರ ಸರ್ವಪಕ್ಷ ಸಭೆ ಕರೆದಿದ್ದಾರೆ. ದಾಳಿ ಕುರಿತ ವಿವರ ನೀಡಲು ಈ […]